Advertisement
ಮೊದಲಿಗೆ ನೂತನ ಶಿಕ್ಷಣ ನೀತಿಯ ವಿವರವನ್ನು ವಿವಿಧ ಸರಕಾರಿ ಶಾಲೆಗಳಿಗೆ ಸಂಬಂಧಿಸಿದ ಸ್ಥಳೀಯ ಸಂಸ್ಥೆ ಸದಸ್ಯರು, ಎಸ್‌ಡಿಎಂಸಿ ಸದಸ್ಯರು, ಪೋಷಕರು, ಶಿಕ್ಷಕರು, ವಿದ್ಯಾರ್ಥಿಗಳು, ಸಮು ದಾಯ ಆಧಾರಿತ/ ಸ್ಥಳೀಯ ಸಂಸ್ಥೆ ಸದಸ್ಯರಿಗೆ ಮನದಟ್ಟು ಮಾಡಿ ಅಭಿಪ್ರಾಯ ಪಡೆದು ಕೊಳ್ಳಲಾಗುತ್ತದೆ. “ವಸ್ತುಸ್ಥಿತಿ ವರದಿ’ ಸಿದ್ಧವಾದ ಬಳಿಕ ಪಠ್ಯ ಕ್ರಮ, ಪಠ್ಯಸೂಚಿ ನಿರ್ಧಾರವಾಗಲಿದೆ.
Related Articles
Advertisement
“ಹುದ್ದೆ ಖಾಲಿ’ ಸವಾಲು! :
ನೂತನ ಶಿಕ್ಷಣ ನೀತಿ ಶಾಲೆಗಳಲ್ಲಿ ಜಾರಿಯಾಗುವ ಕಾಲದಲ್ಲಿ ಶಿಕ್ಷಕರ ನೇಮಕ ಅಗತ್ಯವಾಗಿ ಆಗಬೇಕಿದೆ. ಮೂಲಗಳ ಪ್ರಕಾರ ಎಲ್ಲ ವೃಂದದ ಒಟ್ಟು ಹುದ್ದೆಗಳ ಪೈಕಿ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ 41,869, ಸರಕಾರಿ ಪ್ರೌಢ ಶಾಲೆಗಳಲ್ಲಿ 8,292 ಶಿಕ್ಷಕ ಹುದ್ದೆಗಳು, ಪ.ಪೂ. ಶಿಕ್ಷಣ ಇಲಾಖೆಯಲ್ಲಿ 3,539 ಉಪನ್ಯಾಸಕ ಹುದ್ದೆಗಳು ಖಾಲಿ ಇವೆ. ಸದ್ಯ ಪ್ರಾಥಮಿಕ ಶಾಲೆಗಳಲ್ಲಿ 18,000 ಅತಿಥಿ ಶಿಕ್ಷಕರು ಹಾಗೂ ಪ್ರೌಢ ಶಾಲೆಗಳಲ್ಲಿ 5,078 ಅತಿಥಿ ಶಿಕ್ಷಕರನ್ನು ತಾತ್ಕಾಲಿಕವಾಗಿ ನೇಮಿಸಲಾಗಿದೆ. ಸದ್ಯಕ್ಕೆ ಇದು ರಕ್ಷಣೆ ನೀಡುತ್ತಿದೆಯಾದರೂ ಹೊಸ ನೀತಿ ಜಾರಿಯಾಗುವಾಗ ಶಿಕ್ಷಕರ ಕೊರತೆ ಸಂಗತಿ ಮತ್ತಷ್ಟು ಒತ್ತಡ ಸೃಷ್ಟಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಜನಾಭಿಪ್ರಾಯವನ್ನು ವಿವಿಧ ಸಮಿತಿಗಳ ಮುಖೇನ ಸಂಗ್ರಹಿಸಲಾಗು ತ್ತಿದೆ. ಜತೆಗೆ ವಸ್ತುಸ್ಥಿತಿಯ ಬಗ್ಗೆ ವಿವಿಧ ಹಂತಗಳಲ್ಲಿ ಅವಲೋಕನ ನಡೆಯುತ್ತಿದೆ. ಪೂರ್ಣ ವಿವರ ಸಿದ್ಧಗೊಂಡ ಅನಂತರ ನೀತಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು.- ಬಿ.ಸಿ. ನಾಗೇಶ್,ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ
-ದಿನೇಶ್ ಇರಾ