Advertisement

ಪರಿಸರ ನಾಶದಿಂದ ಪ್ರಕೃತಿ ವಿಕೋಪ: ಬಳ್ಳಾರಿ

09:40 AM May 22, 2019 | Team Udayavani |

ಹಾನಗಲ್ಲ: ಪ್ರಕೃತಿ ವಿಕೋಪ ಹವಾಮಾನದ ಏರುಪೇರಿನಿಂದ ಮಳೆಯಾಗದೆ, ಬಿರುಗಾಳಿ, ಮಹಾಪೂರಗಳಂತಹ ಅವಘಡ ಸಂಭವಿಸುತ್ತಿರುವುದಕ್ಕೆ ಅರಣ್ಯ ನಾಶವೇ ಕಾರಣ. ಪರಿಸರ ಸಂರಕ್ಷಿಸುವ ಕಾರ್ಯವಾಗದೆ ಹೋದರೆ ಮುಂದಿನ ಪೀಳಿಗೆ ತುಂಬಾ ಕಷ್ಟ ಅನುಭವಿಸಬೇಕಾಗುತ್ತದೆ ಎಂದು ಜನತಾ ಶಿಕ್ಷಣ ಸೌಹಾರ್ದ ಸಂಸ್ಥೆಯ ಅಧ್ಯಕ್ಷ ಎ.ಎಸ್‌. ಬಳ್ಳಾರಿ ತಿಳಿಸಿದರು.

Advertisement

ಮಂಗಳವಾರ ಹಳೇಕೋಟಿ ಪ್ರದೇಶದಲ್ಲಿರುವ ಜನತಾ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಅರಣ್ಯ ಇಲಾಖೆ ಆಯೋಜಿಸಿದ್ದ ಪರಿಸರ ಸಂರಕ್ಷಣೆಗಾಗಿ 100 ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಂದು ಪ್ರತಿಯೊಬ್ಬರು ಪರಿಸರ ಕಾಪಾಡುವ ಸಂಕಲ್ಪ ತೊಡಬೇಕಿದೆ. ಪರಿಸರ ನಾಶದಿಂದ ಮಾನವ ಸಂಕುಲ ತೀವ್ರ ಸಂಕಷ್ಟ ಅನುಭವಿಸುವ ಕಾಲ ದೂರವಿಲ್ಲ. ಹೀಗಾಗಿ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಿ ಮಕ್ಕಳಾದಿಯಾಗಿ ಎಲ್ಲರೂ ಪರಿಸರ ಕಾಪಾಡಲು ಮುಂದಾಗಬೇಕು. ಅರಣ್ಯ ಇಲಾಖೆಯವರು ಪರಿಸರ ಸಂರಕ್ಷಣೆ ಜಾಗೃತಿಯ ಮೂಡಿಸುವ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ ವಿಷಯ ಎಂದರು.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಿ.ಪಿ.ದುಡ್ಡಗಿ ಮಾತನಾಡಿ, ಪ್ರತಿಯೊಂದು ಜೀವ, ಜಲ, ಮನುಷ್ಯ, ಪ್ರಾಣಿ, ಪಕ್ಷಿ ಉಸಿರಾಡಬೇಕಾದರೆ ಪರಿಸರ ಅಷ್ಟೆ ಅತ್ಯವಶ್ಯಕತೆಯಿದೆ. ಅವುಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಗಿಡ ಮರಗಳ ನೆಡುವುದರೊಂದಿಗೆ ಸಂರಕ್ಷಣೆ ಮಾಡ‌ಬೇಕಿದೆ. ಇಂದಿನಿಂದಲೇ ಪ್ರತಿಯೊಬ್ಬರು ತಮ್ಮ ಸುತ್ತ ಮುತ್ತಲಿನ ಪರಿಸರ ಕಾಪಾಡುವ ಸಂರಕ್ಷಿಸುವ ಪಣ ತೊಡಬೇಕು. ಹೀಗಿದ್ದಾಗ ಮಾತ್ರ ಪರಿಸರ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದ ಅವರು, ಈಗಾಗಲೆ ಇಲಾಖೆ ವತಿಯಿಂದ ಶಾಲಾ-ಕಾಲೇಜು ಹಾಗೂ ಸರಕಾರಿ ಕಚೇರಿಗಳಲ್ಲಿ ನೇರಳೆ, ಮಹಾಗನಿ, ಗೋಣಿ, ನೆಲ್ಲಿ, ಅರಳಿ, ಮಾವು, ಅತ್ತಿ, ಹೊಂಗೆ, ನುಗ್ಗೆ, ತಪಸ್ಸಿ, ಕರಿಬೇವು, ಹಲಸು, ಹೆಬ್ಬೇವು ನಿರಲೇ ಸೆರಿದಂತೆ ಹಲವು ವಿವಿಧ ತಳಿಯ ಗಿಡದ ಸಸಿಗಳು ಸೇರಿದಂತೆ ಪಟ್ಟಣದಲ್ಲಿ ಸುಮಾರು 900 ಗಿಡಗಳನ್ನು ನೆಡಲಾಗುತ್ತಿದೆ ಎಂದು ಬಿ.ಪಿ.ದುಡ್ಡಗಿ ತಿಳಿಸಿದರು.

ಜನತಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಂ.ಎಚ್.ಬಳಿಗಾರ, ಮುಖ್ಯಶಿಕ್ಷಕ ಎಸ್‌.ಎಸ್‌.ಸವಣೂರ, ಜಿ.ಬಿ.ದೇಸಾಯಿ, ವಲಯ ಅರಣ್ಯಾಧಿಕಾರಿ ಪರಮೇಶ್ವರಪ್ಪ ಪೇಲನವರ, ವಿ.ಆರ್‌.ಪಾಟೀಲ, ಎಸ್‌.ಎಂ. ತಳವಾರ, ಬಿ.ಎಂ.ಹೊಸೂರ, ಜಿ.ಜಿ.ಓಲೆಕಾರ, ಹಾಗೂ ಇಲಾಖೆ ಸಿಬ್ಬಂದಿಗಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next