Advertisement

ರಾಷ್ಟ್ರೀಯ ಪಿಂಚಣಿ ಸೇರ್ಪಡೆ ಗರಿಷ್ಠ ವಯಸ್ಸು 65ಕ್ಕೆ ಏರಿಕೆ

03:27 PM Sep 11, 2017 | |

ಹೊಸದಿಲ್ಲಿ : ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್‌) ಸೇರ್ಪಡೆಯ ಗರಿಷ್ಠ  ವಯೋಮಿತಿಯನ್ನು ಈಗಿನ 60ರಿಂದ 65ಕ್ಕೆ ಏರಿಸಲಾಗಿದೆ ಎಂದು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್ಆರ್‌ಡಿಎ) ಇಂದು ಸೋಮವಾರ ಪ್ರಕಟಿಸಿದೆ. 

Advertisement

ಪಿಎಫ್ಆರ್‌ಡಿಎ ಇದರ ಅಧ್ಯಕ್ಷ ಹೇಮಂತ ಕಂಟ್ರಾಕ್ಟರ್‌ ಅವರು ಈ ವಿಷಯವನ್ನು ಇಂದಿಲ್ಲಿ ನಡೆದ ಸಮಾವೇಶದಲ್ಲಿ ಪ್ರಕಟಿಸಿದರು. ಜನರ ನಿವೃತ್ತಿ ನಿಧಿಯನ್ನು ರಾಷ್ಟ್ರೀಯ ಪಿಂಚಣಿ ನಿಧಿಗೆ ವರ್ಗಾಯಿಸುವ ಕುರಿತಾದ ಸಮಾವೇಶದಲ್ಲಿ ಮಾತನಾಡುತ್ತಿದ್ದ ಅವರು, “ಗರಿಷ್ಠ ವಯೋಮಿತಿ ಏರಿಕೆ ಪ್ರಸ್ತಾವಕ್ಕೆ ಈಗಾಗಲೇ ಅನುಮತಿ ನೀಡಲಾಗಿದ್ದು ಈಗಿನ್ನು ಶೀಘ್ರದಲ್ಲೇ ಆ ಬಗ್ಗೆ ಅಧಿಸೂಚನೆ ಹೊರಟು ಬರಲಿದೆ’ ಎಂದು ತಿಳಿಸಿದರು.

“ಎನ್‌ಪಿಎಸ್‌ ಪ್ರಕೃತ 18ರಿಂದ 60 ವರ್ಷ ವಯಸ್ಸಿನವರಿಗೆ ಮುಕ್ತವಾಗಿದೆ ಮತ್ತು ನಮ್ಮ ಮಂಡಳಿಯು ಈ ಯೋಜನೆ ಸೇರ್ಪಡೆಯ ಗರಿಷ್ಠ ವಯೋಮಿತಿಯನ್ನು 60ರಿಂದ 65ಕ್ಕೆ ಏರಿಸಿದೆ’ ಎಂದು ಕಂಟ್ರಾಕ್ಟರ್‌ ಹೇಳಿದರು. 

ಎನ್‌ಪಿಎಸ್‌ ಯೋಜನೆ ಸದಸ್ಯರು ತಮ್ಮ 70 ವರ್ಷ ಪ್ರಾಯದ ವರೆಗೂ ನಿಧಿಗೆ ವಂತಿಗೆ ನೀಡಬಹುದಾಗಿದೆ ಎಂದವರು ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next