Advertisement

ರಾಷ್ಟ್ರೀಯ ಕರಾಟೆ ಸ್ಪರ್ಧೆ; ಮುಖ್ಯಮಂತ್ರಿಗೆ ಆಹ್ವಾನ

09:56 AM Oct 12, 2017 | |

ಮಹಾನಗರ: ನೆಹರೂ ಮೈದಾನದಲ್ಲಿ ಇಂಡಿಯನ್‌ ಕರಾಟೆ ಚಾಂಪಿ ಯನ್‌ಶಿಪ್‌-2017 ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆ ನ. 4 ಮತ್ತು 5ರಂದು ಜರಗಲಿದ್ದು, ಇದರ ಉದ್ಘಾಟನೆಗೆ ಆಗಮಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬುಧವಾರ ಮೇಯರ್‌ ಕವಿತಾ ಸನಿಲ್‌ ನೇತೃತ್ವದಲ್ಲಿ ಕರಾಟೆ ಸಂಘಟಕರು ಬೆಂಗಳೂರಿನಲ್ಲಿ ಭೇಟಿಯಾಗಿ ಆಹ್ವಾನ ನೀಡಿದರು. 

Advertisement

ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಾದರಿಯಲ್ಲಿ ಇದೇ ಮೊದಲ ಬಾರಿಗೆ ಇಂತಹ ಪಂದ್ಯಾಟ ಆಯೋಜಿಸಲಾಗಿದ್ದು, ತೆರೆದ ಕ್ರೀಡಾಂಗಣ (ಓಪನ್‌ ಗ್ರೌಂಡ್‌)ದಲ್ಲಿ ದೊಡ್ಡ ಮಟ್ಟದಲ್ಲಿ ಪಂದ್ಯಾಟ ಆಯೋಜನೆಗೊಳ್ಳುವುದು ಅಪರೂಪ. ಪಂದ್ಯಾಟದ ಕ್ಷಣ ಕ್ಷಣದ ಮಾಹಿತಿಗಾಗಿ ಎಲೆಕ್ಟ್ರಾನಿಕ್ಸ್‌ ಸ್ಕೋರ್‌ ಬೋರ್ಡ್‌ಗಳನ್ನು ಬಳಸಲಾಗುತ್ತಿದೆ. ಕರಾಟೆಗೆ ಮ್ಯಾಟ್‌ ಅಳವಡಿಸಿದ ಸ್ಟೇಜ್‌ ಲಭ್ಯವಾಗುತ್ತಿದ್ದು, ಇದರ ಮ್ಯಾಟನ್ನು ಚೀನದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಜತೆಗೆ ವಾರ್ಮ್ ಅಪ್‌ ಏರಿಯಾ, ಎನ್‌ಕ್ವೆರಿ ಸೆಕ್ಷನ್‌ (ವಿಚಾರಣಾ ವಿಭಾಗ)ಗಳು ಜಾಗತಿಕ ಪಂದ್ಯಾಟಗಳನ್ನು ನೆನಪಿಸಲಿವೆ. ಸಾವಿರಕ್ಕೂ ಅಧಿಕ ಕರಾಟೆ ಪಟುಗಳು ದೇಶದ ಬೇರೆ ಬೇರೆ ರಾಜ್ಯಗಳಿಂದ ಆಗಮಿಸಲಿದ್ದಾರೆ ಎಂದು ಸಂಘಟಕರು ಮುಖ್ಯಮಂತ್ರಿಗೆ ವಿವರಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಕರಾಟೆ ಸಂಘಟಕ ಪ್ರಮುಖರಾದ ಸುರೇಂದ್ರ, ಸುರೇಶ್‌ ಶೆಟ್ಟಿ, ಸುಧೀರ್‌, ಮನೀಶ್‌ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next