Advertisement

ಪ್ರಕೃತಿ ಸಂರಕ್ಷಣೆಗೆ ಗಂಭೀರ ಚಿಂತನೆ ಅಗತ್ಯ: ಸತ್ಯನಾರಾಯಣ ಹೆಬ್ಟಾರ್‌

09:13 PM Jun 28, 2019 | Team Udayavani |

ತೆಕ್ಕಟ್ಟೆ : ನಮ್ಮ ಪೂರ್ವಜರಲ್ಲಿದ್ದ ನಿಸರ್ಗದ ಪರಿಕಲ್ಪನೆ ಹಾಗೂ ಆ ಗಿಡಗಳನ್ನು ನೆಟ್ಟು ಆರೈಕೆ ಮಾಡಿ ಪೋಷಿಸಿದ ಫಲವಾಗಿ ಅವರು ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯವಾಗಿದ್ದರು. ಆದರೆ ಬದಲಾದ ಕಾಲದಲ್ಲಿ ಪ್ರಕೃತಿಯ ವಿರುದ್ಧದ ಸೆಣಸಾಟದಿಂದಾಗಿ ನಿಸರ್ಗ ತನ್ನ ಸಮತೋಲನ ಕಳೆದುಕೊಂಡಿದೆ. ಈ ನಿಟ್ಟಿನಲ್ಲಿ ಪ್ರಕೃತಿ ಸಂರಕ್ಷಣೆಯ ಬಗ್ಗೆ ಗಂಭೀರ ಚಿಂತನೆ ಅಗತ್ಯವಿದೆ ಎಂದು ಕೊಮೆ ಕೊರವಡಿ ವಿ.ಸ.ಸಂಘ ಇದರ ಅಧ್ಯಕ್ಷ ಟಿ.ಸತ್ಯನಾರಾಯಣ ಹೆಬ್ಟಾರ್‌ ಹೇಳಿದರು.

Advertisement

ಅವರು ಜೂ.27 ರಂದು ಪರಿಸರ ದಿನಾಚರಣೆಯ ಅಂಗವಾಗಿ ಕೊಮೆ ಕೊರವಡಿ ವಿ.ಸ.ಸಂಘ ನಿ. ಇದರ ಪ್ರಧಾನ ಕಚೆೇರಿಯ ಸಂಸ್ಥಾಪಕ ದಿ| ತೆಕ್ಕಟ್ಟೆ ನಾಗರಾಜ್‌ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಗಿಡ ವಿತರಿಸಿ ಮಾತನಾಡಿದರು.

ಕೊಮೆ ಕೊರವಡಿ ವಿ.ಸ.ಸಂಘ ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲ ಪೂಜಾರಿ ಮಾತನಾಡಿ, ಪ್ರತಿ ಮನೆ ಮನಗಳಲ್ಲಿ ನಿಸರ್ಗದ ಬಗೆಗೆ ಒಲವು ಹಾಗೂ ಕಾಳಜಿ ಅತೀ ಅಗತ್ಯವಿದೆ. ನಾವು ಪೋಷಿಸಿ ಬೆಳೆಸುವ ಪ್ರತಿ ಗಿಡಗಳು ಕೂಡಾ ನಮ್ಮ ಮುಂದಿನ ಪೀಳಿಗೆಗೆ ನೆರಳಾಗಿ ಆಸರೆಯಾಗಬೇಕು ಎನ್ನುವ ಬಯಕೆ ನಮ್ಮದು. ಪ್ರಕೃತಿಗೂ ನಮ್ಮ ಕೊಡುಗೆ ಬಹಳ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕೊಮೆ ಕೊರವಡಿ ವಿ.ಸ.ಸಂಘ ನಿ. ಇದರ ಉಪಾಧ್ಯಕ್ಷ ಕೃಷ್ಣ ಪೂಜಾರಿ ಹಾಗೂ ನಿರ್ದೇಶಕರಾದ ರಾಮ ಕಾಂಚನ್‌, ಗೋಪಾಲ , ರಾಘವೇಂದ್ರ ಮೊಗವೀರ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next