ಮುಂಬಯಿ, ಅ. 22: ಬಂಟರ ಸಂಘ ಮುಂಬಯಿ ಇದರ ಕುರ್ಲಾ ಪೂರ್ವದ ಬಂಟರ ಭವನದ ಸಂಕೀರ್ಣದಲ್ಲಿರುವ ಶ್ರೀ ಮಹಾವಿಷ್ಣು ದೇವಸ್ಥಾನದ ಜ್ಞಾನ ಮಂದಿ ರದಲ್ಲಿ ವಾರ್ಷಿಕ ಶರನ್ನವರಾತ್ರಿ ಮಹೋ ತ್ಸವವು ಅ. 17ರಂದು ಪ್ರಾರಂಭಗೊಂಡಿದ್ದು, 26ರ ವರೆಗೆ ವಿವಿಧ ಧಾರ್ಮಿಕ ಕಾರ್ಯ ಕ್ರಮಗಳೊಂದಿಗೆ ಜರಗಲಿದೆ.
ಬಂಟರ ಸಂಘದ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ ಮತ್ತು ಪದಾಧಿಕಾರಿಗಳ ಮಾರ್ಗ ದರ್ಶನದಲ್ಲಿ ಶ್ರೀ ಮಹಾವಿಷ್ಣು ದೇವ ಸ್ಥಾನ ಜ್ಞಾನ ಮಂದಿರ ಸಮಿತಿಯ ಕಾರ್ಯಾಧ್ಯಕ್ಷ ರವೀಂದ್ರನಾಥ ಎಂ. ಭಂಡಾರಿ ಮತ್ತು ಸಮಿ ತಿಯ ನೇತೃತ್ವದಲ್ಲಿ, ಕೊಯ್ಯೂರು ಬ್ರಹ್ಮಶ್ರೀ ನಂದಕುಮಾರ್ ತಂತ್ರಿ ಮತ್ತು ವಿದ್ವಾನ್ ಅರವಿಂದ ಬನ್ನಿಂತಾಯರ ಪೌರೋಹಿ ತ್ಯ ದೊಂದಿಗೆ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಲಾಯಿತು.
ಸಂಘದ ಮಹಿಳಾ ವಿಭಾಗ, ಯುವ ವಿಭಾಗ, ಸಂಘದ ಶಿಕ್ಷಣ ಸಂಸ್ಥೆಗಳು, ಸಂಘದ ವಿಶ್ವಸ್ಥರು, ಮಾಜಿ ಅಧ್ಯಕ್ಷರು, ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು, ಪ್ರಾದೇಶಿಕ ಸಮಿತಿಗಳು ವಿಶೇಷ ಸಹಕಾರದೊಂದಿಗೆ ನವರಾತ್ರಿ ಉತ್ಸವವು ಜರಗುತ್ತಿದೆ.
ಶ್ರೀಕ್ಷೇತ್ರದಲ್ಲಿ ಪ್ರತಿದಿನ ಪೂಜೆ, ದುರ್ಗಾ ನಮಸ್ಕಾರ, ದುರ್ಗಾಹೋಮ ಇನ್ನಿತರ ಪೂಜೆಗಳನ್ನು ಸೇವಾ ರೂಪದಲ್ಲಿ ಆಯೋಜಿಸ ಲಾಗಿದೆ. ಅ. 17ರಂದು ಬೆಳಗ್ಗೆ 9.30ರಿಂದ ದುರ್ಗಾ ಹೋಮವು ಹರೀಶ್ ಶೆಟ್ಟಿ ದಂಪ ತಿಯ ಸೇವಾರ್ಥ ನಡೆಯಿತು. ಸಂಜೆ 6ರಿಂದ ದುರ್ಗಾ ನಮಸ್ಕಾರ ಪೂಜೆಯು ಸಂಘದ ಉನ್ನತ ಶಿಕ್ಷಣ ಸಂಸ್ಥೆಯ ನೇತೃತ್ವದಲ್ಲಿ ನೆರ ವೇರಿತು. ಅ. 18ರಂದು ಬೆಳಗ್ಗೆ 9.30ಕ್ಕೆ ಜಗನ್ನಾಥ ರೈ ದಂಪತಿ ವತಿಯಿಂದ ದುರ್ಗಾಹೋಮ, ಸಂಜೆ 6ರಿಂದ ಸಂಘದ ಎಸ್. ಎಂ. ಶೆಟ್ಟಿ ಸಮೂಹ ಶಿಕ್ಷಣ ಸಂಸ್ಥೆಯ ವತಿ ಯಿಂದ ದುರ್ಗಾ ನಮಸ್ಕಾರ ಪೂಜೆ ಜರಗಿತು.ಅ. 19ರಂದು ಸಂಜೆ 6ರಿಂದ ಬಂಟರ ಸಂಘದ ಮಹಿಳಾ ವಿಭಾಗದ ವತಿಯಿಂದ ದುರ್ಗಾ ನಮಸ್ಕಾರ ಪೂಜೆ, ಅ. 20ರಂದು ಸಂಜೆ 6ರಿಂದ ಕೃಷ್ಣ ವಿ. ಶೆಟ್ಟಿ ದಂಪತಿಯ ವತಿಯಿಂದ ದುರ್ಗಾ ನಮಸ್ಕಾರ ಪೂಜೆ, ಅ. 21ರಂದು ಬೆಳಗ್ಗೆ 8.30ರಿಂದ ಚಂಡಿಕಾ ಯಾಗದ ಸೇವಾರ್ಥಿಗಳಾಗಿ ಸಿಎ ಸಂಜೀವ ಶೆಟ್ಟಿ ದಂಪತಿ ಸಹಕರಿಸಿದರೆ, ಸಂಜೆ 6ರಿಂದ ಚಂದ್ರಹಾಸ ರೈ ಬೊಳ್ನಾಡುಗುತ್ತು ಅವರ ಸೇವಾರ್ಥಕವಾಗಿ ದುರ್ಗಾನಮಸ್ಕಾರ ಪೂಜೆ ನೆರವೇರಿತು.
