Advertisement

ಎನ್‌ಇಪಿ: ಯಾವ ವಿದ್ಯಾರ್ಥಿಯೂ ವ್ಯಾಸಂಗದ ಮಧ್ಯೆ ನಿರ್ಗಮಿಸಿಲ್ಲ

10:31 PM Nov 17, 2022 | Team Udayavani |

ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪದವಿ ವ್ಯಾಸಂಗದ ಮಧ್ಯೆ ಕಾರಣಾಂತರಗಳಿಂದ ಅಧ್ಯಯನದಿಂದ ನಿರ್ಗಮಿಸಲು ವಿದ್ಯಾರ್ಥಿಗಳಿಗೆ ಅವಕಾಶ ನೀಡಿದ್ದು, ಮೊದಲ ವರ್ಷದಲ್ಲಿ ಯಾವುದೇ ವಿದ್ಯಾರ್ಥಿಗಳು ನಿರ್ಗಮಿಸಿಲ್ಲ. ಎನ್‌ಇಪಿ ರಾಜ್ಯದಲ್ಲಿ ಜಾರಿಯಾಗಿ ವರ್ಷ ಕಳೆದಿದ್ದು,  ಯಾವುದೇ ವಿದ್ಯಾರ್ಥಿ ಮೊದಲ ವರ್ಷದಲ್ಲಿ ಓದು ಮೊಟಕುಗೊಳಿಸಿಲ್ಲ ಎಂದು ಉನ್ನತ ಶಿಕ್ಷಣ ಪರಿಷತ್‌ನ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಪದವಿ ವೇಳೆ ಯಾವುದೇ ವರ್ಷ ಓದಿನಿಂದ ವಿದ್ಯಾರ್ಥಿಗಳು ನಿರ್ಗಮಿಸಿದರೂ ಆ ವರ್ಷದ ವ್ಯಾಸಂಗಕ್ಕೆ ಸಂಬಂಧಿಸಿ ಪ್ರಮಾಣ ಪತ್ರ  ನೀಡುವ ಅವಕಾಶ ಎನ್‌ಇಪಿಯಲ್ಲಿ ಕಲ್ಪಿಸಲಾಗಿತ್ತು. ನಿರ್ಗಮಿಸಿದ ವಿದ್ಯಾರ್ಥಿಗಳು ಮತ್ತೆ ಓದು ಮುಂದುವರಿಸುವುದಾದರೆ ಅವರು ನಿರ್ಗಮಿಸಿದ ಹಂತದಿಂದಲೇ ಮತ್ತೆ ಪ್ರಾರಂಭಿಸಲು ಅವಕಾಶ ನೀಡಲಾಗಿದೆ.

ಉನ್ನತ ಶಿಕ್ಷಣಕ್ಕೆ ಸೇರಿದ ಬಳಿಕ ಕೆಲವು ಮಕ್ಕಳು ಉದ್ಯೋಗಕ್ಕಾಗಿ, ಕೌಟುಂಬಿಕ ಸಮಸ್ಯೆ, ಜವಾಬ್ದಾರಿಗಳು, ಆರ್ಥಿಕ ಸಮಸ್ಯೆ ಬೇರೆ ಬೇರೆ ಕಾರಣದಿಂದ ಮಧ್ಯದಲ್ಲೇ ಓದು ನಿಲ್ಲಿಸುವ ಪ್ರಕರಣಗಳು ನಡೆಯುತ್ತಿರುತ್ತವೆ. ಅಂತಹ ಮಕ್ಕಳ ಅನುಕೂಲಕ್ಕಾಗಿ ಈ ವ್ಯವಸ್ಥೆ ಜಾರಿಗೆ ತರಲಾಗಿದೆ. ಒಂದು ಅಥವಾ ಎರಡು ವರ್ಷಗಳ ಬಳಿಕ ನಿರ್ಗಮಿಸುವುದಾದರೆ ಅವರಿಗೆ ಕನಿಷ್ಠ ಎರಡರಿಂದ ಆರು ತಿಂಗಳ ಕೌಶಲಾಧಾರಿತ ತರಬೇತಿ ನೀಡುವ ಬಗ್ಗೆ ಚಿಂತಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next