Advertisement
ಪ್ರಧಾನಿ ಉಪಸ್ಥಿತಿ ರಾಷ್ಟ್ರೀಯ ಯುವಜನೋತ್ಸವ ಸಂಭ್ರಮ ಒಂದು ಕಡೆಯಾದರೆ, ಉತ್ಸವಕ್ಕೆ ಚಾಲನೆ ನೀಡಲು ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುವಿಕೆ ಮಹಾನಗರವನ್ನು ಪುಳಕಗೊಳ್ಳು ವಂತೆ ಮಾಡಿದೆ. ದೇಶದ ಯುವ ಸಾಂಸ್ಕೃತಿಕ ಜಗತ್ತು ಹುಬ್ಬಳ್ಳಿ- ಧಾರವಾಡದಲ್ಲಿ ಮೈದಳೆಯಲಿದ್ದು, ರಾಜ್ಯದ ಎರಡನೇ ಹಾಗೂ ಉತ್ತರ ಕರ್ನಾಟಕದ ಮೊದಲ ರಾಷ್ಟ್ರೀಯ ಯುವಜನೋತ್ಸವಕ್ಕಾಗಿ ಹುಬ್ಬಳ್ಳಿ- ಧಾರವಾಡದಲ್ಲಿ ಹಬ್ಬದ ಸಡಗರ ಸೃಷ್ಟಿಯಾಗಿದೆ.
Related Articles
ಪ್ರತಿಭೆ ಗಳು ಪಾಲ್ಗೊಂಡಿದ್ದವು. ಸುಮಾರು ಒಂದು ದಶಕದ ಬಳಿಕ ಈಗ ಜ.12-16ರ ವರೆಗೆ ಹುಬ್ಬಳ್ಳಿ- ಧಾರವಾಡದಲ್ಲಿ ನಡೆಯುತ್ತಿದೆ.
Advertisement
ಹುಬ್ಬಳ್ಳಿಯಲ್ಲಿ ಚಾಲನೆ -ಧಾರವಾಡದಲ್ಲಿ ಅನಾವರಣ 26ನೇ ರಾಷ್ಟ್ರೀಯ ಯುವ ಜನೋತ್ಸವ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಚಾಲನೆ ಪಡೆಯಲಿದ್ದು, ದೇಶ ಯುವ ಸಾಂಸ್ಕೃತಿಕಲೋಕ ವಿದ್ಯಾನಗರಿ ಧಾರವಾಡದಲ್ಲಿ ಅನಾವರಣಗೊಳ್ಳಲಿದೆ. ಜ.12ರಂದು ಸಂಜೆ 4 ಗಂಟೆಗೆ ಇಲ್ಲಿನ ರೈಲ್ವೆ ಮೈದಾನದಲ್ಲಿ ರಾಷ್ಟ್ರೀಯ ಯುವಜನೋತ್ಸವಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ. ಪ್ರತಿ ವರ್ಷದ ರಾಷ್ಟ್ರೀಯ ಯುವಜನೋತ್ಸವ ಒಂದೊಂದು ಧ್ಯೇಯದೊಂದಿಗೆ ಆಚರಣೆಗೊಳ್ಳಲಿದೆ.
ಸಮಾರಂಭಕ್ಕೆ ರೈಲ್ವೆ ಮೈದಾನ ಸಜ್ಜುಗೊಂಡಿದ್ದು, ಸಮಾರಂಭದಲ್ಲಿ ಯುವಕರಿಗೆ ಮಾತ್ರ ಅವಕಾಶ ನೀಡಲಾಗಿದೆ. ಪೋರ್ಟಲ್‌ನಲ್ಲಿ ನೋಂದಣಿ ಮಾಡಿಸಬೇಕಿದೆ. ಈಗಾಗಲೇ ಸುಮಾರು 40-45 ಸಾವಿರದಷ್ಟು ಯುವಕರು ನೋಂದಣಿ ಮಾಡಿಸಿದ್ದಾರೆ. ಭದ್ರತೆ ದೃಷ್ಟಿಯಿಂದ ಜಿಲ್ಲಾಡಳಿತ 25 ಸಾವಿರ ಯುವಕರಿಗೆ ಮಾತ್ರ ಅವಕಾಶ ನೀಡಲು ನಿರ್ಧರಿಸಿದೆ. ಪ್ರವೇಶ ಅದೃಷ್ಟ ಪಡೆದವರು ಪ್ರಧಾನಿಯವರನ್ನು ಕಣ್ತುಂಬಿಕೊಳ್ಳಲಿದ್ದಾರೆ.
ಪ್ರಧಾನಿಗೆ ಬಿದಿರು ಕಲೆ ಮೂರ್ತಿ ನೀಡಿ ಸಮ್ಮಾನಉದ್ಘಾಟನೆಗೆ ಆಗಮಿಸುತ್ತಿರುವ ಪ್ರಧಾನಿ ಮೋದಿ ಅವರಿಗೆ ರಾಷ್ಟ್ರಧ್ವಜ ಸ್ಮರಣಿಕೆ, ಏಲಕ್ಕಿ ಹಾರ, ಬೀದರ್ ಬಿದರುಕಲೆ ಮೂರ್ತಿಯನ್ನು ನೀಡಿ ಸಮ್ಮಾನಿಸಲಾಗುವುದು. ಹುಬ್ಬಳ್ಳಿಯ ಬೆಂಗೇರಿ ಹಾಗೂ ಗರಗದಲ್ಲಿ ತಯಾರಿಸಲಾದ ಟೀಕ್‌ವುಡ್ ಚೌಕಟ್ಟು ಹೊಂದಿದ ರಾಷ್ಟ್ರಧ್ವಜ ಇರುವ ಸ್ಮರಣಿಕೆ ನೀಡಲಾಗುತ್ತಿದ್ದು, ಹಾವೇರಿಯಲ್ಲಿ ತಯಾರಿಸುವ ಏಲಕ್ಕಿ ಹಾರ ಹಾಕಲಾಗುತ್ತಿದೆ. ಧಾರವಾಡದ ವಿಶೇಷ ಕಸೂತಿ ಕಲೆ ಹೊಂದಿದ ಕೈಮಗ್ಗದ ಶಾಲು, ಬೀದರ್‌ನ ಬಿದಿರು ಕಲೆಯಲ್ಲಿ ಅರಳಿದ ಸ್ವಾಮಿ ವಿವೇಕಾನಂದರ ಮೂರ್ತಿ ನೀಡಿ ಗೌರವಿಸಲಾಗುತ್ತಿದೆ. ಪ್ರಧಾನಿ ಮೋದಿ ಜ.12ರಂದು ಮಧ್ಯಾಹ್ನ ಹುಬ್ಬಳ್ಳಿಗೆ ಆಗಮಿಸಲಿದ್ದು, ವಿಮಾನ ನಿಲ್ದಾಣದಿಂದ ರೈಲ್ವೆ ಮೈದಾನದವರೆಗೆ ಸುಮಾರು 8 ಕಿ.ಮೀ.ವರೆಗೆ ರಸ್ತೆಯ ಎರಡೂ ಇಕ್ಕೆಲುಗಳಲ್ಲಿ ನಿಲ್ಲಲಿರುವ ಜನರತ್ತ ಕೈಬೀಸುತ್ತ ಬರಲಿದ್ದು, 2-3 ಕಡೆ ವಾಹನದಿಂದ ಕೆಳಗಿಳಿದು ಜನರ ಬಳಿ ಹೋಗುವ ಸಾಧ್ಯತೆ ಇದೆ.