Advertisement

ವಿವಿಧ ದೇವಸ್ಥಾನಗಳಲ್ಲಿ ನವರಾತ್ರಿ ಸಂಭ್ರಮ

02:07 AM Oct 18, 2020 | sudhir |

ಉಡುಪಿ/ಮಂಗಳೂರು: ವಿಶೇಷವಾಗಿ ದೇವಿ ದೇವಸ್ಥಾನಗಳಲ್ಲಿ ಶನಿವಾರ ನವರಾತ್ರಿ ಉತ್ಸವ ಆರಂಭ ಗೊಂಡಿತು. ಮಂದಾರ್ತಿ, ಕಡಿಯಾಳಿ, ಕನ್ನರ್ಪಾಡಿ, ಬೈಲೂರು, ನಂದಿಕೂರು, ನೀಲಾವರ, ಕೋಟ ಅಮೃತೇಶ್ವರಿ, ಪುತ್ತೂರು, ಇಂದ್ರಾಣಿ, ದೊಡ್ಡಣಗುಡ್ಡೆ ದುರ್ಗಾ ಆದಿಶಕ್ತಿ ಕ್ಷೇತ್ರ, ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನ, ಕೊಲ್ಲೂರು ಶ್ರೀ ಮೂಕಾಂಬಿಕಾ ಮೊದಲಾದ ದೇವಸ್ಥಾನಗಳಲ್ಲಿ ಇನ್ನು ಒಂಬತ್ತು ದಿನಗಳ ಕಾಲ ವಿಶೇಷ ಪೂಜೆಗಳು ನಡೆಯಲಿವೆ.

Advertisement

ಕೊರೊನಾ ಕಾರಣದಿಂದಾಗಿ ಜಿಲ್ಲಾ ಡಳಿತ ಸೂಚಿಸಿದ ಮೇರೆಗೆ ಮುಜರಾಯಿ ದೇವಸ್ಥಾನಗಳು ಹಲವು ನಿರ್ಬಂಧಗಳನ್ನು ಪಾಲಿಸಿಕೊಂಡು ಧಾರ್ಮಿಕ ಕಾರ್ಯ ಕ್ರಮಗಳನ್ನು ನಡೆಸುತ್ತಿವೆ. ಈಗಾಗಲೇ ದಾಸೋಹ ಆರಂಭಗೊಂಡ ದೇವಸ್ಥಾನ ಗಳು ಹೊರತುಪಡಿಸಿ ಇತರ ದೇವಸ್ಥಾನಗಳಲ್ಲಿ ದಾಸೋಹವನ್ನು ನಡೆಸದಿರಲು ಜಿಲ್ಲಾಡಳಿತ ಸೂಚಿಸಿದಂತೆ ಕೆಲವು
ದೇವಸ್ಥಾನಗಳಷ್ಟೇ ಅನ್ನ ಸಂತರ್ಪಣೆ ಯನ್ನು ನಡೆಸಿವೆ.

ದೇವಸ್ಥಾನ, ಮನೆಗಳಲ್ಲಿ ಸಪ್ತಶತಿ ಪಾರಾಯಣ, ದೀಪ ನಮಸ್ಕಾರ, ವಿವಿಧ ಹೋಮಗಳು ನಡೆದವು. ದೇವಿ ದೇವಸ್ಥಾನ ಗಳಲ್ಲಿ ವಿಶೇಷ ಅಲಂಕಾರಗಳನ್ನು ಮಾಡಲಾಗಿತ್ತು. ಕೊರೊನಾ ಇರುವ ಕಾರಣ ಇಷ್ಟು ವರ್ಷಗಳ ರೀತಿ ಭಕ್ತರ ಆಗಮನ ಇದ್ದಿರಲಿಲ್ಲ. ಶ್ರೀಕೃಷ್ಣ ಮಠದಲ್ಲಿ ಸಂಪ್ರ ದಾಯದಂತೆ ನವರಾತ್ರಿ ಸಂದರ್ಭ ಶ್ರೀಕೃಷ್ಣನಿಗೆ ದೇವಿ ಅಲಂಕಾರ ಮತ್ತು ದೇವಿಗೆ ಸಂಬಂಧಿಸಿದ ಹೋಮಹವನ ಗಳನ್ನು ನಡೆಸಲಾಗುತ್ತದೆ.

ಕೊಲ್ಲೂರಿನಲ್ಲಿ ನವರಾತ್ರಿ ಉತ್ಸವಕ್ಕೆ ಚಾಲನೆ
ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದಲ್ಲಿ ಶನಿವಾರ ಬೆಳಗ್ಗೆ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ದೇಗುಲದ ತಂತ್ರಿ ರಾಮಚಂದ್ರ ಅಡಿಗ ಅವರ ನೇತೃತ್ವದಲ್ಲಿ ಗಣಪತಿ ಪ್ರಾರ್ಥನೆಯೊಡನೆ ಶ್ರೀ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಶತರುದ್ರಾಭಿಷೇಕ ನಡೆಯಿತು. ನವರಾತ್ರಿ ಕಲಶ ಸ್ಥಾಪನೆಯೊಡನೆ ಪೂಜೆಗೆ ಚಾಲನೆ ನೀಡಲಾಯಿತು.
ದೇಲರಾ§ನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಸುತಗುಂಡಿ, ಆಡಳಿತ ಮಂಡಳಿಯ ಮಾಜಿ ಅಧ್ಯಕ್ಷ ಕೃಷ್ಣಪ್ರಸಾದ ಅಡ್ಯಂತಾಯ, ಮಾಜಿ ಸದಸ್ಯ ಕಿಶೋರ್‌ ಹೆಗ್ಡೆ, ಗಜಾನನ ಜೋಯಿಸ್‌, ದೇಗುಲದ ಅಧೀಕ್ಷಕ ರಾಮಕೃಷ್ಣ ಅಡಿಗ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next