ನೆಲಮಂಗಲ: ಇಲ್ಲಿನ ನೆಲಮಂಗಲ ತುಮಕೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಾಸ್ ಟೋಲ್ ಕಂಪನಿಯ ಅವಧಿ ಮುಗಿದ ಬಳಿಕವೂ ವಾಹನ ಸವಾರರಿಂದ ಟೋಲ್ ಶುಲ್ಕ ವಸೂಲಿ ಮಾಡುತ್ತಿರುವುದನ್ನು ಖಂಡಿಸಿ ವಕೀಲ ಜಗದೀಶ್ ಮತ್ತು ಕನ್ನಡ ಪರ ಸಂಘಟನೆಗಳ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಗುತ್ತಿದೆ.
ರಾಜ್ಯದ ವಿವಿಧ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ನೆಲಮಂಗಲ ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಶುಲ್ಕ ಸಂಗ್ರಹಕ್ಕೆ 19 ವರ್ಷದ ಅವಧಿಗೆ ಗುತ್ತಿಗೆ ಪಡೆದಿದ್ದ ಜಾಸ್ ಟೋಲ್ ಕಂಪನಿ ಅವಧಿ ಮುಗಿದ ಬಳಿಕವೂ ವಾಹನ ಸವಾರರಿಂದ ಶುಲ್ಕ ವಸೂಲಿ ಮಾಡುತ್ತಿದೆ.
ಟೋಲ್ ಶುಲ್ಕ ಸಂಗ್ರಹದ ಅವಧಿ ಪೂರ್ಣಗೊಂಡಿದೆ. ಆದರೂ ಟೋಲ್ ಶುಲ್ಕ ವಸೂಲಿ ಮಾಡುತ್ತಿರುವುದು ಖಂಡನೀಯ ಎಂದು ಕೆಲಕಾಲ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ:ಅಕ್ರಮ ಗೋಮಾಂಸ ಮಾರಾಟ: ಮೂವರ ಬಂಧನ
ಸ್ಥಳಕ್ಕೆ ಪೊಲೀಸರು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಭೇಟಿ, ಪ್ರತಿಭಟನಾ ನಿರತರನ್ನು ಮನವೊಸಿದರು.