ಧಾರವಾಡ: ಇಲ್ಲಿನ ಕರ್ನಾಟಕ ಉಚ್ಛ ನ್ಯಾಯಾಲಯ ಪೀಠದಲ್ಲಿ ಇಂದು ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 221 ಪ್ರಕರಣಗಳಲ್ಲಿ ಸುಮಾರು 4 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಪರಿಹಾರಕ್ಕೆ ಇತ್ಯರ್ಥಪಡಿಸಲಾಯಿತು.
ಹಿರಿಯ ನ್ಯಾಯಮೂರ್ತಿ ಕೆ.ಎಸ್.ಮುದಗಲ್, ನ್ಯಾಯಮೂರ್ತಿಗಳಾದ ಪ್ರದೀಪ್ ಸಿಂಗ ಯೆರೂರ್,ಎಂ.ಜಿ.ಎಸ್ . ಕಮಲ್ , ಅದಾಲತ್‌ನ ಸದಸ್ಯರುಗಳಾದ ಎಮ್.ಟಿ . ಬಂಗಿ , ಡಿ . ಎಲ್ . ಲಾಡಖಾನ ಮತ್ತು ಎಮ್. ಸಿ . ಹುಕ್ಕೇರಿ ಅವರನ್ನೊಳಗೊಂಡ 3 ಪೀಠಗಳಲ್ಲಿ ಒಟ್ಟು 1227 ಪ್ರಕರಣಗಳನ್ನು ವಿಚಾರಣೆಗೆ ಗುರುತಿಸಿಕೊಂಡು,ಅವುಗಳಲ್ಲಿ ಒಟ್ಟು 221 ಪ್ರಕರಣಗಳನ್ನು ರೂ .4,46,53,063 ಮೊತ್ತಕ್ಕೆ ಇತ್ಯರ್ಥಪಡಿಸಲಾಯಿತು.
ನ್ಯಾಯಮೂರ್ತಿಗಳಾದ ಎಂ.ಜಿ.ಎಸ್ . ಕಮಾಲ್ ಹಾಗೂ ಎಮ್ . ಸಿ . ಹುಕ್ಕೇರಿ ವಕೀಲರವರ ಲೋಕ ಅದಲಾತ್ ಪೀಠವು ಜಮೀನಿನ ವ್ಯಾಜ್ಯಕ್ಕೆ ಸಂಬಂಧಿಸಿದಂತೆ 30 ವರ್ಷಗಳ ಹಳೆಯದಾದ ದಿವಾಣಿ ಪ್ರಕರಣವನ್ನು ರಾಜಿ – ಸಂಧಾನದ ಮೂಲಕ ಉಭಯ ಪಕ್ಷಗಾರರ ಸಮಕ್ಷಮ ಇತ್ಯರ್ಥಪಡಿಸಿರುವುದು ಈ ಬಾರಿಯ ರಾಷ್ಟ್ರೀಯ ಲೋಕ ಅದಾಲತ್‌ನ ಹೆಗ್ಗಳಿಕೆಯಾಗಿದೆ .
ಇದರಿಂದ ಉಭಯ ಪಕ್ಷಗಾರರಿಗೆ ತುಂಬಾ ಅನುಕೂಲವಾಗಿದ್ದು ವ್ಯಾಜ್ಯ ಮುಕ್ತರಾಗಿರುತ್ತಾರೆ ಎಂದು ಹೈಕೋರ್ಟಿನ ನ್ಯಾಯಾಂಗದ ಅಧಿಕ ವಿಲೇಖನಾಧಿಕಾರಿ ಮತ್ತು ಉಚ್ಛ ನ್ಯಾಯಾಲಯ ಕಾನೂನು ಸೇವಾ ಸಮಿತಿ ಕಾರ್ಯದರ್ಶಿ ವೆಂಕಟೇಶ ಆರ್.ಹುಲಗಿ ತಿಳಿಸಿದ್ದಾರೆ.