Advertisement
ಶ್ವೇತೇ ವೃಕ್ಷೇ ಸಮಾರೂಢಾ ಶ್ವೇತಾಂಬರಧರಾ ಶುಚಿಃ |ಮಹಾಗೌರೀ ಶುಭಂ ದದ್ಯಾತ್ ಮಹಾದೇವ ಪ್ರಮೋದದಾ ||
“”ಬಿಳಿಯ ವಸ್ತ್ರ, ಬಿಳಿಯ ಆಭರಣಗಳನ್ನು ಹೊಂದಿರುವ ಈ ದೇವಿಯು ಶುಭ್ರವಾದ ಶ್ವೇತವರ್ಣದವಳಾಗಿದ್ದಾಳೆ. ಎಂಟು ವರ್ಷದ ಕನ್ಯೆ ಇವಳು. ಚತುಭುìಜದಲ್ಲಿ, ಮೇಲಿನ ಬಲಹಸ್ತ ಅಭಯಮುದ್ರೆಯಲ್ಲಿದೆ. ಕೆಳಗಿನ ಬಲಹಸ್ತದಲ್ಲಿ ತ್ರಿಶೂಲವನ್ನು ಹಿಡಿದಿದ್ದಾಳೆ. ಮೇಲಿನ ಎಡಹಸ್ತದಲ್ಲಿ ಡಮರು, ಕೆಳಗಿನ ಎಡಹಸ್ತದಲ್ಲಿ ವರಮುದ್ರೆಯನ್ನು ಧರಿಸಿದ್ದಾಳೆ. ಅತ್ಯಂತ ಶಾಂತಸ್ವರೂಪ ಈಕೆಯದು. ಈ ದೇವಿಯ ವಾಹನ ವೃಷಭ.”
ಮಹಾಗೌರಿಯ ಕುರಿತು ಅನೇಕ ಕಥೆಗಳಿವೆ. ಒಂದು ಕಥೆಯ ಪ್ರಕಾರ, ಪಾರ್ವತಿ ಶಿವನನ್ನು ಪತಿಯನ್ನಾಗಿ ಪಡೆಯಲೆಂದು ಘೋರ ತಪಸ್ಸನ್ನು ಕೈಗೊಂಡಳು. ಆ ಸಮಯದಲ್ಲಿ ಅವಳ ದೇಹ ಚಳಿ-ಬಿಸಿಲು, ಮಳೆ-ಧೂಳಿಗೆ ಒಳಗಾಯಿತು. ಆದ ಕಾರಣ ಅವಳ ಮೈಬಣ್ಣ ಕಪ್ಪಾಗಿತ್ತು. ಅನೇಕ ವರ್ಷಗಳ ತಪಸ್ಸಿನ ಅನಂತರ, ಸಂತುಷ್ಟನಾದ ಪರಶಿವನು ಪ್ರತ್ಯಕ್ಷನಾಗಿ ಅವಳ ವರವನ್ನು ಈಡೇರಿಸಿದೆ. ಆ ಸಮಯದಲ್ಲು ಅವನ ಜಟೆಯಿಂದ ಹೊರಬಂದ ಗಂಗೆಯು ಪಾರ್ವತಿ ದೇವಿಯ ಮೈಯನ್ನು ಶುಚಿಗೊಳಿಸಿ ದಿವ್ಯಕಾಂತಿಯನ್ನು ನೀಡಿತು. ಆದ್ದರಿಂದ ಇವಳನ್ನು ಮಹಾಗೌರಿ ಎಂದು ಕರೆಯುತ್ತಾರೆ. ಗೌರ ಎಂದರೆ ಬಿಳಿ ಬಣ್ಣ.
ಮಹಾಗೌರಿಯನ್ನು ಪೂಜಿಸುವುದರಿಂದ ಸಮಸ್ತ ಶ್ರೇಯಸ್ಸೂ ದೊರೆಯುವುದು. ಅನೇಕ ಅಲೌಕಿಕ ಸಿದ್ಧಿಗಳೂ ಲಭಿಸುತ್ತವೆ.
ಅಧ್ಯಕ್ಷರು, ರಾಮಕೃಷ್ಣ ವೇದಾಂತ ಕೇಂದ್ರ, ಐರ್ಲೆಂಡ್