Advertisement
ಪ್ರೊ.ಚಂದ್ರಶೇಖರ ಪಾಟೀಲರು 83ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ನನಗೂ ಹಾಗೂ ಪ್ರಗತಿಪರ ಚಿಂತನೆಯುಳ್ಳವರಿಗೆ ಸಂತಸ ಮತ್ತು ಸಂಭ್ರಮದ ವಿಚಾರ. ಸಮ್ಮೇಳನದ ನಿಯೋಜಿತ ಅಧ್ಯಕ್ಷರಾಗಿರುವ ಚಂಪಾ ಅವರೇ ಹೇಳಿದಂತೆ ಈ ಬಾರಿ ಸಂಯಮ ಮತ್ತು ವಿವೇಕದಿಂದ ಮಾತನಾಡಬೇಕೆಂದಿದ್ದೇನೆ ಎಂಬ ಹೇಳಿಕೆ ಪ್ರಸ್ತುತವಾಗಿದೆ. ಇಂದು ಯಾರನ್ನು ನಾವು ಎದುರಾಳಿಗಳು ಎಂದು ಭಾವಿಸಿಕೊಂಡಿರುತ್ತೇವೋ ಅವರಲ್ಲಿ ಇಲ್ಲದ್ದನ್ನು ನಾವು ಪ್ರಕಟಿಸುವ ಮುಖಾಂತರವಾಗಿ ಉತ್ತರ ಕೊಡುವುದು ಸರಿಯಾದ ದಾರಿ. ಯಾರಿಗೆ ಸಂಯಮ ಇಲ್ಲವೋ ಅವರಿಗೆ ಸಂಯಮದಿಂದಲೇ ಉತ್ತರಿಸುವುದು ಒಳ್ಳೆಯದು. ಯಾರು ವಿವೇಕವಿಲ್ಲದೆ ಅವಿವೇಕಿಗಳಾಗಿರುತ್ತಾರೋ ಅವರೊಂದಿಗೆ ವಿವೇಕದಿಂದ ಮಾತನಾಡಬೇಕಿದೆ ಎಂದರು.
Related Articles
ಬೆಂಗಳೂರು: ಭಾರತದ ಮೂಲ ಸಂಸ್ಕೃತಿಯಾಗಿರುವ ಬಹುತ್ವ ಮತ್ತು ಬಹುಸಂಸ್ಕೃತಿಯನ್ನು ಪುನರಾವಲೋಕನ
ಮಾಡ ಬೇಕಾಗಿದೆ ಎಂದು ಪ್ರತಿಪಾದಿಸಿದ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ವೀರಪ್ಪ ಮೊಯ್ಲಿ, ಏಕಸಂಸ್ಕೃತಿ ಎನ್ನುವುದು ಕೃತಕವಾದದ್ದು ಎಂದು ಹೇಳಿದರು.
Advertisement
ಬರಗೂರು ಆತ್ಮೀಯರ ಬಳಗ ಹಾಗೂ ಬೆಂಗಳೂರು ವಿವಿ ಕಾಲೇಜು ಕನ್ನಡ ಅಧ್ಯಾಪಕರ ಒಕ್ಕೂಟದಿಂದ ಬುಧವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ “ನಮ್ಮೊಳಗಿನ ಬರಗೂರು-ಒಂದು ಚಿಂತನೆ’ ವಿಚಾರಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಬಂಡಾಯದ ಮರುಹುಟ್ಟು ಆಗಬೇಕೆಂಬ ವಾದವಿದೆ. ಆದರೆ, ಭಾರತದ ಮೂಲ ಸಂಸ್ಕೃತಿಯಾದ ಬಹುತ್ವ ಮತ್ತು ಬಹುಸಂಸ್ಕೃತಿಯ ಪುನರಾವಲೋಕನ ಆಗಬೇಕು. ಭಾರತೀಯ ಸಂಸ್ಕೃತಿಯ ಕ್ಷೀತಜದ ಅನಾವರಣವಾಗಬೇಕು. ಏಕ ಸಂಸ್ಕೃತಿ ಅನ್ನುವುದು ಯಾವತ್ತಿಗೂ ಕೃತಕವಾದದ್ದು. ಯಥಾಸ್ಥಿತಿಯನ್ನು ಮುರಿದು ಚಲನಶೀಲ ಜಗತ್ತಿಗೆ ಧುಮುಕಿದಾಗ ಮಾತ್ರವೇ ಭಾರತದ ಮೂಲ ಸಂಸ್ಕೃತಿಯ ಪುನರಾವಲೋಕನ ಸಾಧ್ಯ. ಬರಗೂರು ರಾಮಚಂದ್ರಪ್ಪ ಇಲ್ಲಿನ ಮೂಲ ಸಂಸ್ಕೃತಿಯ ಪ್ರತಿನಿಧಿಯಾಗಿದ್ದಾರೆ. ಹಾಗಾಗಿ, ಕೃತವಾಗಿರುವ ಏಕಸಂಸ್ಕೃತಿಯ ಬದಲು, ಬಹುಸಂಸಕೃತಿಯನ್ನು ಬರಗೂರು ತೋರಿಸಿದ್ದಾರೆ. ಹಾಗಾಗಿ ಈ ಪುನರಾವಲೋಕನ ಬರಗೂರು ಅವರಿಂದಲೇ ಸಾಧ್ಯ ಎಂದು ಮೊಯ್ಲಿ ಹೇಳಿದರು.
ಕಾರ್ಯಕ್ರಮದಲ್ಲಿ ಡಾ. ಬೈರಮಂಗಲ ರಾಮೇಗೌಡ ಅವರು ಬರೆದ “ಬೆವರು ಬರೆದ ಬರಹ’, ಡಾ. ಬಸವರಾಜ ಡೋಣೂರ ಅವರು ಆಂಗ್ಲ ಭಾಷೆಗೆ ಅನುವಾದಿಸಿರುವ “ಶಬರಿ’ ಹಾಗೂ ಡಾ| ಕರಿಯಪ್ಪ ಮಾಳಿಗೆ ಅವರ ರಚಿಸಿರುವ ” ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಬರಗೂರು’ ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು.