Advertisement

ಒಂದೇ ವಾರದಲ್ಲಿ ದಾಖಲೆ ರಾ.ಹೆ. ನಿರ್ಮಾಣ

12:36 AM Jan 19, 2021 | Team Udayavani |

ಹೊಸದಿಲ್ಲಿ: ದೇಶದಲ್ಲಿ ಜ. 8ರಿಂದ ಈಚೆಗೆ ಒಂದು ವಾರದಲ್ಲಿ ದಾಖಲೆಯ 534 ಕಿ.ಮೀ. ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಿಸಲಾಗಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತಿಳಿಸಿದೆ.

Advertisement

ಪ್ರಸಕ್ತ ಆರ್ಥಿಕ ವರ್ಷದಲ್ಲಿ 2020ರ ಎಪ್ರಿಲ್‌ನಿಂದ 2021ರ ಜ. 15ರ ವರೆಗೆ ದಿನಕ್ಕೆ 28.16 ಕಿ.ಮೀ.ಗಳಂತೆ 8,169 ಕಿ.ಮೀ. ರಾ.ಹೆ. ನಿರ್ಮಾಣ ಕಾರ್ಯ ನಡೆದಿದೆ ಎಂದು  ಅಂಕಿಅಂಶಗಳು ಹೇಳಿವೆ. ಕಳೆದ ಆರ್ಥಿಕ ವರ್ಷದಲ್ಲಿ ದಿನಕ್ಕೆ 26.11 ಕಿ.ಮೀ.ಗಳಂತೆ 7,573 ಕಿ.ಮೀ. ಹೆದ್ದಾರಿ ನಿರ್ಮಿಸಲಾಗಿತ್ತು. ಸಚಿವಾಲಯ ಇದೇ ವೇಗವನ್ನು ಕಾಯ್ದುಕೊಂಡು ಮಾ.31ರ ಒಳಗೆ 11,000 ಕಿ.ಮೀ. ಹೆದ್ದಾರಿ ನಿರ್ಮಾಣದ ಗುರಿಯನ್ನು ದಾಟುವ ಭರವಸೆ ಹೊಂದಿದೆ.

ಪೆಟ್ರೋಲ್‌, ಡೀಸೆಲ್‌ ಬೆಲೆ ಹೆಚ್ಚಳ :

ಹೊಸದಿಲ್ಲಿ: ಪೆಟ್ರೋಲ್‌, ಡೀಸೆಲ್‌ ದರ ಸೋಮವಾರ ಮತ್ತೆ ಹೆಚ್ಚಾಗಿದೆ. ಸರಕಾರಿ ಸ್ವಾಮ್ಯದ ತೈಲ ಕಂಪೆನಿಗಳು ಮತ್ತೆ ಲೀ.ಗೆ ತಲಾ 25 ಪೈಸೆ ಏರಿಕೆ ಮಾಡಿವೆ. ಇದರಿಂದಾಗಿ ದಿಲ್ಲಿಯಲ್ಲಿ ಪ್ರತೀ ಲೀಟರ್‌ ಪೆಟ್ರೋಲ್‌ ಬೆಲೆ 84.95 ರೂ. ಆಗಿದ್ದರೆ, ಪ್ರತೀ ಲೀಟರ್‌ ಡೀಸೆಲ್‌ ಬೆಲೆ 75.13 ರೂ.ಗಳಿಗೆ ಜಿಗಿದಿದೆ. ಮುಂಬಯಿಯಲ್ಲಿ ಇದು ಅನುಕ್ರಮವಾಗಿ 91.56 ರೂ. ಮತ್ತು 81.87 ರೂ.ಗಳಿಗೆ ಹೆಚ್ಚಿದೆ. ಬೆಂಗಳೂರಿನಲ್ಲಿ ಪ್ರತೀ ಲೀ. ಪೆಟ್ರೋಲ್‌ಗೆ 26 ಪೈಸೆ ಏರಿಕೆಯಾಗಿ 87.82 ರೂ., ಪ್ರತೀ ಲೀ. ಡೀಸೆಲ್‌ಗೆ 27 ಪೈಸೆ ಏರಿ 79.67 ರೂ.ಗೆ ಜಿಗಿದಿದೆ.ಕಳೆದ 12 ದಿನಗಳ ಅವಧಿಯಲ್ಲಿ ಪೆಟ್ರೋಲ್‌ ಬೆಲೆ 73 ಪೈಸೆ, ಡೀಸೆಲ್‌ ಬೆಲೆ 80 ಪೈಸೆಯಷ್ಟು ಹೆಚ್ಚಾಗಿದೆ.

ಜನವರಿ 26ಪರೇಡ್‌ಗೆ ರಫೇಲ್‌ :

Advertisement

ಹೊಸದಿಲ್ಲಿ: ರಫೇಲ್‌ ಯುದ್ಧವಿಮಾನಗಳು ಇದೇ ಮೊದಲ ಬಾರಿಗೆ ಜ. 26ರ ಗಣರಾಜ್ಯೋತ್ಸವ ಪರೇಡ್‌ನ‌ಲ್ಲಿ ಪಾಲ್ಗೊಳ್ಳಲಿವೆ. ಗಣರಾಜ್ಯೋತ್ಸವದಂದು ರಫೇಲ್‌ ತನ್ನ ಪರಾಕ್ರಮ ಪ್ರದರ್ಶಿಸಲಿದೆ. ಐಎಎಫ್ ಯುದ್ಧವಿಮಾನಗಳ ಫ್ಲೈಪಾಸ್ಟ್‌ನ ಕೊನೆಯ ಹಂತದಲ್ಲಿ ರಫೇಲ್‌ ಮೈನವಿರೇಳಿಸುವ ಸಾಹಸ ಪ್ರದರ್ಶಿಸಲಿದೆ ಎಂದು ವಿಂಗ್‌ ಕಮಾಂಡರ್‌ ಇಂದ್ರಾನಿಲ್‌ ನಂದಿ ತಿಳಿಸಿದ್ದಾರೆ.

ಇಷ್ಟು ಮಾತ್ರವಲ್ಲದೆ, ಗಣರಾಜ್ಯೋತ್ಸವ ಪರೇಡ್‌ನ‌ಲ್ಲಿ ನಡೆಯಲಿರುವ ವಾಯುಪಡೆಯ ಶಕ್ತಿ ಪ್ರದರ್ಶನದಲ್ಲಿ ಮಹಿಳಾ ಫ್ಲೈಟ್‌ ಲೆಫ್ಟಿನೆಂಟ್‌ ಭಾವನಾ ಕಾಂತ್‌ ಭಾಗವಹಿಸಲಿದ್ದು, ಈ ಸಾಹಸಗೈಯುವ ಪ್ರಥಮ ಮಹಿಳೆ ಎನಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next