Advertisement
ಶುಕ್ರವಾರ ಜನತಾಬಜಾರ್ ಸಭಾಂಗಣದಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಹಾಗೂ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ಸಹಯೋಗದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಸಾರ್ವಜನಿಕ ಬದುಕಿನಲ್ಲಿ ಎಲ್ಲರೂ ಗ್ರಾಹಕರೇ. ಯಾವುದೇ ವಸ್ತು ಕೊಂಡುಕೊಳ್ಳುವ ಮೊದಲು ಗ್ರಾಹಕರು ಗುಣಮಟ್ಟ ಉತ್ತಮ, ಯೋಗ್ಯವಾಗಿದೆಯೇ ಎಂಬುದನ್ನು ಪರಿಶೀಲಿಸಿಯೇ ಖರೀದಿಸಬೇಕು ಎಂದರು. ಗ್ರಾಹಕರು ಪಡೆಯುವ ಸೇವೆ, ಖರೀದಿಗೆ ಪ್ರತಿಯಾಗಿ ಬಿಲ್ ಅಥವಾ ರಸೀದಿ ತಪ್ಪದೆ ಕೇಳಿ ಪಡೆಯಬೇಕು. ಗ್ರಾಹಕರು ಎಚ್ಚರ ಆಗುವವರೆಗೂ ಅನ್ಯಾಯ, ಶೋಷಣೆ ಹಾಗೂ ಮೋಸ ನಿಲ್ಲುವುದಿಲ್ಲ. ವ್ಯಾಪಾರ, ಖರೀದಿ, ಸೇವೆ ಹೀಗೆ ವಿವಿಧ ವ್ಯವಹಾರಗಳಲ್ಲಿ ವಂಚನೆ, ಅನ್ಯಾಯ ಹಾಗೂ ಮೋಸಕ್ಕೆ ಒಳಗಾಗುವ ಗ್ರಾಹಕರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ದಾಖಲಿಸಿ ಪರಿಹಾರ ಪಡೆದುಕೊಳ್ಳಲು ಮುಂದಾಗಬೇಕು ಎಂದು ತಿಳಿಸಿದರು.
Related Articles
Advertisement
ಆಹಾರ ಇಲಾಖೆ ನಿವೃತ್ತ ವ್ಯವಸ್ಥಾಪಕ ಪಿ. ಅಂಜಿನಪ್ಪ ವಿಶೇಷ ಉಪನ್ಯಾಸ ನೀಡಿದರು. ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ಅಧ್ಯಕ್ಷೆ ಎಚ್. ಅನಿತಾ, ಆಹಾರ ಇಲಾಖೆ ಉಪನಿರ್ದೇಶಕ ಇಂದು ಕಡೇ ಕಾರ್ತಿಕೋತ್ಸವ ಬಿ.ಟಿ. ಪ್ರಕಾಶ್ ಇದ್ದರು.
ದೂರು ಸಲ್ಲಿಕೆಯೇ ಅಪರೂಪ
ದಾವಣಗೆರೆ ಜಿಲ್ಲೆಯಲ್ಲಿ ಗ್ರಾಹಕರಿಂದ ದೂರುಗಳು ಸಲ್ಲಿಕೆಯಾಗುವುದೇ ಅಪರೂಪವಾಗಿದೆ. ಅಂದಮಾತ್ರಕ್ಕೆ ಜಿಲ್ಲೆಯಲ್ಲಿ ಗ್ರಾಹಕರಿಗೆ ಮೋಸ, ವಂಚನೆ, ಶೋಷಣೆ ನಡೆಯುತ್ತಿಲ್ಲ ಎಂದು ಅರ್ಥವಲ್ಲ. ಯಾರೂ ಕೂಡ ದೂರು ಸಲ್ಲಿಸಲು, ತಮ್ಮ ಹಕ್ಕು ಚಲಾಯಿಸಲು ಮುಂದಾಗುತ್ತಿಲ್ಲ. ಪ್ರತಿಯೊಬ್ಬರೂ ತಮ್ಮ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಅನ್ಯಾಯ, ಮೋಸಕ್ಕೆ ಒಳಗಾದರೂ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಅಧ್ಯಕ್ಷ ಗೋಖಲೆ ಘಾಳಪ್ಪ ತಿಳಿಸಿದರು.
ಪರಿಹಾರ ಮಿತಿ ಹೆಚ್ಚಳ
ಗ್ರಾಹಕ ತನ್ನ ಗ್ರಾಹಕತ್ವ ಸಾಬೀತಿಗೆ ತಪ್ಪದೆ ರಸೀದಿ ಅಥವಾ ಬಿಲ್ ಪಡೆಯಲೇಬೇಕು. ಜಿಲ್ಲಾ ವ್ಯಾಪ್ತಿಯಲ್ಲಿ 20 ಸಾವಿರ ರೂಪಾಯಿ ಪರಿಹಾರದ ಮಿತಿಯನ್ನು ಇದೀಗ 1 ಕೋಟಿ ರೂಪಾಯಿಗೆ ಹೆಚ್ಚಿಸಲಾಗಿದೆ. ಇ-ಕಾಮರ್ಸ್, ಆನ್‌ಲೈ ನ್ ವ್ಯವಹಾರಗಳು ಕೂಡ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ವ್ಯಾಪ್ತಿಗೆ ಬರುತ್ತದೆ. ಗ್ರಾಹಕ ಮೋಸಕ್ಕೆ, ವಂಚನೆಗೆ ಒಳಗಾದ ಪ್ರಕರಣಕ್ಕೆ ಸಂಬಂ ಧಿಸಿದಂತೆ 2 ವರ್ಷಗಳ ಒಳಗೆ ಅಗತ್ಯ ದಾಖಲೆ, ಬಿಲ್, ರಸೀದಿಯೊಂದಿಗೆ ದೂರು ಸಲ್ಲಿಸಬೇಕು. ತಾವಿರುವ ವ್ಯಾಪ್ತಿಯಲ್ಲಿಯೇ ದೂರು ಸಲ್ಲಿಸಬಹುದಾಗಿದೆ ಎಂದು ಜ್ಯೋತಿ ರಾಧೇಶ್ ಜಂಬಗಿ ಮಾಹಿತಿ ನೀಡಿದರು.