Advertisement

National ಮಲ್ಲಕಂಬ: ರಾಜ್ಯತಂಡ ಪ್ರಕಟ

11:32 PM Oct 24, 2023 | Team Udayavani |

ಮೂಡಬಿದಿರೆ: ಅಕ್ಟೋಬರ್‌ 26ರಿಂದ ಗೋವಾದಲ್ಲಿ ನಡೆಯಲಿರುವ 37ನೇ ರಾಷ್ಟ್ರೀಯ ಮಲ್ಲಕಂಬ ಕ್ರೀಡಾಕೂಟಕ್ಕೆ ರಾಜ್ಯ ತಂಡವನ್ನು ಆಯ್ಕೆ ಮಾಡಲಾಗಿದೆ. ಕರ್ನಾಟಕ ಮಲ್ಲಕಂಬ ಅಸೋಸಿಯೇಷನ್‌ ಆಶ್ರಯದಲ್ಲಿ ಬಾಲಕೋಟೆ ಜಿಲ್ಲೆಯ ತುಳಸಿಗಿರಿ ಉದ್ದಂಡಪ್ಪ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಸಮಾವೇಶದಲ್ಲಿ ಈ ಆಯ್ಕೆ ಪ್ರಕ್ರಿಯೆಯನ್ನು ಅಂತಿಮಗೊಳಿಸಲಾಯಿತು.

Advertisement

ಕರ್ನಾಟಕ ರಾಜ್ಯ ಮಲ್ಲಕಂಬ ತಂಡಕ್ಕಾಗಿ ಒಟ್ಟು 12 ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗಿದ್ದು, ಇದರಲ್ಲಿ ಮೂಡಬಿದಿರೆಯ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಮಲ್ಲಕಂಬ ತಂಡದ ಬಾಲಕರಾದ ಹನುಮಂತ್‌ ಎಂ., ಆಕಾಶ್‌ ಪಿ., ವಿನಾ¿åಕ್‌ ಕೆ. ಹಾಗೂ ಬಾಲಕಿಯರ ವಿಭಾಗದಲ್ಲಿ ಭಾಗ್ಯಶ್ರೀ ಎಸ್‌., ದೊಡ್ಡಮ್ಮ ಪಿ., ಕಾವೇರಿ ಎಸ್‌. ಸೇರಿ ಒಟ್ಟು 6 ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ. ಈ ಆರೂ ವಿದ್ಯಾರ್ಥಿಗಳು ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಉಚಿತ ಶಿಕ್ಷಣ ಯೋಜನೆಯಡಿ 4ನೇ ತರಗತಿಯಿಂದ ಸ್ನಾತಕೋತ್ತರ ತರಗತಿಯವರೆಗೆ ಅಧ್ಯಯನ ನಡೆಸುತ್ತಿದ್ದು, ಆಳ್ವಾಸ್‌ನ ಮಲ್ಲಕಂಬ 110 ವಿದ್ಯಾರ್ಥಿಗಳ ತಂಡದ ಸದಸ್ಯರಾಗಿರುವುದು ಸಂತಸ ತಂದಿದೆ ಎಂದು ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next