Advertisement
ಕೋವಿಡ್ ಶಿರೋಸ್ ಅಭಿಯಾನ ಕಳೆದ ಆಗಸ್ಟ್‌ನಲ್ಲಿ ಆರಂಭವಾಗಿತ್ತು. ಟ್ವಿಟರ್ ಬಳಸಿ ಕೋವಿಡ್ ಸಂತ್ರಸ್ತರಿಗೆ ನೆರವಾದ ಮಹಿಳೆಯರನ್ನು ಗುರುತಿಸು ವಂತೆ ಟ್ವಿಟರ್ ದೇಶದ ಜನರಿಂದ ನಾಮಿನೇಶನ್ ಆಹ್ವಾನಿಸಿತ್ತು.
ಟ್ವಿಟರ್ ಜಾಲತಾಣ ಬಳಸಿ ಕೊರೊನಾ ರೋಗಿಗಳಿಗೆ ರಕ್ತ ಪೂರೈಕೆ, ಪ್ಲಾಸ್ಮಾ ಲಭ್ಯವಾಗಲು ನೆರವಾಗುವುದು, ಆಸ್ಪತ್ರೆಗಳಲ್ಲಿ ಹಾಸಿಗೆ ಲಭ್ಯತೆ ಮಾಹಿತಿ ಒದಗಿಸುವುದು, ಕೊರೊನಾ ರೋಗಿಗಳಿಗೆ ಔಷಧಗಳನ್ನು ತಲುಪಿಸುವುದು ಮುಂತಾದ ಅನೇಕ ಕಾರ್ಯಗಳನ್ನು ಲಾಕ್‌ಡೌನ್ ಸಂದರ್ಭದಲ್ಲಿ ಫತಹಿನ್ ಮಿಸ್ಬಾ ಮಾಡಿದ್ದರು. ರಾಷ್ಟ್ರಮಟ್ಟದ ಮಾನ್ಯತೆ
ಕೋವಿಡ್ ರೋಗಿಗಳು ಹಾಗೂ ಅವರ ಬಂಧುಗಳಿಗೆ ನೆರವಾಗಲು ಯಾವ ದಾರಿಯಲ್ಲಿ ಹೋಗಬೇಕು ಎಂದು ಮೊದಲು ಗೊತ್ತಾಗಲಿಲ್ಲ. ಮುಂದೆ ಯಾವುದೋ ದಾರಿ ಹಿಡ್ಕೊಂಡು ಹೋಗಿ ಗಮ್ಯ ತಲುಪಿದೆ. ನನ್ನ ಸೇವೆಗೆ ರಾಷ್ಟ್ರಮಟ್ಟದಲ್ಲಿ ಇಂತಹ ಮಾನ್ಯತೆ ಸಿಗುತ್ತದೆ ಎಂಬ ನಿರೀಕ್ಷೆ ಇರಲಿಲ್ಲ. ಆವತ್ತು ಅಮೆರಿಕಕ್ಕೆ ವಿಮಾನ ಸಂಚಾರ ಇದ್ದಿದ್ದರೆ ಲಾಕ್‌ಡೌನ್ ವೇಳೆ ಸಾಮಾಜಿಕ ಸೇವೆ ಸಲ್ಲಿಸುವ ಅವಕಾಶ ಸಿಗುತ್ತಿರಲಿಲ್ಲ. ವಿಮಾನ ಸಂಚಾರ ರದ್ದಾಗಿದ್ದೇ ನನ್ನ ಪಾಲಿಗೆ ವರವಾಯಿತು ಎಂದು ಫತಹಿನ್ ಮಿಸ್ಬಾ ಅವರು ಶುಕ್ರವಾರ “ಉದಯವಾಣಿ’ಗೆ ತಿಳಿಸಿದರು.
Related Articles
Advertisement
ಇನ್ಫೋಸಿಸ್ ಫೌಂಡೇಷನ್‌ನ ಡಾ| ಸುಧಾ ಮೂರ್ತಿ ಅವರು ನನ್ನ ಸಾಮಾಜಿಕ ಸೇವೆಗೆ ಸ್ಫೂರ್ತಿಯಾಗಿದ್ದಾರೆ. ಯಾರಿಗೆ ನೆರವಿನ ಅಗತ್ಯ ವಿರುತ್ತದೆಯೋ ಅಂಥವರಿಗೆ ನೆರವಾಗಬೇಕು ಎಂಬುದನ್ನು ಡಾ| ಸುಧಾ ಮೂರ್ತಿ ಅವರಿಂದ ಕಲಿತಿದ್ದೇನೆ. ಸಾಮಾಜಿಕ ಕಾರ್ಯ ನನಗೆ ಆತ್ಮ ತೃಪ್ತಿಯನ್ನು ತಂದು ಕೊಡುತ್ತದೆ.-ಫತಹಿನ್ ಮಿಸ್ಬಾ, ಸಾಮಾಜಿಕ ಕಾರ್ಯಕರ್ತೆ – ಕೂಡ್ಲಿ ಗುರುರಾಜ