Advertisement

ಮನುಸ್ಮೃತಿ ಬಂದ್ರೆ ಈಶ್ವರಪ್ಪ ಮಂತ್ರಿಗಿರಿ ಬಿಟ್ಟು ಕುರಿ ಕಾಯಬೇಕು: ಸಿದ್ದರಾಮಯ್ಯ

06:27 PM Feb 16, 2022 | Team Udayavani |

ಬೆಂಗಳೂರು : ಯಾರೇ ಆಗಲಿ ಸಂವಿಧಾನಕ್ಕೆ,ರಾಷ್ಟ್ರ ಧ್ವಜಕ್ಕೆ ಮತ್ತು ರಾಷ್ಟ್ರ ಗೀತೆಗೆ ಅಪಮಾನ ಮಾಡಿದರೆ ಕ್ರಮ ಕೈಗೊಳ್ಳಬೇಕು. ರೈತರು ಅವರು ಭಾವುಟವನ್ನ ಕೆಂಪುಕೋಟೆ ಕೆಳಗೆ ಹಾರಿಸಿದ್ದಕ್ಕೆ ಕ್ರಮಜರುಗಿಸಿದ್ದಾರೆ, ಆದರೆ ಈಶ್ವರಪ್ಪ ಮೇಲೆ ಯಾಕೆ ಕ್ರಮ ಜರುಗಿಸಿಲ್ಲ ಎಂದು ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

Advertisement

ಬಿಜೆಪಿಯವರು, ಆರ್ ಎಸ್ ಎಸ್ ನವರು ಯಾವತ್ತೇ ಆಗಲಿ ರಾಷ್ಟ್ರ ಧ್ವಜ ರಾಷ್ಟ್ರ ಗೀತೆಗೆ ಗೌರವ ಕೊಡುವ ಕೆಲಸ ಮಾಡಿಲ್ಲ. ಇವರು ದೇಶಭಕ್ತಿ ಬಗ್ಗೆ ಬಹಳ ಮಾತನಾಡ್ತಾರೆ. ಇವರು ಸಂವಿಧಾನ, ರಾಷ್ಟ್ರ ಧ್ವಜ ಹೋಗಿ ಮನುಸ್ಮೃತಿ ಬರಬೇಕು ಎಂದು ಬಯಸುತ್ತಾರೆ. ಬಹುಷಃ ಈಶ್ವರಪ್ಪನವರ ಬಾಯಲ್ಲಿ ಅವರೇ ಹೇಳಿಸರಬೇಕು. ಮನುಸ್ಮೃತಿ ಬಂದ್ರೆ ಈಶ್ವರಪ್ಪ ಮಂತ್ರಿಸ್ಥಾನ ಬಿಟ್ಟು ಕುರಿ ಕಾಯಬೇಕು ಮತ್ತೇ ಏನೋ ಮಾಡಬೇಕಾಗುತ್ತೆ. ಇದು ಈಶ್ವರಪ್ಪನವರಿಗೆ ಗೊತ್ತಿಲ್ಲ ಅನಿಸುತ್ತೆ ಎಂದು ಕಿಡಿ ಕಾರಿದರು.

ಈಶ್ವರಪ್ಪನವರು ಡಿ ಕೆ ಶಿವಕುಮಾರ್ ಬಗ್ಗೆ ಮಾತಾಡಲಿ ಆದರೆ ಅವರ ತಂದೆ ಬಗ್ಗೆ ಮಾತನಾಡಿದ್ದು ಅಕ್ಷಮ್ಯ, ಖಂಡನೀಯ. ಈಶ್ವರಪ್ಪನಿಗೆ ಲಾಂಗ್ವೇಜ್ ಗೊತ್ತಿಲ್ಲ ಎಂದು ಕಿಡಿ ಕಾರಿದರು.

ಯಡಿಯೂರಪ್ಪ..!

ಈಶ್ಚರಪ್ಪ ಅಂತಾ ಹೇಳಲು ಹೋಗಿ ಯಡಿಯೂರಪ್ಪ ಎಂದ ಸಿದ್ದರಾಮಯ್ಯ, ಆಮೇಲೆ ಯಡಿಯೂರಪ್ಪ ಅಲ್ಲ ಈಶ್ವರಪ್ಪ ಅಂತಾ ಹೇಳಿದ ಪಕ್ಕದಲ್ಲಿದ್ದ ಶಾಸಕರು.

