Advertisement
ಕಾಸರಗೋಡು: ತಲಪಾಡಿಯಿಂದ ಕಾಲಿಕಡವಿನ ವರೆಗೆ ರಾಷ್ಟ್ರೀಯ ಹೆದ್ದಾರಿ ಶೋಚನೀಯ ಸ್ಥಿತಿಗೆ ತಲುಪಿದ್ದು, ರಸ್ತೆಯುದ್ದಕ್ಕೂ ಬೃಹತ್ ಗಾತ್ರದ ಹೊಂಡಗಳು ಸೃಷ್ಟಿಯಾಗಿ ರಸ್ತೆಯೇ ಇಲ್ಲ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ಯಾಚ್‌ವರ್ಕ್‌ನಿಂದಾಗಿ ಮತ್ತಷ್ಟು ತೊಂದರೆ
ಹೊಂಡಗುಂಡಿಗಳಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿದಿನ ವಾಹನ ಅಪಘಾತ ಸಂಭವಿಸುತ್ತಿದ್ದು, ಈಗಾಗಲೇ ಹಲವು ಮಂದಿ ಬಲಿಯಾಗಿದ್ದು, ಹಲವಾರು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ರಸ್ತೆಯಲ್ಲಿ ವಾಹನ ಚಲಾಯಿಸಲು ಸಾಧ್ಯವಿಲ್ಲದಂತೆ ರಸ್ತೆ ಅತ್ಯಂತ ಕೆಟ್ಟು ಹೋಗಿದ್ದು, ರಸ್ತೆಯ ಶೋಚನೀಯ ಸ್ಥಿತಿಯನ್ನು ಪ್ರತಿಭಟಿಸಿ ರಸ್ತೆ ತಡೆ, ಲೋಕೋಪಯೋಗಿ ಇಲಾಖೆ ದಿಗ್ಬಂಧನ ಮೊದಲಾದ ಪ್ರತಿಭಟನೆಯ ಹಿನ್ನೆಲೆಯಲ್ಲಿ ರಸ್ತೆ ಹೊಂಡಕ್ಕೆ ತಾತ್ಕಾಲಿಕ ಪ್ಯಾಚ್ ವರ್ಕ್ ಮಾಡಲಾಗಿದೆ. ಇದರಿಂದಾಗಿ ಇಂತಹ ಸ್ಥಳಗಳು ಇದೀಗ ಕೆಸರು ಗದ್ದೆಯಂತಾಗಿದೆ.
ಗುರುವಾರ ಬೆಳಗ್ಗೆ ರಾಷ್ಟ್ರೀಯ ಹೆದ್ದಾರಿಯ ಕುಂಬಳೆ ಪೆರುವಾಡಿನಿಂದ ಕಾಸರಗೋಡಿನ ಅಣಂಗೂರುವರೆಗೆ ಲೋಕೋಪಯೋಗಿ ಇಲಾಖೆಯ (ರಾಷ್ಟ್ರೀಯ ಹೆದ್ದಾರಿ ವಿಭಾಗ) ವ್ಯಾಪ್ತಿಯ ರಸ್ತೆಯಲ್ಲಿರುವ ಹೊಂಡಗಳನ್ನು ಮುಚ್ಚುವ ಪ್ರಯತ್ನ ಮಾಡಲಾಯಿತು. ಹೊಂಡ ಮುಚ್ಚುವ ಪ್ರಕ್ರಿಯೆಯನ್ನು ಕೆಲವೆಡೆ ಸ್ಥಳೀಯರು ತಡೆದಿದ್ದಾರೆ. ರಸ್ತೆಯಲ್ಲಿ ಸೃಷ್ಟಿಯಾಗಿರುವ ದೊಡ್ಡ ಗಾತ್ರದ ಹೊಂಡಗಳಿಗೆ ಮಣ್ಣು, ಜಲ್ಲಿ ಹುಡಿ, ಕಲ್ಲಿನ ಹುಡಿಯನ್ನು ಮಿಶ್ರಣ ಮಾಡಿ ನೀರು ಬೆರೆಸಿ ಹೊಂಡವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಮಳೆ ಬಿಟ್ಟು ಬಿಸಿಲು ಕಾಣಿಸಿ ಕೊಂಡಿದ್ದರಿಂದ ಕೆಲವೆಡೆ ಕೆಸರು ಮಣ್ಣು ಒಣಗಿ ವಾಹನಗಳು ಸಾಗುವಾಗ ಮಣ್ಣಿನ ಧೂಳು ಪಾದಚಾರಿಗಳ ಕಣ್ಣಿಗೆರಾಚುತ್ತದೆ. ಇದರಿಂದ ಕಣ್ಣಿಗೂ ಅಪಾಯಕಾರಿಯಾಗಿದೆ.
Related Articles
ಗುರುವಾರ ನಡೆಸಿದ ಕಾಮಗಾರಿ ತಾತ್ಕಾಲಿಕವಾಗಿದೆಯೆಂದೂ, ರಾಷ್ಟ್ರೀಯ ಹೆದ್ದಾರಿಯ ಅಧಿಕೃತ ಕಾಮಗಾರಿ ನಡೆಸ ಬೇಕಿದ್ದರೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಬೇಕಾಗಿದೆ ಎಂದು ಅಧಿಕೃತರು ಹೇಳುತ್ತಿದ್ದಾರೆ.
Advertisement