Advertisement

ನೈಸರ್ಗಿಕ-ಮಾನವ ಸಂಪನ್ಮೂಲ ಸದ್ಬಳಕೆ ಅವಶ್ಯ

05:52 PM Mar 12, 2018 | |

ಬಸವಕಲ್ಯಾಣ: ರಾಷ್ಟ್ರದ ಸರ್ವಾಂಗೀಣ ಪ್ರಗತಿಗೆ ನೈಸರ್ಗಿಕ ಹಾಗೂ ಮಾನವ ಸಂಪನ್ಮೂಲಗಳ ಸದ್ಬಳಕೆ ಅತ್ಯವಶ್ಯಕ ಎಂದು ಕಲಬುರಗಿಯ ನಿವೃತ್ತ ಪ್ರಾಧ್ಯಾಪಕ ಎಂ.ಕೆ. ಬಿರಾದಾರ ಹೇಳಿದರು. ನಗರದ ಹರಳಯ್ಯ ನವರ ಗವಿ ಪರಿಸರದಲ್ಲಿ ಆಯೋಜಿಸಿದ್ದ ಅಕ್ಕಮಹಾದೇವಿ ಮಹಿಳಾ ಮಹಾವಿದ್ಯಾಲಯದ (ಅ) ಮತ್ತು (ಬ) ಘಟಕಗಳ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದಲ್ಲಿ ಅವರು ಮಾತನಾಡಿದರು.

Advertisement

ದೇಶದಲ್ಲಿನ ನೈಸರ್ಗಿಕ ಹಾಗೂ ಮಾನವ ಸಂಪನ್ಮೂಲಗಳನ್ನು ಜಾಗ್ರಕತೆಯಿಂದ ಬಳಸಿಕೊಂಡರೆ ದೇಶದ ಸಮಗ್ರ ಪ್ರಗತಿ ಸಾಧ್ಯ. ದುಡಿಯುವ ವರ್ಗ ಯಾವ ರಾಷ್ಟ್ರದಲ್ಲಿ ಹೆಚ್ಚಿರುತ್ತದೊ ಆ ರಾಷ್ಟ್ರ ಮುಂದುವರಿಯುತ್ತದೆ. ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಬೆಳೆಸುವಲ್ಲಿ ಇಂಥ ಶಿಬಿರಗಳು ಸಹಕಾರಿಯಾಗುತ್ತವೆ ಎಂದು ಹೇಳಿದರು.

ಸಿಪಿಐ ಅಲಿಸಾಬ್‌ ಮಾತನಾಡಿ, ವಿದ್ಯಾರ್ಥಿಗಳ ಜೀವನ ಅತ್ಯಮೂಲ್ಯವಾದದ್ದು, ಸಿಕ್ಕಿರುವ ಸಮಯವನ್ನು ಸದುಪಯೋಗ ಪಡಿಸಿಕೊಂಡು ನಿರಂತರ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಬಿಡಿವಿಸಿ ವಿಶ್ವಸ್ಥ ಸೋಮಶೇಖರಯ್ನಾ ವಸ್ತ್ರದ ಮಾತನಾಡಿದರು. ಸರಕಾರಿ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಪ್ರೊ| ಮೀನಾಕ್ಷಿ ಬಿರಾದಾರ ಮಾತನಾಡಿದರು.

ಬಿಡಿಪಿಸಿ ಕಾರ್ಯದರ್ಶಿ ರೇವಣಪ್ಪಾ ರಾಯವಾಡೆ ಉಪಸ್ಥಿತರಿದ್ದರು. ಅಕ್ಕಮಹಾದೇವಿ ಮಹಿಳಾ ಪ್ರಥಮ ದರ್ಜೆ ಕಲಾ ಮತ್ತು ವಾಣೀಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಮಾಯಾ ಮುರಾಳೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.  ಉಪನ್ಯಾಸಕ ಭೀಮಾಶಂಕರ ಬಿರಾದಾರ ನಿರೂಪಿಸಿದರು. ಎನ್ನೆಸ್ಸೆಸ್‌ (ಅ) ಘಟಕದ ಕಾರ್ಯಕ್ರಮಾಧಿಕಾರಿ ವೆಂಟಕರಾವ್‌ ಗುನಾಳೆ ವಂದಿಸಿರು. ವಿದ್ಯಾರ್ಥಿಗಳು ಸಾಮೂಹಿಕವಾಗಿ ಎನ್ನೆಸ್ಸೆಸ್‌ ಗೀತೆ ಹಾಡಿದರು. ಎನ್ನೆಸ್ಸೆಸ್‌ (ಬ) ಘಟಕದ ಕಾರ್ಯಕ್ರಮಾಧಿಕಾರಿ ಜಗನ್ನಾಥರೆಡ್ಡಿ ಕಲ್ಲೂರೆ ಹಾಗೂ ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಇದ್ದರು.

Advertisement

ಅಕ್ಕಮಹಾದೇವಿ ಮಹಿಳಾ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಹಾಗೂ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ಕಾಯಕ್ರಮ ಆಯೋಜಿಲಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next