Advertisement

ರಾಷ್ಟ್ರೀಯ ಬ್ಯಾಡ್ಮಿಂಟನ್‌ ಸೈನಾ-ಸಿಂಧು ಫೈನಲ್‌

12:30 AM Feb 16, 2019 | Team Udayavani |

ಗುವಾಹಟಿ: ಪಿ.ವಿ. ಸಿಂಧು ಹಾಗೂ ಸೈನಾ ನೆಹ್ವಾಲ್‌ “ಸೀನಿಯರ್‌ ಬ್ಯಾಶನಲ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌’ ಕೂಟದ ಸೆಮಿಫೈನಲ್‌ ಪಂದ್ಯಗಳನ್ನು ಜಯಿಸಿದ್ದು, ಶನಿವಾರ ನಡೆಯಲಿರುವ ಫೈನಲ್‌ನಲ್ಲಿ ಮುಖಾಮುಖೀಯಾಗಲಿದ್ದಾರೆ. ಶುಕ್ರವಾರ ನಡೆದ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಸಿಂಧು ಅಸ್ಸಾಂನ 19ರ ಅಶ್ಮಿತಾ ಚಲಿಹಾ ಅವರನ್ನು 21-10, 22-20 ಅಂತರದಿಂದ ಸೋಲಿಸಿದರು. ಇನ್ನೊಂದು ಪಂದ್ಯದಲ್ಲಿ ಸೈನಾ ನೆಹ್ವಾಲ್‌ ನಾಗ್ಪುರದ ಅರ್ಹತಾ ಆಟಗಾರ್ತಿ ವೈಷ್ಣವಿ ಭಾಲೆ ವಿರುದ್ಧ 21-15, 21-14 ಗೇಮ್‌ಗಳಿಂದ ಜಯ ಸಾಧಿಸಿದರು. ಕಳೆದ ವರ್ಷ ನಾಗ್ಪುರದಲ್ಲಿ ನಡೆದ ರಾಷ್ಟ್ರೀಯ ಬ್ಯಾಡ್ಮಿಂಟನ್‌ ಫೈನಲ್‌ನಲ್ಲಿ ಸಿಂಧು-ಸೈನಾ ಅವರೇ ಮುಖಾಮುಖೀಯಾಗಿದ್ದರು. ಇದರಲ್ಲಿ ಸೈನಾ ಜಯ ಸಾಧಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next