Advertisement

ಹೊಸ ಶಿಕ್ಷಣ ನೀತಿ ಜಾರಿ: HRD ಬದಲು ಶಿಕ್ಷಣ ಸಚಿವಾಲಯ

10:23 PM Sep 28, 2020 | Karthik A |

ಹೊಸದಿಲ್ಲಿ: ಪ್ರಸ್ತುತ ಉದ್ಯೋಗ ಕ್ಷೇತ್ರದ ಸನ್ನಿವೇಶಗಳನ್ನು ಗಮನದಲ್ಲಿಟ್ಟುಕೊಂಡು ಈ ಕ್ಷೇತ್ರಕ್ಕೆ ಮಾರ್ಗಸೂಚಿಯನ್ನು ನಿಗದಿಪಡಿಸುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

Advertisement

ಸುಮಾರು ಮೂರು ದಶಕಗಳ ಬಳಿಕ ಈ ನೀತಿಯನ್ನು ಕೆಲವೊಂದು ಬದಲಾಣೆಗಳ ಮೂಲಕ ಪುನರ್‌ ರಚಿಸಲಾಗಿದೆ.

1968 ಮತ್ತು 1986ರಲ್ಲಿ ಬಂದ ನೀತಿಗಳ ಬಳಿಕ ಇದು ಮೂರನೇ ಎನ್‌ಇಪಿ ಆಗಿದೆ. ಸರಕಾರವು 1986ರ ನೀತಿಗೆ 1992ರಲ್ಲಿ ತಿದ್ದುಪಡಿ ಮಾಡಲಾಗಿತ್ತು. ಆದರೆ ಯಾವುದೇ ಗಂಭೀರ ಬದಲಾವಣೆ ಮಾಡಲಾಗಿರಲಿಲ್ಲ.

ಮಾಜಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮುಖ್ಯಸ್ಥ ಕೆ. ಕಸ್ತುರಿರಂಗನ್‌ ನೇತೃತ್ವದ ಸಮಿತಿಯು ಹೊಸ ಎನ್‌ಇಪಿಯ ಕರಡನ್ನು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್‌ ಪೋಖ್ರೀಯಾಲ್‌ ಅವರಿಗೆ ಕಳೆದ ವರ್ಷ ಸಲ್ಲಿಸಿತ್ತು.

ಅನಂತರ ವಿವಿಧ ಮಧ್ಯಸ್ಥಗಾರರಿಂದ ಪ್ರತಿಕ್ರಿಯೆ ಪಡೆಯಲು ಕರಡನ್ನು ಸಾರ್ವಜನಿಕ ಅಭಿಪ್ರಾಯಕ್ಕೆ ಕಳುಹಿಸಲಾಗಿತ್ತು. ಆ ಕುರಿತಾಗಿ ಎರಡು ಲಕ್ಷಕ್ಕೂ ಹೆಚ್ಚಿನ ಸಲಹೆಗಳನ್ನು ಮಾನವ ಸಂಪನ್ಮೂಲ ಸಚಿವಾಲಯ ಸ್ವೀಕರಿಸಿದೆ. ಅವುಗಳನ್ನು ಪರಿಗಣಿಸಿದ ಬಳಿಕ ಪ್ರಸ್ತಾವಿತ ಹೊಸ ನೀತಿ ಕರಡನ್ನು ಅನುಮೋದನೆ ನೀಡಲಾಗಿದೆ.

Advertisement

ರಾಜೀವ್‌ ಗಾಂಧಿ ಇಟ್ಟ ಹೆಸರು
ಮಾನವ ಸಂಪನ್ಮೂಲ ಸಚಿವಾಲಯವನ್ನು ಶಿಕ್ಷಣ ಸಚಿವಾಲಯ ಎಂದು ಮರುನಾಮಕರಣ ಮಾಡಲಾಗಿದೆ. 1985ರಲ್ಲಿ ಆಗಿನ ಪ್ರಧಾನಿ ರಾಜೀವ್‌ ಗಾಂಧಿ ಅವರು ಶಿಕ್ಷಣ ಸಚಿವಾಲಯದ ಹೆಸರನ್ನು ಮಾನವ ಸಂಪನ್ಮೂಲ ಸಚಿವಾಲಯ ಎಂದು ಬದಲಾಯಿಸಿದ್ದರು.

ಈ ಹೊಸ ಶಿಕ್ಷಣ ನೀತಿಯಲ್ಲಿ ಮಕ್ಕಳ ಶೈಕ್ಷಣಿಕ ಹೊರೆಯನ್ನು ಕಡಿಮೆಗೊಳಿಸುವುದು, ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆಯ ವ್ಯಾಪ್ತಿಯ ವಿಸ್ತರಣೆ, ಪಠ್ಯಕ್ರಮದಲ್ಲಿ ಪ್ರಮುಖ ಬದಲಾವಣೆ ಸೇರಿದಂತೆ ಹಲವು ಹೊಸ ನೀತಿಗಳನ್ನು ಇದರಲ್ಲಿ ಪ್ರಸ್ತಾಪಿಸಲಾಗಿದೆ. ಹೊಸ ಶಿಕ್ಷಣ ನೀತಿಯು 2014ರ ಸಾರ್ವತ್ರಿಕ ಚುನಾವಣೆಗೆ ಮುನ್ನ ಭಾರತೀಯ ಜನತಾ ಪಕ್ಷದ ಪ್ರಣಾಳಿಕೆಯ ಭಾಗವಾಗಿತ್ತು. ಕರಡು ನೀತಿಯ ಪ್ರಕಾರ, ಪಠ್ಯಕ್ರಮದಲ್ಲಿ ವಿಜ್ಞಾನ ಮತ್ತು ಮಾನವಿಕದಂತಹ ಕಲಿಕೆಯ ಕ್ಷೇತ್ರಗಳು ಈ ಹಿಂದಿನಂತೆಯೇ ಇರಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next