Advertisement

National Highway 73: ಸಮಸ್ಯೆಗಳ ನಿವಾರಣೆ

11:55 PM Jun 15, 2024 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಸೂಚನೆಯಂತೆ ರಾಷ್ಟ್ರೀಯ ಹೆದ್ದಾರಿ 73ರ 21 ಕಡೆಗಳಲ್ಲಿ ಸೂಕ್ತವಾದ ದುರಸ್ತಿ ಕಾರ್ಯವನ್ನು ರಾಷ್ಟ್ರೀಯ ಹೆದ್ದಾರಿ ಇಲಾಖೆ ನಿರ್ವಹಿಸಿದೆ.

Advertisement

ಬೆಳ್ತಂಗಡಿ ತಾಲೂಕು ಪುಂಜಾಲಕಟ್ಟೆಯಿಂದ ಚಾರ್ಮಾಡಿ ವರೆಗಿನ ರಾಷ್ಟ್ರೀಯ ಹೆದ್ದಾರಿ 73ರ ಕಾಮಗಾರಿ ಪರಿಶೀಲನೆ ಮತ್ತು ಮಳೆಗಾಲದ ಸಮಯ ಉಂಟಾಗುವ ತೊಂದರೆಗಳ ಬಗ್ಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಎಂ.ಪಿ. ಅವರು ಜೂ. 12ರಂದು ವೀಕ್ಷಣೆ ನಡೆಸಿ ಕೂಡಲೇ ಸಮಸ್ಯೆಗಳನ್ನು ಪರಿಹರಿಸುವಂತೆ ಸೂಚಿಸಿದ್ದರು.
ಮಳೆ ನೀರು ಸರಾಗವಾಗಿ ಹರಿದು ಹೋಗಲು ಚರಂಡಿ ನಿರ್ಮಿಸಲಾಗಿದ್ದು, ಸಂಚಾರ ಸುಗಮವಾಗುವಂತೆ ಹಾಗೂ ಶಾಲಾ ವಠಾರ, ಬಸ್‌ ನಿಲ್ದಾಣಗಳ ಬಳಿ ಕೆಸರು ನಿಲ್ಲದಂತೆ ಕ್ರಮ ಕೈಗೊಳ್ಳಲಾಗಿದೆ.

ದೂರುಗಳಿದ್ದರೆ ಸಂಪರ್ಕಿಸಿ
ಈ ಹೆದ್ದಾರಿ ಕಾಮಗಾರಿಗಳ ನಿರ್ವಹಣೆ ಬಗ್ಗೆ ಸಾರ್ವಜನಿಕರು ಇನ್ನೂ ಯಾವುದೇ ಸಮಸ್ಯೆಗಳನ್ನು ಎದುರಿಸು ತ್ತಿದ್ದರೆ ಅಥವಾ ಸಂಚಾರ ದಲ್ಲಿ ಸಮಸ್ಯೆ ಯಾಗಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಕಂಟ್ರೋಲ್‌ ರೂಂ ಸಂಖ್ಯೆ: 0824- 2220588 ಸಂಪರ್ಕಿಸುವಂತೆ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next