Advertisement

ಯುವದೇಶದ ಪಟ್ಟ ಇರುವಾಗಲೇ ಸದ್ಬಳಕೆ: ಜಿಲ್ಲಾಧಿಕಾರಿ ಜಗದೀಶ್‌ ಕರೆ

02:11 AM Jan 13, 2021 | Team Udayavani |

ಉಡುಪಿ: ಯುವಕರ ದೇಶ ಎಂದು ಕರೆದುಕೊಳ್ಳುವ ಭಾರತ ಈ ಪಟ್ಟವನ್ನು ಕಳೆದುಕೊಳ್ಳುವ ಮುನ್ನ ಸಾರ್ಥಕಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ಕರೆ ನೀಡಿದರು.

Advertisement

ಜಿಲ್ಲಾಡಳಿತ, ಜಿ.ಪಂ. ಯುವ ಸಬಲೀಕರಣ-ಕ್ರೀಡಾ ಇಲಾಖೆ, ಎಂಜಿಎಂ ಕಾಲೇಜು, ಅಜ್ಜರಕಾಡು ಮಹಿಳಾ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಎಂಜಿಎಂ ಕಾಲೇಜಿನಲ್ಲಿ ನಡೆದ ಸ್ವಾಮಿ ವಿವೇಕಾನಂದ ಜಯಂತಿ, ರಾಷ್ಟ್ರೀಯ ಯುವ ದಿನ, ಮೌಲಿಕ ಶಿಕ್ಷಣ ಶಿಬಿರದ ಪ್ರಾರಂಭೋತ್ಸವ, ಪುಸ್ತಕ ಬಿಡುಗಡೆ, ವಿವೇಕಾನಂದ ಚಿಂತನ ವೇದಿಕೆಗೆ ಚಾಲನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಯುವಕರಿಗೆ ಸ್ಫೂರ್ತಿ :

ಯುವಕರಿಗೆ “ಆತ್ಮ ನಿರ್ಭರ ಭಾರತ್‌’ನಡಿ ಸ್ಫೂರ್ತಿ ನೀಡಲು ಸರಕಾರ ಯೋಜನೆಗಳನ್ನು ಹಾಕಿ ಕೊಂಡಿದೆ ಎಂದು ಕಾರ್ಯಕ್ರಮ ಉದ್ಘಾಟಿಸಿದ ಜಿ.ಪಂ. ಅಧ್ಯಕ್ಷ ದಿನಕರ ಬಾಬು ಹೇಳಿದರು.

ನಗರಸಭಾಧ್ಯಕ್ಷೆ ಸುಮಿತ್ರಾ ನಾಯಕ್‌, ನಗರಾಭಿವೃದ್ಧಿ ಪ್ರಾಧಿ ಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ಅಜ್ಜರಕಾಡು ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ| ಭಾಸ್ಕರ ಶೆಟ್ಟಿ, ಎಂಜಿಎಂ ಪ.ಪೂ. ಕಾಲೇಜು ಪ್ರಾಂಶುಪಾಲೆ ಮಾಲತಿದೇವಿ ಉಪಸ್ಥಿತರಿದ್ದರು.

Advertisement

ಯುವಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕ ಡಾ| ರೋಶನ್‌ ಕುಮಾರ್‌ ಶೆಟ್ಟಿ ಸ್ವಾಗತಿಸಿ, ವಿವೇಕಾನಂದ ಚಿಂತನ ವೇದಿಕೆ ಸಂಚಾಲಕ ಯು. ವಿನೀತ್‌ ರಾವ್‌ ಪ್ರಸ್ತಾವನೆಗೈದರು. ಎಂಜಿಎಂ ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಚಾಲಕ ಪ್ರೊ| ಅರುಣ ಕುಮಾರ್‌ ವಂದಿಸಿದರು. ಉಪನ್ಯಾಸಕ ಸುಚಿತ್‌ ಕೋಟ್ಯಾನ್‌ ನಿರ್ವಹಿಸಿದರು.

