Advertisement

National ಬಾಲ್‌ ಬ್ಯಾಡ್ಮಿಂಟನ್‌: ಕರ್ನಾಟಕಕ್ಕೆ ಪ್ರಶಸ್ತಿ

12:12 AM Jan 12, 2024 | Team Udayavani |

ಮೂಡುಬಿದಿರೆ: ಮಹಾ ರಾಷ್ಟ್ರದ ಗಡ್ಚಿರೋಲಿಯಲ್ಲಿ ನಡೆದ 69ನೇ ಮಹಿಳೆಯರ ಹಿರಿಯ ರಾಷ್ಟ್ರೀಯ ಬಾಲ್‌ ಬ್ಯಾಡ್ಮಿಂಟನ್‌ ಪಂದ್ಯಾಟದಲ್ಲಿ ಕರ್ನಾಟಕ ತಂಡವು ಪ್ರಶಸ್ತಿ ಗೆದ್ದುಕೊಂಡಿದೆ. ರಾಜ್ಯ ತಂಡವನ್ನು ಪ್ರತಿನಿಧಿಸಿದ 10 ಆಟಗಾರರ ಪೈಕಿ 8 ಮಂದಿ ಆಳ್ವಾಸ್‌ ಕಾಲೇಜಿನ ವಿದ್ಯಾರ್ಥಿನಿಯರಾಗಿದ್ದಾರೆ.

Advertisement

ರಾಜ್ಯ ತಂಡವನ್ನು ಆಳ್ವಾಸ್‌ನ ದಿವ್ಯಾ ಎಂ. ಮುನ್ನಡೆಸಿದ್ದರು. ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರ್ತಿಯರಿಗೆ ಕೊಡುವ “ಸ್ಟಾರ್‌ ಆಫ್‌ ಇಂಡಿಯಾ’ ಪ್ರಶಸ್ತಿಯನ್ನು ಆಳ್ವಾಸ್‌ನ ಪಲ್ಲವಿ ಬಿ.ಎಸ್‌., ಸಹನಾ ಎಚ್‌. ವೈ. ಗೆದ್ದಿದ್ದಾರೆ.

ಕರ್ನಾಟಕವು ಸೆಮಿಫೈನಲ್‌ನಲ್ಲಿ 35- 11, 35-16 ಅಂಕಗಳಿಂದ ಕೇರಳ ತಂಡವನ್ನು ಸೋಲಿಸಿದ್ದು ಫೈನಲ್‌ನಲ್ಲಿ ತಮಿಳುನಾಡು ತಂಡವನ್ನು 35-29, 35-26 ಅಂಕಗಳ ನೇರ ಸೆಟ್‌ಗಳಿಂದ ಮಣಿಸಿ ಪ್ರಶಸ್ತಿ ಜಯಿಸಿತ್ತು.
ಕರ್ನಾಟಕ ತಂಡ ಗೆಲುವು ಸಾಧಿಸು ವಲ್ಲಿ ಆಳ್ವಾಸ್‌ ಆಟಗಾರ್ತಿಯರು ಪ್ರಮುಖ ಪಾತ್ರ ವಹಿಸಿದಕ್ಕೆ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next