ಅ. 22ರಂದು ಸಂಜೆ 6ರಿಂದ ರವಿನಾಥ್ ವಿ. ಶೆಟ್ಟಿ ಅಂಕಲೇಶ್ವರ ಇವರಿಂದ ಸೇವಾ ರೂಪದಲ್ಲಿ ದುರ್ಗಾ ನಮಸ್ಕಾರ ಪೂಜೆ ನೆರವೇರಿತು.
ಲಾಕ್‌ಡೌನ್ ಮಾರ್ಗ ಸೂಚಿ ಯಂತೆ ಕಾರ್ಯಕ್ರಮ : ಅ. 23ರಂದು ಸಂಜೆ 6ರಿಂದ ಪ್ರಸಾದ್ ಶೆಟ್ಟಿ ಅಂಗಡಿಗುತ್ತು ದಂಪತಿಯಿಂದ ದುರ್ಗಾನಮಸ್ಕಾರ ಪೂಜೆ, ಅ. 24ರಂದು ಸಂಜೆ 6ರಿಂದ ಡಾ| ತಿಲಕ್ ಶೆಟ್ಟಿ ದಂಪತಿ ವತಿ ಯಿಂದ ದುರ್ಗಾನಮಸ್ಕಾರ ಪೂಜೆ, ಅ. 25ರಂದು ಸಂಜೆ 6ರಿಂದ ನಡೆಯಲಿ ರುವ ದುರ್ಗಾ ನಮಸ್ಕಾರ ಪೂಜೆಯ ಸೇವಾರ್ಥಿ ಗಳಾಗಿ ರತ್ನಾಕರ ಶೆಟ್ಟಿ ಮುಂಡ್ಕೂರು ದಂಪತಿ ಸಹಕರಿಸಲಿದ್ದಾರೆ. ಅ. 26ರಂದು ಬೆಳಗ್ಗೆ 9.30ರಿಂದ ಐಕ್ಯ ಹೋಮ, ಸಂಜೆ 6ರಿಂದ ದುರ್ಗಾ ರಂಗ ಪೂಜೆ ನಡೆಯಲಿದ್ದು, ರವೀಂದ್ರನಾಥ ಎಂ. ಭಂಡಾರಿ ದಂಪತಿಯು ಸೇವೆಯನ್ನು ನಡೆಸಿ ಕೊಡ ಲಿ ದ್ದಾರೆ. ಕೊರೊನಾ ಮಹಾ ಮಾರಿ ಮತ್ತು ಲಾಕ್‌ಡೌನ್ ಮಾರ್ಗ ಸೂಚಿ ಗಳನ್ನು ಅನುಸರಿಕೊಂಡು ನವರಾತ್ರಿ ಉತ್ಸವವು ಜರಗುತ್ತಿದ್ದು, ಸಂಘದ ಪದಾಧಿ ಕಾರಿ ಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ವಿಭಾಗ, ಯುವ ವಿಭಾಗ, ವಿವಿಧ ಉಪಸಮಿತಿಗಳು, ಪ್ರಾದೇ ಶಿಕ ಸಮಿತಿ ಗಳ ಪದಾಧಿಕಾರಿಗಳು, ಕಾರ್ಯ ಕಾರಿ ಸಮಿ ತಿಯ ಸದಸ್ಯರು, ಸಮಾಜ ಬಾಂಧ ವರು, ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾಗುತ್ತಿದ್ದಾರೆ.