Advertisement
ಡಿಸೆಂಬರ್ 22 ಶ್ರೀನಿವಾಸ ರಾಮಾನುಜನ್ ಅವರ ಜನ್ಮದಿನ. ರಾಮಾನುಜನ್ ಅವರ ಗೌರವಾರ್ಥವಾಗಿ ಭಾರತದಲ್ಲಿ ಈ ದಿನವನ್ನು ರಾಷ್ಟ್ರೀಯ ಗಣಿತ ದಿನವಾಗಿ ಆಚರಿಸಲಾಗುತ್ತದೆ. ಅಲ್ಲದೇ ರಾಮಾನುಜನ್ ಅವರ ಸ್ಮರಣಾರ್ಥ ಸ್ಥಾಪಿಸಲಾಗಿರುವ “ರಾಮಾನುಜನ್ ಪ್ರಶಸ್ತಿ’ ಯನ್ನು ಅಭಿವೃದ್ಧಿಶೀಲ ರಾಷ್ಟ್ರದಲ್ಲಿ ಅತ್ಯುತ್ತಮ ಸಂಶೋಧನೆ ನಡೆಸಿದ 45 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವ ಗಣಿತ ತಜ್ಞರಿಗೆ ಪ್ರತೀ ವರ್ಷ ನೀಡಲಾಗುತ್ತದೆ.19ನೇ ಶತಮಾನದ ಕೊನೆಯಲ್ಲಿ ವಸಾಹತು ಶಾಹಿ ಭಾರತದಲ್ಲಿ ತಮಿಳುನಾಡಿನ ಬಡ ಕುಟುಂಬದಲ್ಲಿ ಜನಿಸಿದ ರಾಮಾನುಜನ್ ಅವರ ಅದ್ವಿತೀಯ ಸಾಧನೆಗಳ ದಾರಿ ಸುಲಭ ¨ªಾಗಿರಲಿಲ್ಲ. ಪಾಶ್ಚಾತ್ಯ ಗಣಿತಜ್ಞರಿಂದ ಸ್ವೀಕೃತಿ ಯನ್ನು ಪಡೆಯುವುದಕ್ಕಾಗಿಯೇ ಅವರು ಸಾಕಷ್ಟು ಹೆಣಗಾಡಿದ್ದರು. ಮಾತ್ರವಲ್ಲದೆ ಎರಡು ಬಾರಿ ವಿಶ್ವವಿದ್ಯಾನಿಲಯದಿಂದ ಹೊರಹಾಕ ಲ್ಪಟ್ಟಿದ್ದರು. ಆದರೂ ಗಣಿತದ ಮೇಲಿನ ಪ್ರೀತಿ, ಆಸಕ್ತಿಯನ್ನು ಅವರೆಂದೂ ಕಳೆದುಕೊಳ್ಳಲಿಲ್ಲ.
Related Articles
Advertisement
1,729=13+ 123=93+103 ಇಂದಿಗೂ ಈ ಸಂಖ್ಯೆ ಮ್ಯಾಜಿಕ್ ಸಂಖ್ಯೆ ಎಂದೇ ಕರೆಯಲ್ಪಡುತ್ತದೆ.ಜಿ.ಎಚ್.ಹಾರ್ಡಿ ಅವರು ಕಂಡುಕೊಂಡಂತೆ ರಾಮಾನುಜನ್ ಅವರ ಮೆದುಳು ಒಂದು ಕ್ಷಣದಲ್ಲಿ 17,383 ಮೂಲ ಸಂಖ್ಯೆಯ ಗರಿಷ್ಠ ಕ್ರಮಪಲ್ಲಟನೆಗಳನ್ನು ಪರಿಶೋಧಿಸುವಷ್ಟು ಸಮರ್ಥವಾಗಿತ್ತು. ಇಂದಿನ ಅತೀ ವೇಗದ ಯುಗದಲ್ಲಿನ ಅತ್ಯುತ್ತಮ ಕಂಪ್ಯೂಟರ್ ಕೂಡ ಅದನ್ನು ಕಂಡುಹಿಡಿಯಲು ಒಂಬತ್ತು ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಮಾತ್ರವಲ್ಲದೆ ಇಂದಿಗೂ ರಾಮಾನುಜನ್ ಅವರಷ್ಟು ವೇಗವಾಗಿ ಮತ್ತು ನಿಖರವಾಗಿ ಡಿಫರೆನ್ಶಿಯಲ್ ಕಲನಶಾಸ್ತ್ರದಲ್ಲಿ ಉಪ-ಸಂಖ್ಯೆಗಳು ಮತ್ತು ಬಾಹ್ಯ ಸಂಖ್ಯೆಯ ಮೂಲವನ್ನು ಪಡೆಯಲು ಸಾಧ್ಯವಿಲ್ಲ.
