Advertisement

ತಲೆಗೆ ಗುಂಡು ಹೊಡೆದುಕೊಂಡು ಸಾವಿಗೆ ಶರಣಾದ ರಾಷ್ಟ್ರ ಮಟ್ಟದ ಶೂಟರ್

11:53 AM Sep 14, 2021 | Team Udayavani |

ಚಂಡೀಗಢ: ರಾಷ್ಟ್ರೀಯ ಮಟ್ಟದ ಶೂಟರ್ ನಮನವೀರ್ ಸಿಂಗ್ ಬ್ರಾರ್ ತನ್ನ ಮೊಹಾಲಿಯ ನಿವಾಸದಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. 28 ವರ್ಷದ ಶೂಟರ್ ತಲೆಯಲ್ಲಿ ಬುಲೆಟ್ ನಿಂದಾದ ಗಾಯ ಪತ್ತೆಯಾಗಿದೆ.

Advertisement

ಸೋಮವಾರ (ಸೆ.13) ಈ ಘಟನೆ ನಡೆದಿದ್ದು, ಇದು ಆತ್ಮಹತ್ಯೆಯೋ ಅಥವಾ ಅಕಸ್ಮಾತಾಗಿ ನಡೆದ ಘಟನೆಯೋ ಎನ್ನುವ ಬಗ್ಗೆ ಇದುವರೆಗೂ ನಿಖರವಾಗಿ ಹೇಳಲು ಸಾಧ್ಯವಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಇದರ ವರದಿಗಾಗಿ ಕಾಯಲಾಗುತ್ತಿದೆ. ವರದಿಯ ಬಳಿಕ ನಮಗೆ ಹೆಚ್ಚಿನ ಮಾಹಿತಿ ತಿಳಿಯಲಿದೆ ಎಂದು ಮೊಹಾಲಿ ಡಿಸಿಪಿ ಗುರ್ಶೀರ್ ಸಿಂಗ್ ಸಂಧು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಹೊಸ ಜೆರ್ಸಿಯೊಂದಿಗೆ ಯುಎಇ ಚರಣದ ಮೊದಲ ಪಂದ್ಯವಾಡಲಿದೆ ಆರ್ ಸಿಬಿ ತಂಡ

ಘಟನೆಯ ಬಗ್ಗೆ ನಮನವೀರ್ ಸಿಂಗ್ ಬ್ರಾರ್ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೊಹಾಲಿಯ ಸೆಕ್ಟರ್ 71 ನಿವಾಸದಲ್ಲಿ ಅವರು ವಾಸವಿದ್ದರು.

Advertisement

ದಕ್ಷಿಣ ಕೊರಿಯಾದಲ್ಲಿ ನಡೆದಿದ್ದ ವಿಶ್ವ ಯುನಿವರ್ಸಿಟಿ ಗೇಮ್ಸ್ ನಲ್ಲಿ ನಮನ್ ವೀರ್ ಸಿಂಗ್ ಡಬಲ್ ಟ್ರಾಪ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next