ಮುಂಬಯಿ :
’64 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ’ ಪ್ರಕಟವಾಗಿದ್ದು,
‘ಅಕ್ಷಯ್ ಕುಮಾರ್’ ಅವರು
‘ರುಸ್ತುಂ’ ಚಿತ್ರಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದರೆ, ಮಲಯಾಳಂ ನಟಿ
‘ಸುರಭಿ ಸಿ.ಎಂ’ ಅವರು ‘
ಮುನ್ನಮಿನುಂಗು’ ಚಿತ್ರಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ.
‘ರಾಮ್ ಮಾಧವಾಗಿ’ ನಿರ್ದೇಶನದ
‘ಸೋನಮ್ ಕಪೂರ್’ ಅಭಿನಯದ
‘ನೀರ್ಜಾ‘ ಅತ್ಯುತ್ತಮ ಚಿತ್ರ ಪ್ರಶಸ್ತಿ ಯೊಂದಿಗೆ ವಿಶೇಷ ಆಯ್ಕೆಯ ಪ್ರಶಸ್ತಿಯನ್ನೂ ತನ್ನದಾಗಿಸಿಕೊಂಡಿದೆ.
‘ರಿಜರ್ಸ್‌ವೇಷನ್’ ಅತ್ಯುತ್ತಮ ಕನ್ನಡ ಚಲನಚಿತ್ರ ಪ್ರಶಸ್ತಿ ಬಾಚಿಕೊಂಡಿದ್ದು,
‘ಅಲ್ಲಮ’ ಚಿತ್ರದ ಮೇಕಿಂಗ್‌ಗಾಗಿ ಪ್ರಶಸ್ತಿ ಲಭ್ಯವಾಗಿದೆ.
‘ದಂಗಲ್’ನಲ್ಲಿ ಗೀತಾ ಪೋಗಟ್ ಪಾತ್ರದಲ್ಲಿ ಕಾಣಿಸಿಕೊಂಡ ಬಾಲನಟಿ
‘ಝೈರಾ ವಾಸಿಮ್’ಗೆ ಅತ್ಯುತ್ತಮ ಸಹಾಯಕ ನಟಿ ಪ್ರಶಸ್ತಿ ಲಭಿಸಿದೆ.
ಸಾಮಾಜಿಕ ಸಂದೇಶ ನೀಡುವ ವಿಭಾಗದಲ್ಲಿ
‘ಅಮಿತಾಭ್ ಬಚ್ಚನ್’ ಮತ್ತು
‘ತಾಪ್‌ಸಿ ಪನ್ನು’ ಅಭಿನಯದ
‘ಪಿಂಕ್’ ಚಿತ್ರ ಪ್ರಶಸ್ತಿ ಪಡೆದಿದೆ.
‘ದಶಾಕ್ರಿಯ’ ಅತ್ಯುತ್ತಮ ಮರಾಠಿ ಚಿತ್ರ,
‘ಬಿಸರ್ಜನ್’ ಅತ್ಯುತ್ತಮ ಬಂಗಾಲಿ ಚಿತ್ರ, ‘
ನಾಗೇಶ್ ಕುಕನೂರ್’ ಅವರ
‘ಧನಕ್’ ಅತ್ಯುತ್ತಮ ಮಕ್ಕಳ ಪ್ರಶಸ್ತಿ ಪಡೆದಿದೆ.
ಮರಾಠಿ ಚಿತ್ರ
‘ವೆಂಟಿಲೇಟರ್’ ನಿರ್ದೇಶನಕ್ಕಾಗಿ
‘ರಾಜೇಶ್ ಮಾಪುಸ್ಕಾ’ ಅವರು ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.