ಗದಗ: ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಗೊಂದಲಮಯವಾಗಿದ್ದು, ಈ ಬಗ್ಗೆಮತ್ತೂಮ್ಮೆ ಚರ್ಚೆ ನಡೆಯಬೇಕುಎಂದು ರಾಷ್ಟ್ರೀಯ ವಿದ್ಯಾರ್ಥಿಒಕ್ಕೂಟ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ ಹೇಳಿದರು.
ನಗರದ ಅಬ್ದುಲ್ ಕಲಾಂ ಬಿಸಿಎ ಮಹಾವಿದ್ಯಾಲಯದಲ್ಲಿ ಶನಿವಾರ ವಿದ್ಯಾರ್ಥಿಗಳೊಂದಿಗೆ ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಸಂವಾದ ನಡೆಸಿದ ಅವರು, ವಿಶ್ವ, ದೇಶ ಹಾಗೂ ರಾಜ್ಯ ಹಿಂದೆಂದೂ ಕಾಣದ ಕೊರೊನಾ ಮಹಾಮಾರಿಗೆ ತತ್ತರಿಸಿ ಹೋಗಿದೆ. ಈಗಿನ ಕರಾಳ ಪರಿಸ್ಥಿತಿಯಲ್ಲಿ ಜೀವನನಡೆಸುವುದೇ ದುಸ್ಥರವಾಗಿ, ಸವಾಲು ಎದುರಿಸುವ ಸಂದರ್ಭದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಬೇಕಿರಲಿಲ್ಲ. ಕಳೆದ 34 ವರ್ಷಗಳ ಹಿಂದೆ ಜಾರಿಯಾಗಿದ್ದ 1986 ರಾಷ್ಟ್ರೀಯ ಶಿಕ್ಷಣ ನೀತಿಯೇಗುಣಾತ್ಮಕತೆಯಿಂದ ಕೂಡಿತ್ತು. 10+2 ಮಾದರಿ ಶೈಕ್ಷಣಿಕ ವ್ಯವಸ್ಥೆಯೇ ದೇಶ ಹಾಗೂ ರಾಜ್ಯಕ್ಕೆ ಅತ್ಯಗತ್ಯವಾಗಿದೆ.
ಈಗಿನ ಹೊಸ ನೀತಿಯಲ್ಲಿ 5+3+3+4 ವ್ಯವಸ್ಥೆಯನ್ನು ಪ್ರಸ್ತಾಪಿಸಲಾಗಿದೆ.ಕಲಿಕಾ ಪ್ರಕ್ರಿಯೆ ಶಿಕ್ಷಕ ಮತ್ತು ವಿದ್ಯಾರ್ಥಿಗಳ ಮಧ್ಯೆ ನಡೆದಾಗಕಲಿಕಾ ಉದ್ದೇಶಗಳನ್ನು ತಲುಪಲು ಸಾಧ್ಯವಾಗಲಿದೆ. ಆದರೆ, ಎನ್‌ಇಪಿ ಬಗ್ಗೆ ಶಿಕ್ಷಕ ಸಮೂಹದಲ್ಲೇಗೊಂದಲದಲ್ಲಿದ್ದು, ಮಕ್ಕಳಲ್ಲಿ ಕಲಿಕಾ ಪ್ರೇರಣೆ ಮೂಡಿಸುವವರು ಯಾರು? ಈ ಬಗ್ಗೆ ರಾಜ್ಯ ಸರಕಾರಗಳೇ ಉತ್ತರಿಸಬೇಕು ಎಂದು ಆಗ್ರಹಿಸಿದರು.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಅರಿವು ಮೂಡಿಸುವ ಉದ್ದೇಶದಿಂದಾಗಿರಾಜ್ಯಾದ್ಯಂತ ಸಂಚರಿಸಿ ವಿದ್ಯಾರ್ಥಿ ಸಮುದಾಯದ ಅಭಿಪ್ರಾಯಸಂಗ್ರಹಿಸುತ್ತಿದೆ. ಈಗಾಗಲೇ 17ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದಾಗಿ ತಿಳಿಸಿದರು.
ಅಹಮ್ಮದ್ ಹುಸೇನಖಾಜಿ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿಯ ಅರಿವು ಮೂಡಿಸುವ ಕಾರ್ಯ ಬರದಿಂದ ನಡೆದಿದೆ. ವಿದ್ಯಾರ್ಥಿ ಸಮುದಾಯ ತಮ್ಮ ಶೈಕ್ಷಣಿಕ ಸಮಸ್ಯೆಗಳನ್ನು ನಿರ್ಭಯವಾಗಿ ನಮ್ಮಲ್ಲಿಹಂಚಿಕೊಳ್ಳಬಹುದು. ವಿದ್ಯಾರ್ಥಿಗಳ ಹಿತ ಮತ್ತು ಅವರ ಸರ್ವತೋಮಖ ಬೆಳವಣಿಗೆಯೇ ಎನ್‌ಎಸ್‌ಯುಐ ಪ್ರಮುಖ ಗುರಿಯಾಗಿದೆ ಎಂದರು.
ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ರಾಜ್ಯ ಪದಾಧಿಕಾರಿ ರಫೀಕ, ಭರತರಾಮ, ಶಾರೂಖ್, ಒಕ್ಕೂಟ ಜಿಲ್ಲಾಧ್ಯಕ್ಷ ಅಹಮ್ಮದ ಹುಸೇನ ಖಾಜಿ, ರೋಹಿತ ಇದ್ದರು.