ರಾಮಾನುಜನ್ ಅವರು ಬದುಕಿದ್ದು ಕೇವಲ 32 ವರ್ಷಗಳು. ಆದರೆ ಅಲ್ಪಾವಧಿಯಲ್ಲಿ ಅವರು ಸೂಪರ್ ಕಂಪ್ಯೂಟರ್‌ಗಳ ಯುಗ ದಲ್ಲಿಯೂ ಗ್ರಾಹ್ಯವಾಗದೇ ಉಳಿದಿರುವ ಸಿದ್ಧಾಂತಗಳನ್ನು, ಸೂತ್ರಗಳನ್ನು ತಯಾರಿಸಿದ್ದರು. ಜಗತ್ತಿಗೆ ಸುಮಾರು 4,000 ಸೂತ್ರಗಳು ಮತ್ತು ಪ್ರಮೇಯಗಳನ್ನು ಕೊಡುಗೆಯಾಗಿ ಕೊಟ್ಟಿ¨ªಾರೆ. ಅಲ್ಲದೇ ನಾಲ್ಕು ವರ್ಷಗಳ ಕಾಲ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ¨ªಾಗ ತಮ್ಮ ಮಾರ್ಗದರ್ಶಕರಾದ ಪ್ರೊ| ಹಾರ್ಡಿ ಅವ ರೊಂದಿಗೆ ಗಣಿತದ ಮಹತ್ವವನ್ನು ತಿಳಿಸುವ ಅನೇಕ ಪತ್ರಿಕೆಗಳನ್ನು ಪ್ರಕಟಿಸಿದ್ದರು.
ಶ್ರೀನಿವಾಸ ರಾಮಾನುಜನ್ ಅವರು ಗಣಿತದ ಪ್ರಾಡಿಜಿಗಳನ್ನು ಬಿಡಿ ಹಾಳೆಗಳ ಮೇಲೆ ಸೂತ್ರಗಳ ಅನಂತರ ಸೂತ್ರಗಳನ್ನು ಗೀಚುತ್ತಿದ್ದರು. ಕ್ಷಯರೋಗಕ್ಕೆ ಬಲಿಯಾಗಿದ್ದ ರಾಮಾನುಜನ್ ಅವರು ಕಾಲವಾಗಿ ಐವತ್ತು ವರ್ಷಗಳ ಅನಂತರ ಪತ್ತೆಯಾದ ಅವರು ಬರೆದಿದ್ದ ಕಾಗದದ ಹಾಳೆಗಳು ಗಣಿತ ಜಗತ್ತಿನಲ್ಲಿ ಹೊಸ ಅಲೆಗಳನ್ನು ಸೃಷ್ಟಿಸಿದವು. ರಾಮಾನುಜನ್ ಅವರು ಕೊಟ್ಟಿರುವ ಈ ಸೂತ್ರಗಳೆಂಬ ಉಪಕರಣದೊಂದಿಗೆ ಭೌತ ವಿಜ್ಞಾನಿಗಳು ಇಂದಿಗೂ ಕಪ್ಪುಕುಳಿಗಳಂತಹ ಬ್ರಹ್ಮಾಂಡದ ಅನೇಕ ಸತ್ಯಗಳನ್ನು ಅನ್ವೇಷಿಸುವ ಪ್ರಯತ್ನ ಮಾಡುತ್ತಿದ್ದಾರೆ. – ಬಿ. ಗಣೇಶ್ ನಾಯಕ್, ಉಜಿರೆ