Advertisement

ರಾಷ್ಟ್ರೀಯ ಹೆದ್ದಾರಿ ಟೋಲ್ ಸಂಗ್ರಹ ತಾತ್ಕಾಲಿಕವಾಗಿ ರದ್ದು: ನಿತಿನ್ ಗಡ್ಕರಿ

04:21 PM Mar 26, 2020 | Mithun PG |

ನವದೆಹಲಿ: ದೇಶಾದ್ಯಂತ  ಹೇರಲಾಗಿರುವ ಲಾಕ್ ಡೌನ್ ಕಾರಣದಿಂದ ಕೇಂದ್ರ ಸರ್ಕಾರ ತಾತ್ಕಾಲಿಕವಾಗಿ ರಾಷ್ಟ್ರೀಯ ಹೆದ್ದಾರಿ ಟೋಲ್ ಸಂಗ್ರಹ ರದ್ದು ಮಾಡಿದೆ.

Advertisement

ಈ ಕುರಿತು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಟ್ವೀಟ್ ಮಾಡಿದ್ದು, ದೇಶದ ಎಲ್ಲಾ ಟೋಲ್ ಪ್ಲಾಜಾ ಗಳಲ್ಲಿ ಶುಲ್ಕ ಸಂಗ್ರಹಣೆಯನ್ನು ಬುಧವಾರ ರಾತ್ರಿಯಿಂದಲೇ ಕೇಂದ್ರ ಸರ್ಕಾರ ತಾತ್ಕಲಿಕವಾಗಿ ರದ್ದು ಮಾಡಿದೆ ಎಂದು ಹೇಳಿದ್ದಾರೆ.

ಕೋವಿಡ್ -19 ಭೀತಿ ಹಿನ್ನಲೆಯಲ್ಲಿ ದೇಶಾದ್ಯಂತ ಲಾಕ್ ಡೌನ್ ಮಾಡಿರುವುದರಿಂದ ಅಗತ್ಯ ಸೇವೆಗಳಿಗೆ ಯಾವುದೇ ರೀತಿಯಲ್ಲಿ ಧಕ್ಕೆಯಾಗದಂತೆ ತುರ್ತಾಗಿ ಲಭ್ಯವಾಗಬೇಕೆಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಮಾತ್ರವಲ್ಲದೆ ಸಮಯ ಉಳಿಸುವ ನಿಟ್ಟಿನಲ್ಲೂ ಈ ತೀರ್ಮಾನ ಅತ್ಯಂತ ಮಹತ್ವದ್ದಾಗಿದೆ ಎಂದು ತಿಳಿಸಿದರು.

ರಸ್ತೆಗಳ ನಿರ್ವಹಣೆ ಮತ್ತು ಹೆದ್ದಾರಿ ತುರ್ತು ಸೇವೆಗಳು ಎಂದಿನಂತೆಯೇ ಲಭ್ಯವಾಗಲಿದೆ ಎಂದು ನಿತಿನ್ ಗಡ್ಕರಿ ಅವರು ಸ್ಪಷ್ಟಪಡಿಸಿದ್ದಾರೆ.

In view of Covid-19, it has been ordered to temporarily suspend the collection of toll at all toll plaza across India. This will not only reduce inconvenience to the supply of emergency services but also save critical time. #IndiaFightsCorona

Advertisement

— Nitin Gadkari (@nitin_gadkari) March 25, 2020

Advertisement

Udayavani is now on Telegram. Click here to join our channel and stay updated with the latest news.

Next