Advertisement

ಇದು ನಮ್ಮ ಸ್ವಾಭಿಮಾನದ ಸಂಕೇತ. ಧ್ವಜ ನಮ್ಮ ಹೆಮ್ಮೆಯ ಸಂಕೇತ. ಈ ಭಾವುಟಕ್ಕೆ ಅಪಮಾನ ಆಗಿದೆ ಎಂದು ತೋರಿಸಿದ್ದು.ಸ್ಪೀಕರ್ ಸಂವಿಧಾನದದ ಮುಖ್ಯಸ್ಥರಲ್ಲ.ಅವರು ನಿಯಮಾವಳಿಗಳನ್ನು ಬಿಟ್ಟಿದ್ದರಲ್ಲಾ.ನನ್ನ‌ ನಿಳುವಳಿ ಸೂಚನೆ ವಿಷಯವೇ ಮುಗಿದಿರಲಿಲ್ಲ.
ಆಗಲೇ ಬೇರೆಯರ ನಿಳುವಳಿ ಸೂಚನೆಗೆ ಚರ್ಚಿಸಲು ಅವಕಾಶ ಕೊಟ್ಟಿದ್ದರು ಎಂದು ಸ್ಪೀಕರ್ ಕಾಗೇರಿ ಅವರ ವಿರುದ್ಧವೂ ಅಸಮಾಧಾನ ಹೊರ ಹಾಕಿದರು.

ಈಶ್ವರಪ್ಪ ತಿರುಗೇಟು

ಸದನದಲ್ಲಿ ತಮ್ಮ ಹೇಳಿಕೆ ವಿಚಾರದಲ್ಲಿ ಭಾರಿ ಕೋಲಾಹಲ ಉಂಟಾದ ಕುರಿತು ಪ್ರತಿಕ್ರಿಯಿಸಿದ ಸಚಿವ ಈಶ್ವರಪ್ಪ ಅವರು, ನಾನು ೧೦೦ ,200 ವರ್ಷಗಳ ನಂತರ ಭಾಗವಾಧ್ವಜ ಹಾರಬಹುದು ಅಂತ ಹೇಳಿದ್ದು, ಹಾರಿಸಲಾಗುತ್ತೆ ಅಂತ ಹೇಳಿದಲ್ಲ ಎಂದು ಸ್ಪಷ್ಟನೆ ನೀಡಿದರು.

ಡಿ.ಕೆ. ಶಿವಕುಮಾರ್ ಅವರ ತಂದೆಯವರ ಮೇಲೆ ನನಗೆ ಗೌರವ ವಿದೆ. ನಾನು ಅವರ ತಂದೆ ಬಗ್ಗೆ ಮಾತನಾಡಿದ್ದು ಆಡು ಭಾಷೆಯಲ್ಲಿ ಎಂದರು.

ಹಿಜಾಬ್ ಅಜೆಂಡಾ ತಂದು ಹಿಂದು ಮುಸ್ಲಿಂ ಬೇರೆ ಬೇರೆ ಮಾಡಿರೋದು ಅನ್ಯಾಯ. ಡಿಕೆಶಿವಕುಮಾರ್ ಅಂದೇ ಸುಳ್ಳು ಹೇಳಿದ್ದರು.ಶಿವಮೊಗ್ಗದಲ್ಲಿ ರಾಷ್ಟ ಧ್ವಜ ಇಳಿಸಿದ್ರು ಅಂತ ಸುಳ್ಳು ಹೇಳಿದ್ರು.ಇವತ್ತು ಮತ್ತೆ ರಾಷ್ರ ಧ್ವಜಕ್ಕೆ ಅವಮಾನವನ್ನ ಕಾಂಗ್ರೆಸ್ ಮಾಡಿದೆ.ಇದು ವಿಧನಸೌಧಕ್ಕೆ ಕಪ್ಪು ಚುಕ್ಕೆ. ರಾಷ್ಟ್ರಧ್ವಜ ದುರ್ಬಳಕೆ ಮಾಡಿಕೊಂಡಿದ್ದು ತಪ್ಪು.ಕಾಂಗ್ರೆಸ್ ನವರು ರಾಜಕೀಯ ಬೆಳೆ ಬೆಯಿಸಿಕೊಳ್ಳಲು ಹೀಗೆ ಮಾಡಿದ್ದಾರೆ.ಇದು ಕಾಂಗ್ರೆಸ್ ನ ರಾಷ್ಟ್ರ ದ್ರೋಹಿ ಕೆಲಸ‌ ಎಂದು ಕಿಡಿ ಕಾರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next