Advertisement

2025ರೊಳಗೆ ಕ್ಷಯ ಮೂಲೋತ್ಪಾಟನೆಗೆ ಕೇಂದ್ರ ಯೋಜನೆ

09:44 PM May 16, 2022 | Team Udayavani |

ನವದೆಹಲಿ: ವಿಶ್ವದಲ್ಲಿ ಈಗಲೂ ಕ್ಷಯ ಒಂದು ದೊಡ್ಡ ಸಮಸ್ಯೆಯಾಗಿದೆ. ಇದನ್ನು ಭಾರತದಿಂದ 2025ರೊಳಗೆ ಮೂಲೋತ್ಪಾಟನೆ ಮಾಡಲು ಕೇಂದ್ರ ಸರ್ಕಾರ ಸದ್ಯದಲ್ಲೇ ಯೋಜನೆಯೊಂದನ್ನು ಜಾರಿ ಮಾಡಲಿದೆ.

Advertisement

ಬಹುಶಃ ಜೂನ್‌ ತಿಂಗಳ ಮೊದಲ ವಾರದಲ್ಲಿ ಈ ಯೋಜನೆ ಜಾರಿಯಾಗಬಹುದು. ಈಗಾಗಲೇ ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಸೂಚನೆ ರವಾನಿಸಿದೆ.

ಕ್ಷಯರೋಗಿಗಳಿಗೆ ಸಾಮುದಾಯಿಕ ನೆರವು ನೀಡಬೇಕು, ಜಿಲ್ಲಾ, ತಾಲೂಕು ಮಟ್ಟಗಳಿಗೂ ಈ ನೆರವು ವಿಸ್ತಾರವಾಗಬೇಕು ಎಂದು ಕೇಂದ್ರ ಸೂಚನೆ ನೀಡಿದೆ.

ಕೇಂದ್ರ ಆರೋಗ್ಯ ಸಚಿವಾಲಯ ಸದ್ಯ ನೀಡಿರುವ ಸೂಚನೆ ಪ್ರಕಾರ; ತಾಲೂಕುಗಳು, ವಾರ್ಡ್‌ಗಳನ್ನೂ ಸೇರಿಸಿಕೊಂಡು ಜನರಿಗೆ ಪೌಷ್ಟಿಕಾಂಶ, ಚಿಕಿತ್ಸೆ, ಮೌಖಿಕ ಸಹಾಯವನ್ನು ಮಾಡಬೇಕೆಂದು ತಿಳಿಸಲಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next