ಬೆಂಗಳೂರು: ಇದೇ ಮೊದಲ ಬಾರಿ ಧಾರವಾಡ ಪೀಠದಲ್ಲಿ ಸರ್ಕಾರ ಹಾಗೂ ಸ್ಥಳೀಯಾಡಳಿತಕ್ಕೆ ಸಂಬಂಧಿಸಿದ 22 ಪ್ರಕರಣಗಳನ್ನು ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಇತ್ಯರ್ಥ ಪಡಿಸಲಾಗಿದೆ.
ಬೆಂಗಳೂರು, ಧಾರವಾಡ, ಕಲಬುರಗಿ ಪೀಠದಲ್ಲಿ ಒಟ್ಟು 1087 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಯಿತು.
ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ನಿರ್ದೇಶನದ ಮೇರೆಗೆ ಬೆಂಗಳೂರಿನ ಆರು ಪೀಠದಲ್ಲಿ 1,266 ಪ್ರಕರಣಗಳನ್ನು ಕೈಗೆತ್ತಿಕೊಂಡಿದ್ದು, 623 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ಅದರಲ್ಲಿ 612 ಪ್ರಕರಣಗಳು ಅಪಘಾತಕ್ಕೆ, 2 ಸಿವಿಲ್ ವ್ಯಾಜ್ಯ, 1 ವಾಣಿಜ್ಯ ಹಾಗೂ 8 ಎನ್‌ಐ ಆಕ್ಟ್ ಸಂಬಂಧಿಸಿದ ಪ್ರಕರಣದಲ್ಲಿ 14.91 ಕೋಟಿ ಮೊತ್ತ ಇತ್ಯರ್ಥಗೊಳಿಸಲಾಗಿದೆ.
ಧಾರವಾಡ ಪೀಠದಲ್ಲಿ ಜರುಗಿದ ರಾಷ್ಟ್ರೀಯ ಲೋಕ ಆದಾಲತ್‌ನ 5 ಪೀಠದಲ್ಲಿ 1006 ಪ್ರಕರಣ ಕೈಗೆತ್ತಿಕೊಂಡಿದ್ದು, ಅದರಲ್ಲಿ 272 ಪ್ರಕರಣ ಇತ್ಯರ್ಥಗೊಂಡಿದೆ. 244 ಅಪಘಾತ, 2 ಸಿವಿಲ್, 2 ಎನ್‌ಐ ಆಕ್ಟ್, 2 ಕೌಟುಂಬಿಕ ಹಾಗೂ 22 ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಒಟ್ಟು 4.11ಕೋಟಿ ರೂ. ಮೊತ್ತದ ವಾಜ್ಯ ಇತ್ಯರ್ಥ ಪಡಿಸಲಾಗಿದೆ.
ಕಲಬುರಗಿಯ ಉತ್ಛ ನ್ಯಾಯಾಲಯದ 2 ಪೀಠದಲ್ಲಿ 277 ಪ್ರಕರಣಗಳನ್ನು ಕೈಗೆತ್ತಿಕೊಂಡಿದ್ದು, ಅದರಲ್ಲಿ 192 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ. 189 ಅಪಘಾತ, 3 ಸಿವಿಲ್ ಪ್ರಕರಣದಲ್ಲಿ 6.34 ಕೋಟಿ ರೂ. ಮೊತ್ತ ಇತ್ಯರ್ಥಗೊಳಿಸಲಾಗಿದೆ.