Advertisement

National Level 5ನೇ ಓಪನ್‌ ಸರ್ಫಿಂಗ್‌ ಆರಂಭ

11:07 PM May 31, 2024 | Team Udayavani |

ಮೂಲ್ಕಿ: ಅಂತಾರಾಷ್ಟ್ರೀಯ ಮಟ್ಟದ ಖ್ಯಾತಿಯ ಸರ್ಫಿಂಗ್‌ ಕ್ರೀಡೆಯ ರಾಜಧಾನಿ ದ.ಕ. ಜಿಲ್ಲೆಯ ಮೂಲ್ಕಿ ಯಾಗಿದ್ದು, ಇತಿಹಾಸ ನಿರ್ಮಿಸಿರುವ ಈ ಕ್ರೀಡೆ ವಿಶ್ವದ ಎಲ್ಲೆಡೆ ಪ್ರಖ್ಯಾತಿಯನ್ನು ಹೊಂದಿರುವುದು ನಮ್ಮ ಜಿಲ್ಲೆಯ ಹೆಮ್ಮೆ. ಇದಕ್ಕಾಗಿ ಈ ಪ್ರದೇಶವನ್ನು ರಾಷ್ಟ್ರ ಮಟ್ಟದ ಸರ್ಫಿಂಗ್‌ ತಾಣವಾಗಿ ಗುರುತಿಸುವ ಕಾರ್ಯಕ್ಕೆ ಮುಂದಾಗಲಿದ್ದೇವೆ ಎಂದು ದ.ಕ. ಜಿಲ್ಲಾಧಿಕಾರಿ ಮುಲ್ಲೆ„ ಮುಗಿಲನ್‌ ಹೇಳಿದರು.
ಅವರು ಸಸಿಹಿತ್ಲು ಮುಂಡಾ ಬೀಚ್‌ನ ಸಮುದ್ರದಲ್ಲಿ 3 ದಿನಗಳ ರಾಷ್ಟ್ರಮಟ್ಟದ 5ನೇ ಓಪನ್‌ ಸರ್ಫಿಂಗ್‌ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.

Advertisement

ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟದ 70ಕ್ಕೂ ಹೆಚ್ಚು ಸ್ಪರ್ಧಾಳುಗಳ ಜತೆಗೆ ನೂರಾರು ರಾಷ್ಟ್ರಮಟ್ಟದ ಹಾಗೂ ವಿದೇಶಿ ಹವ್ಯಾಸಿ ಸ್ಪರ್ಧಿಗಳು ಇಲ್ಲಿಗೆ ಆಗಮಿಸಿದ್ದಾರೆ.

ಮಂಗಳೂರು ಬಂದರು ಪ್ರಾಧಿಕಾರದ ಉಪಾದ್ಯಾಕ್ಷ ಕೆ.ಜಿ. ನಾಥ್‌ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿ, ಬಂದರು ಪ್ರಾಧಿಕಾರ ಸರ್ಫಿಂಗ್‌ನಂತಹ ಕ್ರೀಡೆಯನ್ನು ಸದಾ ಪ್ರೋತ್ಸಾಹಿಸುತ್ತದೆ ಎಂದರು.

ಜಿಲ್ಲಾ ಪ್ರವಾಸೋದ್ಯಮ ಇಲಾ ಖೆಯ ನಿರ್ದೇಶಕ ಮಾಣಿಕ್ಯ ಎಂ., ಬಂದರು ಪ್ರಾಧಿಕಾರದ ಕಾರ್ಯದರ್ಶಿ ಜಿಜೋ ಥಾಮಸ್‌, ಸ್ವಾಮಿ ಫೌಂಡೇ ಶನ್‌ನ ನಿರ್ದೇಶಕ ಗೌರವ್‌ ಹೆಗ್ಡೆ , ಸರ್ಫಿಂಗ್‌ ಫೆಡರೇಶನ್‌ನ ಉಪಾ ಧ್ಯಕ್ಷ ರಾಮಮೋಹನ್‌ ಪೆರಾಜೆ ಉಪಸ್ಥಿತರಿದ್ದರು.
ಸ್ವಾಮಿ ಫೌಂಡೇಶನ್‌ನ ಸಂಸ್ಥಾಪಕ ಸರ್ಫಿಂಗ್‌ ಸ್ವಾಮಿಯವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾ ಯಿತು. ಸ್ಥಳೀಯರಾದ ಪ್ರಭಾಕರ ಪೂಜಾರಿ ಯವರು ಸ್ಪರ್ಧೆ ಆರಂಭಕ್ಕೂ ಮೊದಲು ಸಮುದ್ರ ಪೂಜೆ ಕಾರ್ಯಕ್ರಮದಲ್ಲಿ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next