Advertisement

ಚಂದ್ರಂಪಳ್ಳಿಯಲ್ಲಿ ಪ್ರಕೃತಿ ಚಿಕಿತ್ಸೆ

03:20 PM Jun 28, 2017 | |

ಚಿಂಚೋಳಿ: ತಾಲೂಕಿನ ಪ್ರವಾಸಿ ತಾಣ ಚಂದ್ರಂಪಳ್ಳಿ ಗ್ರಾಮದಲ್ಲಿ ಹೊಸದಾಗಿ ಪ್ರಕೃತಿ ಚಿಕಿತ್ಸೆ ಮತ್ತು ಆರ್ಯುವೇದಿಕ ಆಸ್ಪತ್ರೆ ಪ್ರಾರಂಭಿಸಲಾಗುವುದು ಎಂದು ರಾಜ್ಯ ಆಯುಷ್‌ ಇಲಾಖೆ ನಿರ್ದೇಶಕ ಡಾ| ರಾಜಕಿಶೋರಸಿಂಗ್‌ ತಿಳಿಸಿದ್ದಾರೆ. ತಾಲೂಕಿನ ಚಂದ್ರಂಪಳ್ಳಿ ರೈತ ಭವನದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

Advertisement

ಉತ್ತರ ಕರ್ನಾಟಕ ಪ್ರದೇಶದಲ್ಲಿಯೇ ಜಿಲ್ಲೆಯ ಚಿಂಚೋಳಿ ತಾಲೂಕಿನ ಚಂದ್ರಂಪಳ್ಳಿ ಪ್ರವಾಸಿ ತಾಣವಾಗಿದೆ. ಅಲ್ಲದೆ ನೈಸರ್ಗಿಕ ಅರಣ್ಯ ಪ್ರದೇಶ ಮತ್ತು ವನ್ಯಧಾಮ ಆಗಿರವುದರಿಂದ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲು ಅನುಕೂಲವಾಗಲಿದೆ ಎಂದು ಹೇಳಿದರು. 

ಇದಕ್ಕಾಗಿ ತಾಲೂಕಿನ ಸಂಗಾಪುರ, ವೆಂಕಟಾಪುರ, ಪೆದ್ದುತಾಂಡಾ ಸ್ಥಳ ಪರಿಶೀಲನೆ ಮಾಡಲಾಗಿದೆ. ಆದರೆ ಚಂದ್ರಂಪಳ್ಳಿ ಪ್ರಕೃತಿ ಸೌಂದರ್ಯದಿಂದ ಕೂಡಿದ ಪ್ರದೇಶವಾಗಿರುವುದರಿಂದ ಇದೇ ಪ್ರಕೃತಿ ಚಿಕತ್ಸೆಗೆ ಸೂಕ್ತವಾದ ಪ್ರದೇಶವಾಗಿದೆ ಎಂದು ಹೇಳಿದರು. 

ಹೈದ್ರಾಬಾದ ಕರ್ನಾಟಕ ಪ್ರದೇಶದಲ್ಲಿಯೇ ಮಲೆನಾಡಿನಂತಹ ಸೊಬಗು ಮತ್ತು ಸುಂದರ ಪರಿಸರ ಇರುವುದರಿಂದ ಇಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಿದರೆ ಫಲಕಾರಿಯಾಗುತ್ತದೆ. ಪ್ರಕೃತಿ ಮಡಿಲಿನಲ್ಲಿ ಇರುವ ಇಂತಹ ಸುಂದರಮಯ ವಾತಾವರಣದಲ್ಲಿ 10ಹಾಸಿಗೆವುಳ್ಳ ಆಸ್ಪತ್ರೆಯನ್ನು ಪ್ರಾರಂಭಿಸಲು ಯಾವುದೇ ತೊಂದರೆಯಿಲ್ಲ ಎಂದರು. 

