Advertisement
ಗ್ರಾ.ಪಂ. ವತಿಯಿಂದ ಕೂರಾಡಿಯಲ್ಲಿರುವ ಬಾವಿಯ ನೀರನ್ನು ಸುಮಾರು ಹದಿನೈದು ವರ್ಷಗಳಿಂದ ಪೂರೈಸಲಾಗುತ್ತಿದೆ. ಆದರೆ ಈ ನೀರು ಹಾಲಿಗೆ ಹಾಕಿದಾಗ ಹಾಲು ಹಾಳಾಗುತ್ತಿದೆ.
ನವಗ್ರಾಮದ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರವಾಗಿ ಕಿಂಡಿ ಅಣೆಕಟ್ಟು ಬಳಿ ಶುದ್ಧ ನೀರು ದೊರೆಯುವಲ್ಲಿ ಬಾವಿ ರಚಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಅಲ್ಲಿಯ ತನಕ ಟ್ಯಾಂಕರ್ ನೀರನ್ನು ಪೂರೈಸಬೇಕಾಗಿ ಮನವಿ ಮಾಡಿದ್ದಾರೆ.
Related Articles
ಬೇಸಗೆಯಲ್ಲಿ ಶುದ್ಧ ನೀರಿನ ಎರಡೂ ಬಾವಿ ಆರುವುದರಿಂದ ಅನಿವಾರ್ಯವಾಗಿ ಕೂರಾಡಿಯ ಬಾವಿಯಿಂದ ಕಲುಷಿತ ನೀರನ್ನೇ ಪೂರೈಸಲಾಗುತ್ತಿದೆ. ಅದೂ ಸಹ 3 ದಿನಕ್ಕೊಮ್ಮೆ ದೊರೆಯುತ್ತಿದೆ.
Advertisement