Advertisement
ಬೋಳಾರ ಹಳೆಕೋಟೆ ಶ್ರೀ ಮಾರಿಯಮ್ಮ ಮಹಿಷಮರ್ದಿನಿ ದೇವಸ್ಥಾನದದಲ್ಲಿ ಗುರುವಾರ ರಾತ್ರಿ ರಥೋತ್ಸವ ನಡೆಯಿತು. ವಿಜಯದಶಮಿ ಪ್ರಯುಕ್ತ ಶ್ರೀ ಸರಸ್ವತಿ ಪೂಜೆಯೊಂದಿಗೆ ವಿದ್ಯಾರಂಭ ನಡೆಯಿತು. ದೇರೆಬೈಲ್ ತೋಟದಮನೆ ಶ್ರೀ ದುರ್ಗಾಪರಮೇಶ್ವರಿ ನಾಗಕನ್ನಿಕಾ ದೇವಸ್ಥಾನ, ದೇರೆಬೈಲ್ ಕಲ್ಬಾವಿ ಬನ ಶ್ರೀ ಶ್ರೀಕುರು ಅಂಬಾರಾಜರಾಜೇಶ್ವರಿ ಸುಬ್ರಹ್ಮಣ್ಯ ದೇವಸ್ಥಾನ, ಪೊಲೀಸ್ ಲೇನ್ ಶ್ರೀ ದೇವಿ ದೇವಸ್ಥಾನ, ತೋಡ್ಲಮಜಲು ಶ್ರೀ ದುರ್ಗಾಚಾಮುಂಡೇಶ್ವರೀ ಕ್ಷೇತ್ರ, ಮರಕಡ ಶ್ರೀ ಗುರು ಪರಾಶಕ್ತಿ ಮಠ, ಶ್ರೀ ಪರಾಶಕ್ತಿ ದೇಗುಲ ಸಮುಚ್ಚಯ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ಆಯುಧ ಪೂಜೆಯೊಂದಿಗೆ ನವರಾತ್ರಿ ಕೊನೆಗೊಂಡಿತು. ಶುಕ್ರವಾರ ವಿಜಯದಶಮಿಯ ಪ್ರಯುಕ್ತ ವಿವಿಧ ಪೂಜಾವಿಧಿಗಳು ಜರಗಿದವು.
ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಶುಕ್ರವಾರ ಬೆಳಗ್ಗೆ ರಾತ್ರಿ ರಥೋತ್ಸವ ಜರಗಿತು. ಅ. 20ರಂದು ನವರಾತ್ರಿ ಮಹೋತ್ಸವದ ಸಮಾರೋಪದ ಅಂಗವಾಗಿ ಸಭಾ ಕಾರ್ಯಕ್ರಮ ನಡೆಯಲಿದೆ. ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶನಿವಾರ ನವರಾತ್ರಿ ಸಮಾರೋಪಗೊಳ್ಳಲಿದೆ.