Advertisement

ರಾಷ್ಟ್ರಮಟ್ಟದ ಸ್ಪರ್ಧೆ: ವಸಂತಾಗೆ 4ನೇ ಸ್ಥಾನ

12:40 PM Apr 15, 2017 | Team Udayavani |

ಹುಣಸೂರು: ರಾಜಸ್ಥಾನದ ಜೈಪುರದಲ್ಲಿ ನಡೆದ 17ನೇ ರಾಷ್ಟ್ರೀಯ “ವಿಕಲ ಚೇತನರ ಅಥ್ಲೆಟಿಕ್ಸ್‌ ಚಾಂಪಿಯನ್‌ ಸ್ಪರ್ಧೆಯ ಶಾಟ್‌ಪುಟ್‌” ವಿಭಾಗದಲ್ಲಿ ಹುಣಸೂರಿನ “ವಿಕಲಚೇತನ ವಸಂತಾ ಎಂಬ ಯುವತಿ ಕರ್ನಾಟಕದಿಂದ ಪ್ರತಿನಿಧಿಸಿ ನಾಲ್ಕನೇ ಸ್ಥಾನ ಪಡೆದಿದ್ದಾರೆ.

Advertisement

ನಗರದ ಸದಾಶಿವ ಕೊಪ್ಪಲಿನ ನಿವಾಸಿ ಕರಿಯಯ್ಯ – ಜಯಮ್ಮ ದಂಪತಿಗಳ ಪುತ್ರಿ. ಇವರು ತಾಲೂಕು ಮತ್ತು ಜಿಲ್ಲಾ ಮಟ್ಟದ ಸ್ಪರ್ಧೆ ಯಲ್ಲಿ ಶಾಟ್‌ಪುಟ್‌ ಮತ್ತು ಜಾವಲಿನ್‌ ಎಸೆತದಲ್ಲಿ ಪ್ರಥಮ ಹಾಗೂ ರಾಜ್ಯ ಮಟ್ಟದಲ್ಲಿ ದ್ವಿತೀಯ ಸ್ಥಾನಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆ ಯಾಗಿ ಕರ್ನಾಟಕ ಪ್ರತಿನಿಧಿಸಿದ್ದರು.

ತರಬೇತಿ, ಪ್ರಯಾಣ ವೆಚ್ಚಕ್ಕೆ ಪರದಾಟ: ಹಾಲಿ ನಗರ ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತಿರುವ ಈಕೆಯ ಮನೆಯಲ್ಲಿ ಕಿತ್ತು ತಿನ್ನುವ ಬಡತನದ ನಡುವೆಯೂ ರಾಜ್ಯ ತಂಡ ಪ್ರತಿನಿಧಿಸಿದ್ದ ಇವರಿಗೆ ಮೈಸೂರಿನಲ್ಲಿ ಶಿಕ್ಷಕರಾದ ಮಂಜುನಾಥ್‌ ಹಾಗೂ ರಾಮಚಂದ್ರಯ್ಯ ತರಬೇತಿ ನೀಡಿದರೂ ಅಲ್ಲಿಗೆ ತೆರಳಲು ಪ್ರಯಾಣ ವೆಚ್ಚ ಭರಿಸಲಾರದೆ ಪರಿತಪಿಸಿದರೆ, ರಾಜ್ಯ ಹಾಗೂ ಹೈದರಾಬಾದ್‌ ಹಾಗೂ ರಾಜಸ್ಥಾನದಲ್ಲಿ ನಡೆದ ಸ್ಪರ್ಧೆಗೆ ಬಡತನದ ನಡುವೆಯೇ ತಾವೇ ಪ್ರಯಾಣವೆಚ್ಚ ಭರಿಸಿದ್ದಾರೆ.

ತಂದೆ ಸಹ “ವಿಕಲಚೇತನರಾಗಿದ್ದು ಕೂಲಿ ಕೆಲಸ ಮಾಡಿ ಕುಟುಂಬ ನಿರ್ವಹಣೆ ಮಾಡಬೇಕಿದೆ”. ಸರಿಯಾದ ತರಬೇತಿ ಹಾಗೂ ನೆರವು ಸಿಕ್ಕಿದ್ದಲ್ಲಿ ಮತ್ತಷ್ಟು ಸಾಧನೆಗೆ ಅವಕಾಶ ಸಿಗುತ್ತಿತ್ತು. ಮುಂದಾದರೂ ಸರಕಾರ “ವಿಕಲಚೇತನ ಕ್ರೀಡಾಪಟುಗಳ ನೆರವಿಗೆ” ಬರಲಿ ಎಂಬುದು ವಸಂತ ಅವರ ಅಭಿಪ್ರಾಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next