Advertisement

ರಾಷ್ಟ್ರೀಯ ಹೋಮಿಯೋಪತಿ ಸಂಸ್ಥೆ:ಬೆಂಗಳೂರಿನ ಡಾ. ಶ್ರೀಪಾದ ಹೆಗಡೆ ನೇಮಕ

04:58 PM Mar 26, 2022 | Team Udayavani |

ಬೆಂಗಳೂರು: ಕೋಲ್ಕತಾದಲ್ಲಿರುವ ಪ್ರತಿಷ್ಠಿತ ರಾಷ್ಟ್ರೀಯ ಹೋಮಿಯೋಪತಿ ಸಂಸ್ಥೆಯ ಗೌರವ ಸದಸ್ಯರ ನ್ನಾಗಿ ಇಲ್ಲಿನ ಹಿರಿಯ ಹೋಮಿಯೋಪತಿ ವೈದ್ಯರಾದ ಡಾ.ಶ್ರೀಪಾದ ಹೆಗಡೆ, ಹುಕ್ಲಮಕ್ಕಿ ಯವರನ್ನು ಕೇಂದ್ರ ಸರ್ಕಾರದ ಆಯುಷ್ ಮಂತ್ರಾಲಯ ಆಯ್ಕೆ ಮಾಡಿದೆ. ಡಾ. ಹೆಗಡೆ, ದಕ್ಷಿಣ ಭಾರತದ ಏಕೈಕ ಸದಸ್ಯರಾಗಿದ್ದಾರೆ.

Advertisement

ಜನಪರ ಕಾಳಜಿ, ನಿರಂತರ ಅಧ್ಯಯನ ಹಾಗೂ ಪ್ರಯೋಗಶೀಲ ಚಿಂತಕರೆಂದು ಗುರುತಿಸಲ್ಪಟ್ಟಿರುವ ಡಾ. ಹೆಗಡೆಯವರು, ಬೆಂಗಳೂರಿನ ಸರ್ಕಾರಿ ಹೋಮಿಯೋಪತಿ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯಲ್ಲಿ ಪ್ರಾಧ್ಯಾಪಕರಾಗಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತ ರಾಗಿದ್ದಾರೆ. ಉತ್ತಮ ವಾಗ್ಮಿಗಳೂ, ಅಪಾಯ ಅನುಭವದ ವಿಷಯ ತಜ್ಞರೂ ಆದ ಇವರು, ದೇಶ ವಿದೇಶಗಳ ಹಲವಾರು ಪ್ರತಿಷ್ಠಿತ ವೇದಿಕೆಯಲ್ಲಿ ಭಾಗವಹಿಸಿದವರು. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಗೋಷ್ಟಿ ಗಳನ್ನು, ವಿಚಾರ ಸಂಕಿರಣಗಳನ್ನೂ ಆಯೋಜಿಸಿದ್ದಾರೆ.

ಬೆಂಗಳೂರಿನ ವಿಜಯನಗರ ದಲ್ಲಿ ಶ್ರೀ ರಾಮಚಂದ್ರಾಪುರ ಮಠದ ಆಶ್ರಯದಲ್ಲಿ ಸತತ 14 ವರ್ಷಗಳಿಂದ 150ಕ್ಕೂ ಹೆಚ್ಚು ಉಚಿತ ಆರೋಗ್ಯ ಶಿಬಿರಗಳನ್ನು ನಡೆಸಿ ಸಾವಿರಾರು ಜನರಿಗೆ ಅನುಕೂಲ ಸೇವೆ ಸಲ್ಲಿಸಿದ್ದಾರೆ.

ಈಗಾಗಲೇ ಕೇಂದ್ರ ಸರ್ಕಾರವು ಇವರನ್ನು ನವದೆಹಲಿಯ ಕೇಂದ್ರೀಯ ಹೋಮಿಯೋಪತಿ ಪರಿಷತ್ ನ MARB ಗೌರವ ಸದಸ್ಯರನ್ನಾಗಿಯೂ ನೇಮಕ ಮಾಡಿರುವದನ್ನು ನೆನಪಿಸಿಕೊಳ್ಳಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next