Advertisement
ಕಳಪೆ ಕಾಮಗಾರಿ!ಸುರತ್ಕಲ್ ಹಳೆ ಪೊಲೀಸ್ ಸ್ಟೇಷನ್ ಬಳಿ ಸರ್ವಿಸ್ ರಸ್ತೆಯನ್ನು ಗುತ್ತಿಗೆದಾರರು ತಮಗೆ ತೋಚಿದಂತೆ ಮಾಡುತ್ತಿದ್ದರು. ಗುಣಮಟ್ಟವನ್ನು ಪರೀಕ್ಷಿಸಲು ಅಧಿಕಾರಿಗಳೂ ಇರಲಿಲ್ಲ. ಮಣ್ಣಿನ ಮೇಲೆಯೇ ಜಲ್ಲಿ ಸುರಿದು ಡಾಮರು ಹಾಕುತ್ತಿದ್ದರು. ಸರ್ವಿಸ್ ರಸ್ತೆಯನ್ನು ವಿಸ್ತಾರಗೊಳಿಸಿ ಬಸ್ಸುಗಳ ಓಡಾಟಕ್ಕೆ ಏಕಮುಖ ಸಂಚಾರಕ್ಕೆ ನಿರ್ಧರಿಸಲಾಗಿದೆ. ಚರಂಡಿಗಳಿಗೆ ಕಾಂಕ್ರೀಟ್ ಸ್ಲ್ಯಾಬ್ ಅಳವಡಿಸಿ ಅಗಲಗೊಳಿಸಲಾಗಿದೆ.
ಸರ್ವಿಸ್ ರಸ್ತೆಯನ್ನು ಕಳಪೆಯಾಗಿ ಮಾಡುತ್ತಿರುವುದನ್ನು ಗಮನಿಸಿ ತತ್‌ಕ್ಷಣ ಸ್ಥಳಕ್ಕೆ ತೆರಳಿ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡಿದ್ದೇವೆ. ಈ ಬಗ್ಗೆ ಹೈವೇ ಎಂಜಿನಿಯರ್‌ಗಳಿಗೂ ಮಾಹಿತಿ ನೀಡಿದ್ದೇವೆ. ಸಾರ್ವಜನಿಕರ ತೆರಿಗೆ ಹಣವನ್ನು ಈ ರೀತಿ ಪೋಲು ಮಾಡುವುದು ಸರಿಯಲ್ಲ. ಈಗ ಅಧಿಕಾರಿಗಳು ವೀಕ್ಷಿಸಿ ಪೂರಕ ಕ್ರಮಗಳಿಗೆ ಸೂಚಿಸಿರುವುದು ಉತ್ತಮ ಹೆಜ್ಜೆ.
– ಸುಭಾಶ್ಚಂದ್ರ ಶೆಟ್ಟಿ , ಅಧ್ಯಕ್ಷರು,
ಮಂಗಳೂರು ನಾಗರಿಕ ಸಮಿತಿ ರಸ್ತೆ ಅಗಲಗೊಳಿಸಲು ಸೂಚನೆ
ಸರ್ವಿಸ್ ರಸ್ತೆಯ ಕಾಮಗಾರಿ ಗುಣಮಟ್ಟದ ಕುರಿತು ನಾಗರಿಕ ಸಮಿತಿ ನಮ್ಮ ಗಮನಕ್ಕೆ ತಂದಿದೆ. ತತ್‌ಕ್ಷಣ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಗುಣಮಟ್ಟದೊಂದಿಗೆ ರಸ್ತೆ ನಿರ್ಮಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ಸರ್ವಿಸ್ ರಸ್ತೆಯನ್ನು ಅಗಲಗೊಳಿಸಲೂ ಸೂಚಿಸಲಾಗಿದೆ.
– ಅಜಿತ್ ಕುಮಾರ್, ಎಂಜಿನಿಯರ್ ಹೆದ್ದಾರಿ ಇಲಾಖೆ