Advertisement
ಎಸ್‌ಎಚ್‌ಗೆ ಪತ್ರಈ ಹಿಂದೆ ಹೆದ್ದಾರಿ ಪ್ರಾಧಿಕಾರ ನೀಡಿದ ಮಾಹಿತಿ ಅನ್ವಯ ಮಾರ್ಚ್ ಮೊದಲ ವಾರದಲ್ಲಿ ಮಾಣಿ-ಸಂಪಾಜೆ ರಸ್ತೆ ರಾಷ್ಟ್ರೀಯ ಹೆದ್ದಾರಿ 275ಕ್ಕೆ ಸೇರ್ಪಡೆಗೊಳ್ಳಬೇಕಿತ್ತು. ಈಗ ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಸುಪರ್ದಿಯಲ್ಲಿರುವ ಈ ರಾಜ್ಯ ರಸ್ತೆ, ಎನ್‌ಎಚ್ ಆಗಿ ಹಸ್ತಾಂತರಿಸುವ ಮೊದಲು, ರಸ್ತೆ ನಿರ್ವಹಣೆ ಸಮರ್ಪಕವಾಗಿರಬೇಕಿದೆ. ಈ ರಸ್ತೆಯಲ್ಲಿ ಅಲ್ಲಲ್ಲಿ ಹೊಂಡ ಇದ್ದು, ಇದನ್ನು ಮುಚ್ಚುವ ಕೆಲಸ ಆಗಬೇಕು. ಈ ಬಗ್ಗೆ ಎನ್‌ಎಚ್ ಪ್ರಾಧಿಕಾರ ಕೆಆರ್ ಡಿಸಿಎಲ್‌ಗೆ ಪತ್ರ ಬರೆದಿದ್ದು, ತುರ್ತು ಕ್ರಮ ಕೈಗೊಳ್ಳುವಂತೆ ತಿಳಿಸಿದೆ.
Related Articles
ರಾಜ್ಯ ಹೆದ್ದಾರಿ 88 ಕೆಆರ್‌ಡಿಸಿಎಲ್ ವ್ಯಾಪ್ತಿಯೊಳಗಿದ್ದ ರಸ್ತೆಯನ್ನು 2013ರಲ್ಲಿ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸಿ ಅಧಿಸೂಚನೆ ಹೊರಡಿಸಲಾಗಿತ್ತು. ಮೈಸೂರಿನಿಂದ -ಕುಶಾಲನಗರ- ಸಂಪಾಜೆ ತನಕದ ರಸ್ತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಅಧಿಕೃತವಾಗಿ ಸೇರ್ಪಡೆ ಗೊಂಡಿತ್ತು. 2012ರಲ್ಲಿ ಸಂಪಾಜೆ -ಮಾಣಿ ರಸ್ತೆ ಕಾಮಗಾರಿ ಪೂರ್ಣಗೊಳ್ಳದ ಕಾರಣ, ಮೇಲ್ದರ್ಜೆಗೊಂಡರೂ, ಹಸ್ತಾಂತರ ಆಗಿರಲಿಲ್ಲ. 2015ರಲ್ಲಿ ಕಾಮಗಾರಿ ಪೂರ್ಣಗೊಂಡು, ಎರಡು ವರ್ಷಗಳ ನಿರ್ವಹಣೆ ಅವಧಿ ಮುಗಿದ ಬಳಿಕವೇ ರಾ.ಹೆ.ಯು ಈ ರಸ್ತೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕಿತ್ತು.
