Advertisement

Navaratri Special Story; ಉದ್ಯಾವರ: ನವರಾತ್ರಿ ಗೊಂಬೆ ಆರಾಧನೆಯ 51ರ ಮೆರುಗು

09:50 AM Oct 18, 2023 | Team Udayavani |

ಕಟಪಾಡಿ: ನವರಾತ್ರಿಯ ಪುಣ್ಯ ಪರ್ವಕಾಲದಲ್ಲಿ ಗೊಂಬೆಯನ್ನು ಆರಾಧಿಸುವ ಆಚರಣೆಯು ಉದ್ಯಾವರ ಸಂಪಿಗೆನಗರ ಯು. ವಾಸುದೇವ ಭಟ್‌ ಅವರ ಮನೆಯಲ್ಲಿ ಕಾಣಸಿಗುತ್ತಿದೆ.

Advertisement

ಪೂರ್ವಜರಿಂದಲೂ ಈ ಗೊಂಬೆ ಆರಾಧನೆಯ ಪದ್ಧತಿಯು ಆರಂಭಗೊಂಡಿದ್ದು, ಇದೀಗ ನಾಲ್ಕನೇ ಪೀಳಿಗೆಗೆ ಮುಂದುವರೆಯುತ್ತಿದ್ದು, ಗೊಂಬೆ ಆರಾಧನೆಗೆ 51 ವರ್ಷಗಳು ತುಂಬಿದೆ.

ಸಾವಿರಕ್ಕೂ ಅಧಿಕ ಬೊಂಬೆಗಳು ಇಲ್ಲಿ ಜೊತೆಗಿರಿಸಿ ಆರಾಧಿಸುತ್ತಿದ್ದು, ನವರಾತ್ರಿಯ ಆರಂಭದಲ್ಲಿ ಕಲಶವನ್ನು ಏರಿಸಿ ದುರ್ಗೆಯ ಬೊಂಬೆಯನ್ನು ಇರಿಸಿ ಪೂಜಿಸಿ ಸಂಜೆ ಮಹಿಳೆಯರು ಜೊತೆ ಸೇರಿ ಸಂಗೀತ ಭಜನೆಯೊಂದಿಗೆ ಆರತಿ ಬೆಳಗಿಸುವುದು ಪೂಜಾ ಸಂಪ್ರದಾಯವಾಗಿದೆ.

ಶಾಲೆ ವಿದ್ಯಾರ್ಥಿಗಳ ದಂಡು ಇದರ ವೀಕ್ಷಣೆಗಾಗಿಯೇ ಬರವುದರ ಜೊತೆಗೆ ಸಾರ್ವಜನಿಕರೂ ಇದನ್ನು ಕಂಡು ಭಕ್ತ ಭಾವನೆಯನ್ನು ಪ್ರಕಟಿಸುವುದು ಕಂಡು ಬರುತ್ತಿದೆ.

ವಿಶೇಷವಾಗಿ ಧರ್ಮ ಸಂದೇಶವನ್ನು ಸಾರುವಂತಹ ವಿಶ್ವ ರೂಪ ದರ್ಶನ, ರಾವಣ ದರ್ಬಾರು, ಅರಗಿನ ಅರಮನೆ, ದಶಾವತಾರ, ಗಜೇಂದ್ರ ಮೋಕ್ಷ, ಶ್ರೀ ರಾಮನ ಪಟ್ಟಾಭಿಷೇಕ, ಆಚಾರ್ಯ ಭೀಷ್ಮರ ಶರಶಯ್ಯೆ ವಿಶೇಷವಾಗಿ ಗಮನ ಸೆಳೆಯುತ್ತಿದ್ದು, ರಷ್ಯಾ, ಕೌಲಾಲಂಪುರ, ಮಲೇಷ್ಯಾ, ದುಬೈ ಸಹಿತ ವಿದೇಶದಲ್ಲಿಯೂ ಖರೀದಿಸಿ ಗೊಂಬೆಗಳು ಆಕರ್ಷಿಸುತ್ತಿದೆ.

Advertisement

ಹಳೆ ಮೈಸೂರು, ಕೇರಳ, ತಮಿಳುನಾಡು, ಆಂಧ್ರ ರಾಜ್ಯಗಳಲ್ಲಿ ಕಂಡು ಬರುವ ಗೊಂಬೆ ಆರಾಧನೆಯು ಉಡುಪಿ ಉದ್ಯಾವರದಲ್ಲಿ 51ರ ಸಂಭ್ರಮ ಕಾಣುತ್ತಿದೆ.

ತಂದೆಯ ಕಾಲದಿಂದಲೂ ಆರಾಧಿಸಿಕೊಂಡು ಬರಲಾಗುತ್ತಿದೆ. ಸಿಂಡಿಕೇಟ್‌ ಬ್ಯಾಂಕ್‌ ಉದ್ಯೋಗಿಯಾಗಿದ್ದ ಸಂದರ್ಭ 1972ರಲ್ಲಿ ಹೈದರಾಬಾದ್‌ನಲ್ಲಿ ಆರಂಭಿಸಲಾಗಿದ್ದ ಈ ಗೊಂಬೆ ಆರಾಧನೆಯು ವರ್ಗಾವಣೆಗೊಂಡು ತೆರಳಿದ ಊರುಗಳಲ್ಲಿಯೂ ಪೂಜೆಯನ್ನು ಮುಂದುವರೆಸುತ್ತಾ ಬಂದಿದ್ದು, ತೆರಳಿದ ಊರುಗಳಲ್ಲಿ ಮನೆಯವರೆಲ್ಲರೂ ಗೊಂಬೆಯನ್ನು ಖರೀದಿಸುತ್ತಾ ಬಂದಿದ್ದು ಸಂಗ್ರಹಿಸಲಾಗಿದೆ.

ಈ ಬಾರಿ ರಷ್ಯಾದಿಂದ ಆಗಮಿಸಿದ ಪುತ್ರ ಮೆಕ್ಯಾನಿಕಲ್‌ ಇಂಜಿನಿಯರ್‌ ಮುರಳಿಕೃಷ್ಣ ನಿರ್ಮಿಸಿದ  ಚಾಮುಂಡಿ ಬೆಟ್ಟಿ, ವನ, ಕೆಆರ್‌ಎಸ್‌ ಡ್ಯಾಂ ವಿಶೇಷ ಆಕರ್ಷಣೆ ಆಗಿದೆ –ಯು. ವಾಸುದೇವ ಭಟ್‌, ಸಂಪಿಗೆನಗರ, ಉದ್ಯಾವರ

-ವಿಜಯ ಆಚಾರ್ಯ ಉಚ್ಚಿಲ

Advertisement

Udayavani is now on Telegram. Click here to join our channel and stay updated with the latest news.

Next