ತಾತ್ಕಾಲಿಕವಾಗಿ ಚಂದ್ರಂಪಳ್ಳಿ ಜಲಾಶಯದ ಮೇಲ್ಭಾಗದಲ್ಲಿ ಇರುವ ರೈತ ಭವನದಲ್ಲಿ ಪ್ರಕೃತಿ ಚಿಕಿತ್ಸೆ ಕೇಂದ್ರ ಪ್ರಾರಂಭಿಸಲು ಎಲ್ಲ ಅನುಕೂಲತೆಗಳಿದ್ದು, ಶೀಘ್ರದಲ್ಲಿಯೇ ಆಸ್ಪತ್ರೆ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಸದೀಯ ಕಾರ್ಯದರ್ಶಿ ಡಾ| ಉಮೇಶ ಜಾಧವ್‌ ಮಾತನಾಡಿ, ಉತ್ತರ ಕರ್ನಾಟಕ ಯಾವುದೇ ಭಾಗದಲ್ಲಿ ಇಂತಹ ಆಸ್ಪತ್ರೆ ಇಲ್ಲ.

Advertisement

ಪ್ರಕೃತಿ ಚಿಕಿತ್ಸೆ ಕೇಂದ್ರ ಪ್ರಾರಂಭಿಸಲು ಬಹಳಷ್ಟು ಪ್ರಯತ್ನ ಮಾಡಲಾಗಿದೆ. ಚಂದ್ರಂಪಳ್ಳಿ ಯಲ್ಲಿ ಪ್ರಕೃತಿ ಚಿಕಿತ್ಸೆ ಮತ್ತು ಆರ್ಯುರ್ವೇದ ಆಸ್ಪತ್ರೆ ಪ್ರಾರಂಭಿಸಿದರೆ ಬೀದರ, ಕಲಬುರಗಿ ಜಿಲ್ಲೆಗಳು ಸೇರಿದಂತೆ ನೆರೆ ತೆಲಂಗಾಣ ರಾಜ್ಯದ ರೋಗಿಗಳಿಗೂ ಅನುಕೂಲವಾಗಲಿದೆ ಎಂದು ಹೇಳಿದರು. 

ಜಹೀರಾಬಾದ, ತಾಂಡೂರ ರೈಲ್ವೆ ನಿಲ್ದಾಣಗಳು ಕೇವಲ 30ಕಿಮೀ ದೂರ ಇರುವುದರಿಂದ ತೆಲಂಗಾಣ ರಾಜ್ಯದವರಿಗೂ ಬಹಳಷ್ಟು  ಅನುಕೂಲಕರವಾಗಲಿದೆ. ಹಿಂದುಳಿದ ಪ್ರದೇಶದಲ್ಲಿ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ 10ಎಕರೆ ಜಮೀನಿಗಾಗಿ ಕೊಳ್ಳುರ, ಚಂದ್ರಂಪಳ್ಳಿ ಬಳಿ ಪರಿಶೀಲನೆ ಮಾಡಲಾಗಿದೆ ಎಂದರು. 

ಡಾ| ರುದ್ರಯ್ಯ ಲೋಣಿವಠ, ಡಾ| ಬಾಲಕೃಷ್ಣ ರಾಠೊಡ, ತಾಪಂ ಅಧ್ಯಕ್ಷೆ ರೇಣುಕಾ ಚವ್ಹಾಣ, ಕಂದಾಯ ನಿರೀಕ್ಷಕ ಕೇಶವ ಕುಲಕರ್ಣಿ, ಶಂಕರ ಚಿಂಚೋಳಿ, ರವಿರಾಜ ಕೊರವಿ, ಅಮರ ಲೊಡನೊರ, ತಾಪಂ ಸದಸ್ಯ ಚಿರಂಜೀವಿ, ನರಸಿಂಹಲು ಕುಂಬಾರ, ನರಸಿಂಹ ಸವಾರಿ ಇನ್ನಿತರರಿದ್ದರು.   

Advertisement

Udayavani is now on Telegram. Click here to join our channel and stay updated with the latest news.

Next