ತುಮಕೂರು: ಪ್ರಕೃತಿ ಮುನಿಸಿಕೊಂಡರೆ ಇಡೀ ವಿಶ್ವವೇ ಸರ್ವನಾಶವಾಗಲಿದೆ, ಆದ್ದರಿಂದ ಪ್ರತಿಯೊಬ್ಬರೂ ಪರಿಸರ ರಕ್ಷಣೆ ಮಾಡುವ ಜವಾಬ್ದಾರಿ ಹೊರ ಬೇಕು ಎಂದು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಹೇಳಿದರು. ತಾಲೂಕಿನ ಮಸ್ಕಲ್ ಗ್ರಾಮದ ಶಾಲಾ ಆವರಣದಲ್ಲಿ ತಾಪಂ ಮತ್ತು ಅರಣ್ಯ ಇಲಾಖೆ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ರೈತರಿಗೆ 5 ಸಾವಿರ ಸಸಿಗಳನ್ನು ವಿತರಿಸಿ ಮಾತನಾಡಿದರು.
ಇಂದು ನಾವು ಹಲವಾರು ದಿನಾ ಚರಣೆಗಳನ್ನು ಆಚರಿಸುತ್ತಿದ್ದೇವೆ. ಫಾದರ್ ಡೇ, ಮದರ್ ಡೇ ಹೀಗೆ ಎಲ್ಲರೂ ತಮ್ಮ ವೈಯಕ್ತಿಕವಾಗಿ ಅವರವರ ಮೇಲೆ ಪ್ರೀತಿ ಅಭಿಮಾನವನ್ನು ತೋರಿ ಸಲು ದಿನಾಚರಣೆಗಳನ್ನು ಆಚರಿಸುತ್ತಿ ದ್ದೇವೆ. ಆದರೆ ಎಲ್ಲೋ ಒಂದು ಕಡೆ ಪ್ರಕೃತಿ ಮುನಿಸಿಕೊಂಡರೆ ಇಡೀ ಪ್ರಪಂ ಚವೇ ಸರ್ವನಾಶವಾಗುತ್ತದೆ. ಇಂದು ಯಾವುದೋ ದೇಶದಲ್ಲಿ ಹುಟ್ಟಿ ಇಡೀ ಪ್ರಪಂಚಕ್ಕೇ ಕೊರೊನಾ ವೈರಸ್ ಹರಡಿರುವುದೇ ಸಾಕ್ಷಿ,
ಈ ನಿಟ್ಟಿನಲ್ಲಿ ನಾವೆಲ್ಲರೂ ಗಿಡ ನೆಟ್ಟು ಪೋಷಿಸಿ ಪ್ರಕೃತಿಯನ್ನು ಉಳಿಸಬೇಕು ಎಂದರು. ತಾಪಂ, ಜಿಲ್ಲಾಧಿಕಾರಿಗಳ ಕಚೇರಿ, ಜಿಲ್ಲಾ ಪಂಚಾಯಿತಿ, ನ್ಯಾಯಾಲಯ ಆವರಣದಲ್ಲೂ ಸಸಿ ನೆಡಬೇಕೆಂದು ಮನವಿ ಮಾಡಿದ ಶಾಸಕರು, ನಾನು ಕೋರ್ ಕಮಿಟಿ ಸಭೆಯಲ್ಲಿ ಮಾಹಿತಿ ಕೊಟ್ಟಂತೆ ತಮ್ಮ ತಮ್ಮ ಮನೆಗಳ ಮುಂದೆ ಯುವಕರು ಸಸಿ ನೆಟ್ಟು ಗೊಬ್ಬರ ಹಾಕಿ ಪೋಷಿಸಿ ಅದರ ಭಾವಚಿತ್ರ ತೆಗೆದುಕಳಿ ಸುವಂತೆ ಮನವಿ ಮಾಡಿದ್ದೆ.
ಕೆಲವರು ಸಸಿ ನೆಟ್ಟು ಪೋಷಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಅರಣ್ಯ ಇಲಾಖೆಗೆ 70 ಸಾವಿರ ಗಿಡ ಗಳು ಬಂದಿದ್ದು, 5 ಸಾವಿರ ಗಿಡಗಳನ್ನು ಮಸ್ಕಲ್ ಗ್ರಾಪಂಗೆ ಕೊಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದೆ. ಅದರಂತೆ ಹಣ್ಣಿನ ಗಿಡಗಳಾದ ಹಲಸು ಮಾವು, ನೇರಳೆ, ಶ್ರೀಗಂಧ, ಬೇವು ಸೇರಿದಂತೆ ವಿವಿಧ ಜಾತಿಯ ಐದು ಸಾವಿರ ಸಸಿಗಳನ್ನು ರೈತರಿಗೆ ವಿತರಿಸಲಾಯಿತು ಎಂದರು.
ತಾಪಂ ಕಾರ್ಯನಿರ್ವಾ ಹಣಾಧಿಕಾರಿ ಜೈಪಾಲ್, ವಲಯ ಅರಣ್ಯಾಧಿಕಾರಿ ನಟರಾಜು, ಸಾಮಾಜಿಕ ಅರಣ್ಯಾಧಿಕಾರಿ ಪವಿತ್ರ, ತಾಪಂ ಸದಸ್ಯ ಗೋವಿಂದರಾಜು, ಗ್ರಾಪಂ ಅಧ್ಯಕ್ಷೆ ರೂಪಾ, ಪಿಡಿಒ ಕೋಮಲ, ತಾಲೂಕು ಜೆಡಿಎಸ್ ಅಧ್ಯಕ್ಷ ಹಾಲನೂರು ಅನಂತಕುಮಾರ್ ಮೊದಲಾದವರಿದ್ದರು.