Advertisement

ಪಂಡಿತಾರಾಧ್ಯ ಶ್ರೀಗಳಿಗೆ ರಾಷ್ಟ್ರೀಯ `ಕನ್ನಡ ಭಾರತಿ ರಂಗ ಪ್ರಶಸ್ತಿ’

09:53 PM Feb 24, 2022 | Team Udayavani |

ಸಾಣೇಹಳ್ಳಿ: ಇಲ್ಲಿನ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರನ್ನು ದೆಹಲಿ ಕರ್ನಾಟಕ ಸಂಘ ತನ್ನ ಈ ಬಾರಿಯ ರಾಷ್ಟ್ರೀಯ `ಕನ್ನಡ ಭಾರತಿ ರಂಗ ಪ್ರಶಸ್ತಿ’ಗೆ ಆಯ್ಕೆ ಮಾಡಿದೆ.

Advertisement

ರಂಗಭೂಮಿಯಲ್ಲಿ ಮಹತ್ತರ ಸೇವೆ ಸಲ್ಲಿಸಿದವರನ್ನು ಗುರುತಿಸಿ ಪ್ರಶಸ್ತಿ ನೀಡಿ ಪುರಸ್ಕರಿಸುವ ಸಂಪ್ರದಾಯವನ್ನು ಕರ್ನಾಟಕ ಸಂಘ 2015 ರಿಂದ ನಡೆಸಿಕೊಂಡು ಬರುತ್ತಿದೆ. 2015 ರಲ್ಲಿ ದೆಹಲಿಯ ಎಂ ವಿ ನಾರಾಯಣ, 2016 ರಲ್ಲಿ ಮಂಗಳೂರಿನ ಸರೋಜಿನಿ ಶೆಟ್ಟಿ, 2017 ರಲ್ಲಿ ಸುರೇಶ್ ಆನಗಳ್ಳಿ ಇವರಿಗೆ ನೀಡಲಾಗಿತ್ತು. 2018 ರಿಂದ 2021 ರವರೆಗೆ ಕರೋನಾ ಕಾರಣಕ್ಕೆ ರದ್ದುಗೊಳಿಸಲಾಗಿತ್ತು.

ಟಿ ಎಸ್ ನಾಗಾಭರಣ, ಶ್ರೀನಿವಾಸ ಜಿ ಕಪ್ಪಣ್ಣ ಮತ್ತು ಹೆಚ್ ಎಸ್ ಶಿವಪ್ರಕಾಶ್ ಅವರನ್ನೊಳಗೊಂಡ ಆಯ್ಕೆ ಸಮಿತಿಯು  ಈ ಬಾರಿಯ ಪ್ರಶಸ್ತಿಗೆ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳನ್ನು ಆಯ್ಕೆ ಮಾಡಿದೆ. ಪ್ರಶಸ್ತಿಯು ೫೦ ಸಾವಿರ ರೂಪಾಯಿಗಳ ನಗದು, ಪ್ರಶಸ್ತಿ ಫಲಕ, ಸ್ಮರಣಿಕೆಗಳನ್ನು ಹೊಂದಿರುತ್ತದೆ. ಪ್ರಶಸ್ತಿಯನ್ನು ಇದೇ ಫೆಬ್ರವರಿ 26 ರಂದು ದೆಹಲಿಯಲ್ಲಿ ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು ಎಂದು ದೆಹಲಿ ಕರ್ನಾಟಕ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

25 ರಂದು ಪಂಡಿತಾರಾಧ್ಯ ಶ್ರೀಗಳು ದೆಹಲಿಗೆ ತೆರಳಿ, 26 ರಂದು ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ, ಪ್ರಶಸ್ತಿ ಸ್ವೀಕರಿಸಿ 27 ರಂದು ಸಾಣೇಹಳ್ಳಿಗೆ ಹಿಂದಿರುಗುವರು ಎಂದು ಶ್ರೀಮಠದ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next