Advertisement

ರಾಷ್ಟ್ರೀಯ ಸಮ್ಮೇಳನ ಸಮಾರೋಪ : “ಯುವಕರ ಕೈಯಲ್ಲಿ ಭಾರತದ ಭವಿಷ್ಯ’

07:15 AM Aug 07, 2017 | |

ಉಡುಪಿ: ದೇಶದಲ್ಲಿ ಅರ್ಧಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಯುವಕರಿದ್ದು, ಭವಿಷ್ಯದಲ್ಲಿ ಭಾರತ ಸೂಪರ್‌ ಪವರ್‌ ದೇಶವಾಗಲು ಯುವ ಸಮೂಹ ಸಾಥ್‌ ನೀಡಬೇಕಿದೆ. ಬಡತನ, ನಿರುದ್ಯೋಗ, ಅನಕ್ಷರತೆ, ಅಸಮಾನತೆಯಂತಹ ಸಮಸ್ಯೆಯಿಂದ ಮುಕ್ತವಾಗಲು ಯುವ ವೃಂದದ ಸಲಹೆ ಅತ್ಯಗತ್ಯವಾಗಿ ಬೇಕಿದೆ ಎಂದು ಅದಾನಿ ಯುಪಿಸಿಎಲ್‌ನ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್‌ ಆಳ್ವ ಹೇಳಿದರು.
 
ಮಣಿಪಾಲ ಕೆಎಂಸಿಯ ಡಾ|ಟಿಎಂಎ ಪೈ ಸಭಾಂಗಣದಲ್ಲಿ ಮಣಿಪಾಲ ವಿ.ವಿ. ವತಿಯಿಂದ ರವಿವಾರ ನಡೆದ “ಸಾಮಾಜಿಕ ಬದಲಾವಣೆಯಲ್ಲಿ ಯುವವೃಂದ’ ವಿಷಯ ಕುರಿತ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. 

Advertisement

ಕನ್ನಡ ಶಾಲೆಗಳಿಗೆ ನೆರವು
ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಯುವಕರ ಪಾತ್ರ ಮಹತ್ವದ್ದಾಗಿದೆ. ನಾಗರಿಕ ಸಮಾಜದ ಜವಾಬ್ದಾರಿಯನ್ನು ಅರಿತುಕೊಳ್ಳುವತ್ತ ಯುವ ಸಮೂಹ ಮುನ್ನಡೆಯಬೇಕು. ದೇಶದಲ್ಲಿರುವ ಕೆಳಹಂತದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಯುವಕರು ಮುಂದಾಗಬೇಕಿದೆ. ಸಮುದಾಯದ ಅಭಿವೃದ್ಧಿಗೆ ಅದಾನಿ ಯುಪಿಸಿಎಲ್‌ ಈಗಾಗಲೇ 650 ಕೋ. ರೂ. ಗೂ ಅಧಿಕ ಹಣವನ್ನು ನೀಡಲಾಗಿದೆ. ಕನ್ನಡ ಶಾಲೆಗಳನ್ನು ಅಭಿವೃದ್ಧಿಸುವ ನಿಟ್ಟಿನಲ್ಲಿ ನೆರವು ನೀಡಲಾಗುವುದು ಎಂದರು. 

ವಿ.ವಿ. ಕುಲಸಚಿವ ಡಾ| ನಾರಾಯಣ ಸಭಾಹಿತ್‌ ಮಾತನಾಡಿ ಶೇ. 60 ರಷ್ಟು 35 ವರ್ಷದೊಳಗಿನವರಿರುವ ಭಾರತ ಯುವರಾಷ್ಟ್ರವಾಗಿದೆ. ಯುವಕರ ಶಕ್ತಿ, ಸಾಮರ್ಥ್ಯ ಸಮರ್ಪಕ ರೀತಿಯಲ್ಲಿ ಸದುಪಯೋಗವಾಗಬೇಕಿದೆ. ಯುವ ಸಮೂಹ ಅವರ ಹೊಣೆಗಾರಿಕೆ ಅರಿತು ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕಿದೆ ಎಂದು ಕರೆ ನೀಡಿದರು. 

ಸಮಾಜದ ಅಭಿವೃದ್ಧಿಯಲ್ಲಿ ಯುವಕರು, ವಿದ್ಯಾರ್ಥಿಗಳನ್ನು ತೊಡಗಿಸುವುದು ಸದುದ್ದೇಶದಿಂದ ನಡೆದ ಸಮ್ಮೇಳನದಲ್ಲಿ ಸುಮಾರು 60 ವಿ.ವಿ. ಹಾಗೂ ಕಾಲೇಜುಗಳ 600 ಕ್ಕೂ ಅಧಿಕ ವಿದ್ಯಾರ್ಥಿಗಳು ಮತ್ತು ಸ್ವಯಂ ಸೇವಾ ಸಂಸ್ಥೆಯಲ್ಲಿ ತೊಡಗಿಸಿಕೊಂಡಿರುವ ಯುವಕರು ಪಾಲ್ಗೊಂಡಿದ್ದರು.ವೇದಿಕೆಯಲ್ಲಿ ಸಮ್ಮೇಳನದ ಸಂಚಾಲಕ ಡಾ| ಅನೂಪ್‌ ನಾಹ, ವಿದ್ಯಾರ್ಥಿ ಸಂಚಾಲಕ ನವನೀತ್‌ ಉಪಾಧ್ಯಾಯ ಉಪಸ್ಥಿತರಿದ್ದರು. ಸಹ ಸಂಚಾಲಕರಾದ ನಂದೀಶ್‌ ಸ್ವಾಗತಿಸಿದರು. ಪ್ರವೀಣ್‌ ಪ್ರಾಸ್ತವಿಕವಾಗಿ ಮಾತನಾಡಿದರು. 

Advertisement

Udayavani is now on Telegram. Click here to join our channel and stay updated with the latest news.

Next