Advertisement

Alia Bhatt: ಆಕ್ಷನ್‌ ಅವತಾರದಲ್ಲಿ ಆಲಿಯಾ

03:20 PM Oct 06, 2024 | Team Udayavani |

ಬಾಲಿವುಡ್‌ನ‌ ಖ್ಯಾತ ನಟಿ ಆಲಿಯಾ ಭಟ್‌ ತಮ್ಮ ಸಾಲು ಸಾಲು ಚಿತ್ರಗಳಿಂದ ಪ್ರೇಕ್ಷಕರನ್ನು ರಂಜಿಸುತ್ತ, ಮೆಚ್ಚುಗೆಗಳನ್ನು ಪಡೆಯುತ್ತಲೇ ಇದ್ದಾರೆ. ಈಗ “ಜಿಗರಾ’ ಸಿನಿಮಾ ಮೂಲಕ ಹೊಸ ಅವತಾರದಲ್ಲಿ ಆಲಿಯಾ ಭಟ್‌ ಪ್ರೇಕ್ಷಕರ ಮುಂದೆ ಬರಲಿದ್ದಾರೆ.

Advertisement

ಕರಣ್‌ ಜೋಹರ್‌ ನಿರ್ಮಾಣದ ಹಾಗೂ ವಾಸನ್‌ ಬಾಲಾ ನಿರ್ದೇಶನದ “ಜಿಗರಾ’ ಆಕ್ಷನ್‌ ಥ್ರಿಲ್ಲರ್‌ ಚಿತ್ರದಲ್ಲಿ ಆಲಿಯಾ ನಟಿಸಿದ್ದಾರೆ. ಚಿತ್ರ ಅಕ್ಟೋಬರ್‌ 11ರಂದು ತೆರೆ ಕಾಣಲಿದೆ. ಈಗಾಗಲೇ ಟ್ರೇಲರ್‌ ಮೂಲಕ ಸದ್ದು ಮಾಡಿರುವ “ಜಿಗರಾ’ ಪ್ರೇಕ್ಷಕರಲ್ಲಿ ಭರವಸೆ ಮೂಡಿಸಿದೆ.

ಸಂಕಷ್ಟದಲ್ಲಿ ಸಿಲುಕಿರುವ ತನ್ನ ಸೋದರನನ್ನು ರಕ್ಷಿಸಲು ಅಕ್ಕ ಹೇಗೆ ಹೋರಾಟ ನಡೆಸುತ್ತಾಳೆ ಎಂಬುದೇ ಚಿತ್ರದ ಒನ್‌ ಲೈನ್‌ ಸ್ಟೋರಿ.

Advertisement

Udayavani is now on Telegram. Click here to join our channel and stay updated with the latest news.

Next