ಮುನಿರಾಜ ರೆಂಜಾಳ, ಜಿ.ಎಸ್‌. ನಟೇಶ್‌, ನಟ ಓಂ ಗಣೇಶ್‌ ಉಪನ್ಯಾಸ ನೀಡಿದರು. ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ| ಜಗದೀಶ ಶೆಟ್ಟಿ ಸಮಾರೋಪ ಭಾಷಣ ಮಾಡಿದರು.

ಪ್ಲಾಸ್ಟಿಕ್‌ ಬೇಡ :

ಅತಿಥಿಗಳಿಗೆ ಪ್ಲಾಸ್ಟಿಕ್‌ ಹೊದಿಕೆ ಇರುವ ಹೂಗುತ್ಛವನ್ನು ನೀಡಿದಾಗ ಜಿಲ್ಲಾಧಿಕಾರಿಯವರು ಪ್ಲಾಸ್ಟಿಕ್‌ ಹೊದಿಕೆ ಇಲ್ಲದ ಹೂವುಗಳನ್ನು ಮಾತ್ರ ನೀಡಿ ಎಂದು ಸಲಹೆ ನೀಡಿದರು.

ವೈಜ್ಞಾನಿಕತೆಯ ಅರಿವು ಅಗತ್ಯ: ಡಾ| ಸಂಧ್ಯಾ ಪೈ  :

ನಾನು ಯಾರು? ನನ್ನ ಶಕ್ತಿ ಏನು? ಜೀವನದ ಗುರಿ ಏನು? ಎಂಬ ಪ್ರಶ್ನೆಗಳಿಂದ ವಿವೇಕಾನಂದರು ಆ ಮಟ್ಟಕ್ಕೆ ಏರಿದರು. ಎಲ್ಲರಿಂದಲೂ ಇದು ಸಾಧ್ಯ. ಪರಕೀಯರ ದಾಸ್ಯದಲ್ಲಿದ್ದ ಕಾರಣ ನಮ್ಮ ಮನಸ್ಸೂ ದಾಸ್ಯದಲ್ಲಿದೆ. ಪ್ರಾಚೀನ ಸಂಪ್ರದಾಯದ ಹಿಂದಿರುವ ವೈಜ್ಞಾನಿಕ, ವೈಚಾರಿಕತೆಯನ್ನು ನಾವು ಶೋಧಿಸಬೇಕಾಗಿದೆ. ನಮ್ಮತನದ ಮಾರ್ಗದರ್ಶನವನ್ನು ಮಕ್ಕಳಿಗೆ ಮಾಡಿದರೆ ಭಾರತ ತಲೆ ಎತ್ತಿ ನಿಲ್ಲಬಹುದು. ಇದುವೇ ವಿವೇಕಾನಂದರ ಆಶಯವಾಗಿತ್ತು ಎಂದು “ತರಂಗ’ ವಾರ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್‌. ಪೈ ಹೇಳಿದರು. ಅವರು ಎಂಜಿಎಂ ಕಾಲೇಜಿನ ಪ್ರಾಂಶುಪಾಲ

ಡಾ| ದೇವಿದಾಸ ಎಸ್‌. ನಾಯ್ಕ ಕೂಜಳ್ಳಿ ಅವರ ಮೌಲಿಕ ಶಿಕ್ಷಣ ಕುರಿತ ಕೃತಿ “ಅಮೃತ ಬಿಂದು’ವನ್ನು ಬಿಡುಗಡೆಗೊಳಿಸಿ ಮಾತನಾಡಿದರು.

 

ನ್ಯಾಯಮಾರ್ಗದ ಸೋಲು ಮೇಲು :

ಸನ್ನಡತೆ ಆಧಾರಿತ ಸಮಾಜ ನಿರ್ಮಾಣವಾಗಬೇಕು ಎಂಬುದು ವಿವೇಕಾನಂದರ ಆಶಯವಾಗಿತ್ತು. ನಾವು ಸ್ವಾಭಿಮಾನಿಗಳಾಗಬೇಕು ಎಂದು ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ಧ್ವನಿ ಸಂದೇಶದಲ್ಲಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next