ನವದೆಹಲಿ: ದುಬಾರಿ ಮರ್ಸಿಡೆಸ್ ಕಾರಿನಲ್ಲಿ ಮಾದಕ ದ್ರವ್ಯ ಸಾಗಾಟ ಮಾಡುತ್ತಿದ್ದ ರಾಷ್ಟ್ರ ಮಟ್ಟದ ಮಾಜಿ ಕುಸ್ತಿಪಟು ಹಾಗೂ ಆತನ ಸಂಗಡಿಗನನ್ನು ಬಂಧಿಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ಇದನ್ನೂ ಓದಿ:Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್ ಮೆಂಟ್ ಮಾಡಿಕೊಂಡ ಜೋಡಿ
ಹಿಮಾಚಲ್ ಪ್ರದೇಶದ ಗ್ರಾಮವೊಂದರಲ್ಲಿ ಈತ ಮಲಾನಾ ಕ್ರೀಮ್ ಅನ್ನು ಖರೀದಿಸಿದ್ದು, ಅದನ್ನು ದೆಹಲಿ ಸೇರಿದಂತೆ ದೇಶದ ವಿವಿಧೆ ಮಾರಾಟ ಮಾಡುವ ಉದ್ದೇಶ ಹೊಂದಿದ್ದ. ಆದರೆ ದಕ್ಷಿಣ ದೆಹಲಿಯಲ್ಲಿ ತಪಾಸಣೆ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವಾಗಿ ವರದಿ ವಿವರಿಸಿದೆ.
ಮಾದಕ ದ್ರವ್ಯ ಖರೀದಿಸಿ ಹಿಂದಿರುಗುತ್ತಿರುವ ಇಬ್ಬರ ಕುರಿತು ಖಚಿತ ಮಾಹಿತಿ ಬಂದ ನಂತರ ತಪಾಸಣೆ ನಡೆಸಿದಾಗ ಮಾದಕ ದ್ರವ್ಯ ಪತ್ತೆಯಾಗಿರುವುದಾಗಿ ವರದಿ ತಿಳಿಸಿದೆ.
ಬಂಧಿತ ಆರೋಪಿಗಳನ್ನು ಹನುಮಂತೆ (30ವರ್ಷ) ಮತ್ತು ಅದ್ನಾನ್ ಅಹ್ಮದ್ (32ವರ್ಷ) ಎಂದು ಗುರುತಿಸಲಾಗಿದ್ದು, ಹನುಮಂತೆ ಸಿವಿಲ್ ಲೈನ್ಸ್ ನಿವಾಸಿಯಾಗಿದ್ದು, ಅದ್ನಾನ್ ಜಾಮೀಯಾ ನಗರ ನಿವಾಸಿ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕಾರಿನಲ್ಲಿದ್ದ ಹತ್ತು ಲಕ್ಷ ರೂಪಾಯಿ ಮೌಲ್ಯದ ಡ್ರಗ್ಸ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಹನುಮಂತೆ ಪದವಿದರನಾಗಿದ್ದು, ಈತ ಅಂತಾರಾಷ್ಟ್ರೀಯ ಮಟ್ಟದ ಕಿರಿಯ ವಿಭಾಗ ಮತ್ತು ರಾಷ್ಟ್ರೀಯ ಮಟ್ಟದ ಹೇವಿ ವ್ಹೇಟ್ ಕುಸ್ತಿ ಸ್ಪರ್ಧೆಯಲ್ಲಿ ಸ್ಪರ್ಧಿಸಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾನೆ.
2014ರಲ್ಲಿ ಗಾಯಗೊಂಡಿದ್ದರಿಂದ ಹನುಮಂತೆ ಬೆಡ್ ರೆಸ್ಟ್ ನಲ್ಲಿದ್ದು, ಈ ಸಂದರ್ಭದಲ್ಲಿ ಗೆಳೆಯರ ಸಹವಾಸದಿಂದ ಡ್ರಗ್ಸ್ ಸೇವನೆ ಅಭ್ಯಾಸ ಮಾಡಿಕೊಂಡಿರುವುದಾಗಿ ತಿಳಿಸಿದ್ದಾನೆ.