Advertisement
ಚರಂಡಿ ಅವ್ಯವಸ್ಥೆರಾಜ್ಯ ಹೆದ್ದಾರಿ ಅಭಿವೃದ್ಧಿಗೊಂಡರೂ, ಚರಂಡಿ, ಫುಟ್‌ಪಾತ್, ಬಸ್ ಬೇ ವ್ಯವಸ್ಥೆ ಇನ್ನೂ ಸಮರ್ಪಕವಾಗಿಲ್ಲ. ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ಡಿ.ಎಂ. ಶಾರಿಕ್ ಲೋಕಾಯುಕ್ತ ಸಂಸ್ಥೆಗೆ ದೂರು ನೀಡಿದ್ದರು. ಮಾಣಿಯಿಂದ ಮೈಸೂರು ತನಕದ ರಸ್ತೆಯಲ್ಲಿ ಸ್ಲ್ಯಾಬ್‌ಗಳ ಸಮರ್ಪಕ ಜೋಡಣೆಗೆ ಗುತ್ತಿಗೆದಾರ ಸಂಸ್ಥೆ ಚಾಲನೆ ನೀಡಿದ್ದರೂ, ಅದು ಪೂರ್ಣಗೊಂಡಿಲ್ಲ. ರಸ್ತೆಯ ಅಲ್ಲಲ್ಲಿ ಹೊಂಡ ತುಂಬಿದ್ದು, ಮುಚ್ಚುವ ಕಾರ್ಯಕ್ಕೆ ವೇಗ ಸಿಕ್ಕಿಲ್ಲ. ಇವೆಲ್ಲವೂ ರಾಷ್ಟ್ರೀಯ ಹೆದ್ದಾರಿ ಪ್ರಕ್ರಿಯೆಗೆ ಅಡ್ಡಿಯಾಗಿದೆ. ಬೈಪಾಸ್ ಈಗಿಲ್ಲ
ರಾಜ್ಯ ರಸ್ತೆ ರಾಷ್ಟ್ರೀಯ ಹೆದ್ದಾರಿ ಆಗುವ ಪ್ರಕ್ರಿಯೆ ಪೂರ್ಣಗೊಂಡಿರದ ಕಾರಣ, ಚತುಷ್ಪಥ ರಸ್ತೆ ನಿರ್ಮಾಣದ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಾರ್ಯ ಯೋಜನೆ ಹಾಕಿಕೊಂಡಿಲ್ಲ. ಮಾಹಿತಿ ಹಕ್ಕಿನಲ್ಲಿ ನೀಡಿದ ವರದಿ ಅನ್ವಯ, ಬೈಪಾಸ್ ನಿರ್ಮಿಸುವ ಕುರಿತು ಸಮಾಲೋಚಕರನ್ನು ನೇಮಿಸಿದ್ದು, ಅವರು ನೀಡುವ ವರದಿ ಅನ್ವಯ ಬೈಪಾಸ್‌ನ ಅಗತ್ಯದ ಬಗ್ಗೆ ನಿರ್ಧಾರವಾಗಲಿದೆ. ಬೈಪಾಸ್ ನಿರ್ಮಾಣದ ಪ್ರಕ್ರಿಯೆಗೆ ಚಾಲನೆ ನೀಡದ ಕಾರಣ, ಕೇಂದ್ರ ಸರಕಾರದ ಭೂ ಸಾರಿಗೆ ಇಲಾಖೆಯಲ್ಲಿ ಅನುಮೋದನೆ ಆಗಿಲ್ಲ ಅನ್ನುವ ಮಾಹಿತಿ ಲಭಿಸಿದೆ. ಎಪ್ರಿಲ್‌ನಲ್ಲಿ ಮೇಲ್ದರ್ಜೆಗೆ!
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನೀಡಿದ ಮಾಹಿತಿ ಪ್ರಕಾರ, ಮಾ. 30ರೊಳಗೆ ಸಂಪಾಜೆ-ಮಾಣಿ ರಸ್ತೆಯಲ್ಲಿನ ಹೊಂಡ ಮುಚ್ಚುವಂತೆ ಕೆಆರ್‌ಡಿಸಿಎಲ್‌ಗೆ ತಿಳಿಸಲಾಗಿದೆ. ಎಪ್ರಿಲ್‌ನಲ್ಲಿ ನ್ಯಾಶನಲ್ ಹೈವೇ ರಸ್ತೆ ಸುಪರ್ದಿಗೆ ಪಡೆದುಕೊಂಡ ಅನಂತರ, ಘೋಷಣೆ ಪ್ರಕ್ರಿಯೆ ನಡೆಯಲಿದೆ. ಹೊಂಡ ದುರಸ್ತಿ ಆಗದೇ ಇದಲ್ಲಿ ರಾಜ್ಯ ಸರಕಾರ ನಿರ್ವಹಣೆಗೆ ಅನುದಾನ ನೀಡಲು ಒಪ್ಪಿಗೆ ನೀಡಿದರೆ, ರಾಷ್ಟ್ರೀಯ ಹೆದ್ದಾರಿ ಆಗಿ ಪರಿವರ್ತಿಸಲು ಅಡ್ಡಿ ಆಗದು. ಕಿರಣ್ ಪ್ರಸಾದ್ ಕುಂಡಡ್ಕ