Advertisement

ಏಕತೆ ಸಾಧಿಸುವ ರಾಷ್ಟ್ರೀಯ ಚಿಂತನೆ ಅಗತ್ಯ: ಪ್ರಕಾಶ್‌

08:43 PM Aug 15, 2021 | Team Udayavani |

ಕಾರ್ಕಳ: ವಿಶ್ವದಲ್ಲಿ ಅತೀ ದೊಡ್ಡ ಪ್ರಜಾತಂತ್ರ ವ್ಯವಸ್ಥೆಯನ್ನು ಹೊಂದಿದ ರಾಷ್ಟ್ರ ನಮ್ಮದು. ನಾವು ಇತರರ ಹಕ್ಕಿಗೆ ಧಕ್ಕೆ ಬರದಂತೆ ಹಕ್ಕನ್ನು ಚಲಾಯಿಸುವುದೇ ಸಾಮಾಜಿಕ ಸ್ವಾತಂತ್ರ್ಯವಾಗಿದೆ. ಭೇದಭಾವ ಮರೆತು ಏಕತೆಯನ್ನು ಸಾಧಿಸುವ ರಾಷ್ಟ್ರೀಯತೆ ಚಿಂತನೆ ನಮ್ಮದಾಗಬೇಕಿದೆ ಎಂದು ಎಂದು ಕಾರ್ಕಳ ತಹಶೀಲ್ದಾರ್‌ ಪ್ರಕಾಶ್‌ ಎಸ್‌. ಮರಬಳ್ಳಿ ಹೇಳಿದರು.

Advertisement

ಕಾರ್ಕಳ ತಾಲೂಕಿನ ಗಾಂಧಿ ಮೈದಾನದಲ್ಲಿ ನಡೆದ 75ನೇ ಸ್ವಾತಂತ್ರ ದಿನಾಚರಣೆಯಲ್ಲಿ ಧ್ವಜಾರೋಹಣ ನಡೆಸಿ ಸಂದೇಶ ನೀಡಿದ ಅವರು ಬ್ರಿಟಿಷರ ದಾಸ್ಯ ಸಂಕೋಲೆಯಿಂದ ಮುಕ್ತಗೊಂಡ ಭಾರತ ಇಷ್ಟು ವರ್ಷಗಳಲ್ಲಿ ನಡೆದು ಬಂದ ದಾರಿ ಮತ್ತು ಸಾಧನೆ ಮಹತ್ತರವಾದುದು. ಇನ್ನು ಸಾಧಿಸುವಂತದ್ದು ಅನೇಕವಿದೆ. ಕೋಟ್ಯಂತರ ಹುತಾತ್ಮರ ಬಲಿದಾನದ ಫ‌ಲವಾಗಿ ಪಡೆದ ಸ್ವಾತಂತ್ರ್ಯ ದ ಸದ್ಬಳಕೆಯ ಬಗ್ಗೆ ದೃಷ್ಟಿ ಹರಿಸಬೇಕಾದುದು ಎಲ್ಲರ ಕರ್ತವ್ಯ. ತಂತ್ರಜ್ಞಾನ ಮತ್ತು ಸಂಪನ್ಮೂಲಗಳ ಬಳಕೆಯಿಂದ ಅಭಿವೃದ್ಧಿ ಹೊಂದಿದ ರಾಷ್ಟ್ರವೆಂಬ ಕೀರ್ತಿಗೆ ಭಾಜನರಾಗೋಣ ಎಂದು ಕರೆ ನೀಡಿದರು.

ಇದನ್ನೂ ಓದಿ:ಕೆಂಪುಕೋಟೆಯ ರಕ್ಷಣಾ ಕಂಟೇನರ್‌ಗಳ ಮೇಲೆ ಮೂಡಿತು ಸ್ವಾತಂತ್ರ್ಯ ಹೋರಾಟಗಾರರ ಚಿತ್ರಕಲೆ

