Advertisement

ನವ ಚಿತ್ತಾಪುರ ನಿರ್ಮಾಣ ಯಾತೆ

12:54 PM Mar 20, 2018 | Team Udayavani |

ಚಿತ್ತಾಪುರ: ಕಾಂಗ್ರೆಸ್‌ನ ನವ ಚಿತ್ತಾಪುರ ನಿರ್ಮಾಣ ಹಾಗೂ ಪಗ್ರತಿಗಾಗಿ ಕಾರ್ಯಕ್ರಮ ಮಾ. 20ರಂದು ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಉದ್ಘಾಟಿಸಲಿದ್ದಾರೆ. ಪಟ್ಟಣದ ಅಮರಾವತಿ (ರಾಯಲ್‌ ಮೈದಾನ)ದಲ್ಲಿ ನವ ಚಿತ್ತಾಪುರ ನಿರ್ಮಾಣ ಹಾಗೂ ಪಗ್ರತಿಗಾಗಿ ಪ್ರಿಯಾಂಕ್‌ ಖರ್ಗೆ ಕಾರ್ಯಕ್ರಮ ನಡೆಯಲಿದೆ.

Advertisement

ಬೆಳಗ್ಗೆ 11:00ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ, ಐಟಿ-ಬಿಟಿ ಮತ್ತು ಪ್ರವಾಸೋದ್ಯಮ ಸಚಿವ ಪ್ರಿಯಾಂಕ್‌ ಖರ್ಗೆ ಪಟ್ಟಣದ ಯರಗಲ್‌ ಕ್ರಾಸ್‌ನಿಂದ ಮೆರವಣಿಗೆಗೆ ಚಾಲನೆ ನೀಡುವರು. ಮೆರವಣಿಗೆ ಪಟ್ಟಣದ ಯರಗಲ್‌ ಕ್ರಾಸ್‌ನಿಂದ ಕೋರ್ಟ್‌ ರಸ್ತೆ, ಲಾಡ್ಜಿಂಗ್ ಕ್ರಾಸ್‌, ಬಸವೇಶ್ವರ ವೃತ್ತ, ಬಸ್‌ ನಿಲ್ದಾಣ, ಅಂಬೇಡ್ಕರ್‌ ವೃತ್ತ, ಭುವನೇಶ್ವರಿ ಚೌಕ್‌, ಕಪಡಾ ಬಜಾರ್‌, ಚಿತ್ತಾವಲಿ ಚೌಕ್‌ ಮೂಲಕ ಸಾಗಿ ವೇದಿಕೆಗೆ ತಲುಪಲಿದೆ.
 
ವೇದಿಕೆಯಲ್ಲಿ ಪ್ರಗತಿಗಾಗಿ ಪ್ರಿಯಾಂಕ್‌ ಖರ್ಗೆ ಎಂಬ ಲಾಂಛನ ಹಾಗೂ ಪುಸ್ತಕವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಬಿಡುಗಡೆ ಮಾಡಲಿದ್ದಾರೆ. ಐಟಿ-ಬಿಟಿ ಮತ್ತು ಪ್ರವಾಸೋದ್ಯಮ ಖಾತೆ ಸಚಿವ ಸಚಿವ ಪ್ರಿಯಾಂಕ್‌ ಖರ್ಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಕಾಂಗ್ರೆಸ್‌ ಪಕ್ಷದ ಜಿಪಂ ಸದಸ್ಯರು, ತಾಪಂ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರು, ಪುರಸಭೆ ಅಧ್ಯಕ್ಷೆ, ಉಪಧ್ಯಕ್ಷ ಹಾಗೂ ಸದಸ್ಯರು, ಎಪಿಎಂಸಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರು, ವಾಡಿ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರು, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರು, ಎಸ್‌ಸಿ-ಎಸ್‌ಟಿ ಘಟಕದ ಅಧ್ಯಕ್ಷರು, ತಾಲೂಕಿನ ಪ್ರತಿಯೊಂದು ಗ್ರಾಮದ ಮುಖಂಡರು ಹಾಗೂ ಕಾರ್ಯಕರ್ತರು ಸೇರಿದಂತೆ ಜಿಲ್ಲಾಧ್ಯಕ್ಷರು, ಬ್ಲಾಕ್‌ ಕಾಂಗ್ರೆಸ್‌ನ ತಾಲೂಕು ಅಧ್ಯಕ್ಷರು, ಯುವ ಕಾಂಗ್ರೆಸ್‌ ತಾಲೂಕು ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.

ಪಟ್ಟಣದ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಒಬ್ಬರು ಡಿವೈಎಸ್ಪಿ, ಮೂವರು ಸಿಪಿಐ, ನಾಲ್ವರು ಪಿಎಸ್‌ಐ, 17 ಜನ ಎಎಸ್‌ಐ, 41 ಜನ ಎಚ್‌ಸಿ-ಪಿಸಿ, 54 ಜನ ಪಿಸಿ, 8 ಜನ ಮಹಿಳಾ ಪೇದೆ ಒಳಗೊಂಡು ಸೂಕ್ತ ರೀತಿಯಲ್ಲಿ ಪೊಲೀಸ್‌ ಬಿಗಿ ಭದ್ರತೆ ಒದಗಿಸಲಾದೆ.

ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹಾಕಲಾಗಿರುವ ಬ್ಯಾನರ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕಸಭೆ ಸದಸ್ಯ ಡಾ| ಮಲ್ಲಿಕಾರ್ಜುನ ಖರ್ಗೆ, ಐಟಿ-ಬಿಟಿ ಮತ್ತು ಪ್ರವಾಸೋದ್ಯಮ ಖಾತೆ ಸಚಿವ ಪ್ರಿಯಾಂಕ್‌ ಖರ್ಗೆ ಹಾಗೂ ರಾಜಕೀಯ ಗಣ್ಯರ ಭಾವಚಿತ್ರಗಳು ರಾರಾಜಿಸುತ್ತಿವೆ. ನವ ಚಿತ್ತಾಪುರ ನಿರ್ಮಾಣ ಹಾಗೂ ಪಗ್ರತಿಗಾಗಿ ಪ್ರಿಯಾಂಕ್‌ ಖರ್ಗೆ ಕೈಪಿಡಿಯನ್ನು ತಾಲೂಕು ಹಾಗೂ ಜಿಲ್ಲೆಯ ಎಲ್ಲಾ ಕಾಂಗ್ರೆಸ್‌ ಕಾರ್ಯಕರ್ತರು ಸೇರಿ ಇಡೀ ರಾಜ್ಯದಲ್ಲಿಯೇ ಆಗದ ರೀತಿಯಲ್ಲಿ ಪಟ್ಟಣದಲ್ಲಿ ಮಾದರಿಯಾಗಿ ಬಿಡುಗಡೆ ಮಾಡಲು ನಿರ್ಧರಿಸಿದ್ದೇವೆ. 
 ಪ್ರಿಯಾಂಕ್‌ ಖರ್ಗೆ, ಐಟಿ-ಬಿಟಿ ಮತ್ತು ಪ್ರವಾಸೋದ್ಯಮ ಖಾತೆ ಸಚಿವ 

Advertisement

Udayavani is now on Telegram. Click here to join our channel and stay updated with the latest news.

Next