Advertisement

National ಮತದಾರರ ಪಟ್ಟಿ ವಿಶೇಷ: ಸಂಕ್ಷಿಪ್ತ ಪರಿಷ್ಕರಣ ವೇಳಾಪಟ್ಟಿ ಪ್ರಕಟ

11:28 PM Oct 28, 2023 | Team Udayavani |

ಮಂಗಳೂರು: ಚುನಾವಣ ಆಯೋಗವು ರಾಷ್ಟ್ರೀಯ ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2024 ಕರಡು ಮತದಾರರ ಪಟ್ಟಿಯನ್ನು ಎಲ್ಲ ಮತಗಟ್ಟೆಗಳಲ್ಲಿ, ಮತದಾರರ ನೋಂದಾ ಣಾಧಿಕಾರಿ ಹಾಗೂ ಸಹಾಯಕ ಮತದಾರರ ನೋಂದಾಣಾಧಿಕಾರಿ ಕಚೇರಿಯಲ್ಲಿ ಅ. 27ರಂದು ಪ್ರಕಟಿಸಿದೆ.

Advertisement

ಪಟ್ಟಿಯಲ್ಲಿ ಹೆಸರು ಇಲ್ಲದಿದ್ದಲ್ಲಿ ಸೇರಿಸಲು ಅಥವಾ ಮೃತರನ್ನು ಪಟ್ಟಿಯಿಂದ ತೆಗೆಯಲು ಕುಟುಂಬದವರು ನಮೂನೆ 7ರ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಕರಡು ಮತದಾರರ ಪಟ್ಟಿಯ ಪ್ರಕಟನೆ
ಅ. 27ರಂದು, ಹಕ್ಕು ಮತ್ತು ಆಕ್ಷೇಪಣೆ ಸ್ವೀಕರಿಸುವ ಅವಧಿ ಅ. 27ರಿಂದ ಡಿ. 9ರ ವರೆಗೆ, ವಿಶೇಷ ನೋಂದಣಿ ಅಭಿಯಾನ ನ. 18 ಮತ್ತು 19 ಹಾಗೂ ಡಿ. 2 ಮತ್ತು 3ರಂದು, ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿ ಡಿ. 26ರಂದು, ಡೇಟಾಬೇಸ್‌ ಮತ್ತು ಪೂರಕ ಮುದ್ರಣವನ್ನು ನವೀಕರಿಸುವುದು 2024ರ ಜ. 1ರಂದು ಹಾಗೂ ಅಂತಿಮ ಮತದಾರರ
ಪಟ್ಟಿ ಪ್ರಕಟನೆ 2024ರ ಜ. 5 ಆಗಲಿದೆ.

ಸೇರ್ಪಡೆಗೆ ದಾಖಲೆ
ವಯಸ್ಸಿನ ದೃಢೀಕರಣಕ್ಕೆ ಶಾಲಾ ಪ್ರಮಾಣ ಪತ್ರ, ಜನನ ಪ್ರಮಾಣ ಪತ್ರ, ಆಧಾರ್‌ಕಾರ್ಡ್‌, ಪಾಸ್‌ಪೋರ್ಟ್‌, ಎಸೆಸೆಲ್ಸಿ/ ಪಿಯುಸಿ ಅಂಕಪಟ್ಟಿ, ಪಾನ್‌ಕಾರ್ಡ್‌ ಹಾಗೂ ವೈದ್ಯಕೀಯ ಪ್ರಮಾಣ ಪತ್ರ.

ವಾಸ ಸ್ಥಳದ ದೃಢೀಕರಣಕ್ಕೆ ಪಡಿತರ ಚೀಟಿ, ಗ್ಯಾಸ್‌ ಸಿಲಿಂಡರ್‌ ಸ್ವೀಕೃತಿ ರಶೀದಿ, ವಿದ್ಯುತ್‌ ಬಿಲ್‌ ಪಾವತಿ, ಬ್ಯಾಂಕ್‌ ಪಾಸ್‌ ಬುಕ್‌ ಪ್ರತಿ, ಪಾಸ್‌ಪೋರ್ಟ್‌, ವಾಹನ ಚಾಲನೆ ಪರವಾನಿಗೆ ಪ್ರತಿ, ಬಾಡಿಗೆ ಕರಾರು ಪತ್ರ ಹಾಗೂ ಇನ್ನಿತರ ದಾಖಲೆಗಳು, ಒಂದು ಪಾಸ್‌ಪೋರ್ಟ್‌ ಅಳತೆಯ ಭಾವಚಿತ್ರ.

Advertisement

ನಮೂನೆ-6ರಲ್ಲಿ 18 ವರ್ಷ ಪೂರೈಸಿದ ಹೊಸ ಮತದಾರರು, ನಮೂನೆ-6ಎ ಯಲ್ಲಿ
ಅನಿವಾಸಿ ಭಾರತೀಯರು ಹೆಸರು ಸೇರ್ಪಡೆ ಮಾಡಬಹುದು. ನಮೂನೆ-7ರಲ್ಲಿ ಪಟ್ಟಿ ಯಿಂದ ಹೆಸರನ್ನು ತೆಗೆದು ಹಾಕಬಹುದು. ನಮೂನೆ 8ರಲ್ಲಿ ಹೆಸರು, ತಂದೆ ಹೆಸರು, ಮನೆ ವಿಳಾಸ, ವಯಸ್ಸಿಗೆ ಹಾಗೂ ಭಾವಚಿತ್ರಕ್ಕೆ ಸಂಬಂಧಿಸಿದ ದೋಷಗಳಿದ್ದಲ್ಲಿ ಸರಿಪಡಿಸಿ ಕೊಳ್ಳಬಹುದು. ನಮೂನೆ-6ಬಿ ಯಲ್ಲಿ ಮತದಾರರ ಗುರುತಿನ ಚೀಟಿಗೆ ಆಧಾರ್‌ ಸಂಖ್ಯೆ ಅಥವಾ ನಮೂದಿಸಿರುವ ಇತರ ಯಾವುದೇ 11 ದಾಖಲೆಗಳನ್ನು ಜೋಡಣೆ ಮಾಡುವ ಬಗ್ಗೆ ಅರ್ಜಿ ಸಲ್ಲಿಸಬಹುದಾಗಿದೆ.

ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು 2024ರ ಜ.1, ಎ.1, ಜು.1 ಹಾಗೂ ಅ. 1 ಅರ್ಹತಾ ದಿನವಾಗಿದೆ.

ಸಾರ್ವಜನಿಕರು ತಮ್ಮ ವ್ಯಾಪ್ತಿಯಲ್ಲಿರುವ ಕೇಂದ್ರಗಳಿಗೆ ಭೇಟಿ ನೀಡಿ ಪಟ್ಟಿಗಳಲ್ಲಿ ಹೆಸರು ನೋಂದಾಯಿಸುವ ಬಗ್ಗೆ ಮತ್ತು ತಿದ್ದುಪಡಿ ಬಗ್ಗೆ ಪರಿಶೀಲಿಸಿ ಕೊಳ್ಳಬಹುದು.

ಹೆಚ್ಚಿನ ಮಾಹಿತಿಗೆ ವೆಬ್‌ಪೋರ್ಟಲ್‌ //www.ceokarnataka.kar.nic.in ಅಥವಾ //www.https://voters.eci.gov.in, //www.VotersHelplineApp ಸಂಪರ್ಕಿಸುವಂತೆ ಎಡಿಸಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next