ತಾ.ಪಂ ಕಾರ್ಯನಿರ್ವಹಣಾಧಿಕಾರಿ ಗುರುದತ್ತ್ ಎಂ.ಎನ್‌, ಪುರಸಭೆ ಅಧ್ಯಕ್ಷೆ ಸುಮಾಕೇಶವ್‌, ಉಪಾಧ್ಯಕ್ಷೆ ಪಲ್ಲವಿ, ಪುರಸಭೆ ಮುಖ್ಯಾಧಿಕಾರಿ ರೂಪಾ ಟಿ. ಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ವೆಂಕಟೇಶ್‌ ನಾಯಕ್‌ , ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ರತ್ನಾಕರ ಅಮೀನ್‌, ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಜೋಕಿಂ ಪಿಂಟೋ, ಡಿವೈಎಸ್ಪಿ ವಿಜಯಪ್ರಸಾದ್‌, ವೃತ್ತನಿರೀಕ್ಷಕ ಸಂಪತ್‌ಕುಮಾರ್‌. ಎಸ್‌ಐಗಳಾದ ನಗರ ಠಾಣೆಯ ಮಧು ಬಿ.ಇ, ತೇಜಸ್ವಿ ಟಿ. ಇಲಾಖಾಧಿಕಾರಿಗಳು ಜನಪ್ರತಿನಿಧಿಗಳು ಸಿಬಂದಿ ಉಪಸ್ಥಿತರಿದ್ದರು. ಪೊಲೀಸ್‌ ಹಾಗೂ ಗೃಹರಕ್ಷಕ ದಳದವರಿಂದ ಪೆರೇಡ್‌ ನಗರ ಠಾಣೆ ಎಸ್‌ಐ ಮಧು ಬಿ.ಇ. ನೇತೃತ್ವದಲ್ಲಿ ನಡೆಯಿತು. ಸಂಜಯ್‌ ದೇವಾಡಿಗ, ಗಣೇಶ್‌  ಕಾರ್ಯಕ್ರಮ ನಿರ್ವಹಿಸಿದರು. ಗಣ್ಯರು ಮಹಾತ್ಮಾ ಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಿದರು.

ಆರೋಗ್ಯ ಕ್ಷೇತ್ರದವರಿಗೆ ಸಮ್ಮಾನ
ಕಾರ್ಯಕ್ರಮದಲ್ಲಿ ತಾ| ಆರೋಗ್ಯಾಧಿಕಾರಿ ಡಾ| ಕೃಷ್ಣಾನಂದ ಶೆಟ್ಟಿ, ಪ್ರಾ.ಆ. ಕೇಂದ್ರ ಇರ್ವತ್ತೂರು, ವೈದ್ಯಾಧಿಕಾರಿ ಡಾ| ಯಶೋಧರ ಎಂ, ನಿಟ್ಟೆ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ| ಹರೀಶ್‌ ಆಚಾರ್ಯ, ಕಾರ್ಕಳ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಶ್ರೀನಿವಾಸ ಪೈ, ಅಕ್ಷರ ದಾಸೋಹ ಇಲಾಖೆ ಸಹಾಯಕ ನಿರ್ದೇಶಕ ಭಾಸ್ಕರ್‌, ಶುಶ್ರೂಷಕಿ ಸೌಮ್ಯಶ್ರೀ, ಕಿರಿಯ ಪ್ರಯೋಗ ಶಾಲಾ ತಂತ್ರಜ್ಞ ಸುದರ್ಶನ್‌, ಫಾರ್ಮಸಿಸ್ಟ್‌ ನರಸಿಂಹ ಕಿಣಿ, ಹಿರಿಯ ಆರೋಗ್ಯ ನಿರೀಕ್ಷಕ ಬಿ.ವಿ ಶಿವರಾಮ ರಾವ್‌, ಹಿ.ಪ್ರಾ. ಆರೋಗ್ಯ ಸಂರಕ್ಷಣಾಧಿಕಾರಿ ಅನ್ನಕುಟ್ಟಿ, ಪ್ರಾ.ಆ.ಸಂರಕ್ಷಣಾಧಿಕಾರಿ ಪುಷ್ಪಲತಾ, ಆ್ಯಂಬುಲೆನ್ಸ್‌ ಚಾಲಕ ಅರುಣ್‌ಕುಮಾರ್‌ ಜೈನ್‌, ಡಿ.ಗ್ರೂಪ್‌ ನೌಕರ ಸಂದೀಪ್‌ ಪೂಜಾರಿ, ಆಶಾ ಕಾರ್ಯಕರ್ತೆಯರಾದ ಮಾಳದ ಪದ್ಮಲತಾ ದೇವಾಡಿಗ, ಮಿಯ್ನಾರಿನ ಜಯಶ್ರೀ ಅವರನ್ನು ಸಮ್ಮಾನಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next