Advertisement

ನವಮಂಗಳೂರು ಬಂದರು: ಪ್ರಥಮ ಬ್ರೇಕ್‌ ಬಲ್ಕ್ ಗೋಡಂಬಿ ಆಮದು

01:23 AM Feb 07, 2020 | mahesh |

ಪಣಂಬೂರು: ಕಡಿಮೆ ವೆಚ್ಚದಲ್ಲಿ ಮೊದಲ ಬಾರಿಗೆ ತಾಂಜಾನಿಯಾದಿಂದ ನವಮಂಗಳೂರು ಬಂದರು ಮೂಲಕ ಬೃಹತ್‌ ಹಡಗಿನಲ್ಲಿ ಮಂಗಳೂರಿಗೆ 22,000 ಟನ್‌ ಕಚ್ಚಾ ಗೋಡಂಬಿ ಫೆ. 7ರಂದು ಶುಕ್ರವಾರ ಆಗಮಿಸಲಿದೆ.

Advertisement

ಈ ಹಿಂದೆ ಗೋಡಂಬಿ ಕಂಟೈನರ್‌ ಮೂಲಕ ಬರುತ್ತಿತ್ತು. ಆಗ ಗೇರುಬಿಜವು ತೇವಾಂಶ ಹೀರಿಕೊಂಡು ಗುಣಮಟ್ಟ ಕುಸಿಯುವ ಭೀತಿ ಇತ್ತು. ಆದರೆ ಈ ಬಾರಿ ಬ್ಯಾಗೇಜ್‌ ಆಗಿ ಬ್ರೇಕ್‌ ಬಲ್ಕ್ ಮೂಲಕ ಹಡಗಿನಲ್ಲಿ ತುಂಬಿಸಿ ತರಲಾಗುತ್ತಿದೆ. ಇದರಿಂದ ಕಚ್ಚಾ ಗೋಡಂಬಿಯ ಗುಣಮಟ್ಟದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ ಹಾಗೂ ನಿರ್ವಹಣಾ ವೆಚ್ಚವೂ ಕಡಿಮೆಯಾಗುತ್ತದೆ.

ಮಂಗಳೂರಿನ ಎಂಎಂಪಿಎಸ್‌ನ ಮಾಲಕ ಎಂ. ನರಹರಿ ಪ್ರಭು ಮಾಲಕತ್ವದ ಕಂಪೆನಿ ಆಮದು ಮಾಡಿಕೊಳ್ಳುತ್ತಿದೆ. ಜ. 28ರಂದು ತಾಂಜಾನಿಯಾದಿಂದ ಹಡಗು ಯಾನ ಆರಂಭಿಸಿದ್ದು ಹತ್ತು ದಿನದಲ್ಲಿ ನವಮಂಗಳೂರು ಬಂದರು ತಲುಪುತ್ತಿದೆ. ಅಮೋಘ ಶಿಪ್ಪಿಂಗ್‌ ಸರಕು ನಿರ್ವಹಣೆ ಮಾಡಲಿದೆ.

ಮಂಗಳೂರು ಬಂದರು ಮೂಲಕ ಇದೇ ಪ್ರಥಮ ಬಾರಿಗೆ ಬ್ರೇಕ್‌ ಬಲ್ಕ್ ಮೂಲಕ ಕಚ್ಚಾ ಗೋಡಂಬಿ ಆಮದಾಗುತ್ತಿದೆ. ಟ್ಯಾನ್‌ಲಾಂಗ್‌ ವಿಯೆಟ್ನಾಂ ಕಂಪೆನಿ ಪ್ರಥಮ ಬಾರಿಗೆ ಬೃಹತ್‌ ಕಚ್ಚಾ ಗೋಡಂಬಿಯನ್ನು ಭಾರತಕ್ಕೆ ತರಿಸುತ್ತದೆ. ದ.ಕ., ಉಡುಪಿ ಜಿಲ್ಲೆಗಳಲ್ಲಿ ಮತ್ತು ಕೇರಳ, ಮಹಾರಾಷ್ಟ್ರ ರಾಜ್ಯಗಳ ಗೋಡಂಬಿ ಕಾರ್ಖಾನೆಗಳಿಗೆ ನಾನು ವಿತರಿಸುತ್ತಿದ್ದೇನೆ.
– ಎಂ. ನರಹರಿ ಪ್ರಭು, ಮಾಲಕರು, ಎಂಎಂಪಿಎಸ್‌

Advertisement

Udayavani is now on Telegram. Click here to join our channel and stay updated with the latest news.

Next